• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಸಚಿವರಿಗೆ ಓದಲೂ ಬರುವುದಿಲ್ಲ, ಬರೆಯಲೂ ಬರುವುದಿಲ್ಲ!

|
   ಈ ಸಚಿವರಿಗೆ ಓದಲೂ ಬರುವುದಿಲ್ಲ, ಬರೆಯಲೂ ಬರುವುದಿಲ್ಲ! | Oneindia Kannada

   ರಾಯ್ಪುರ, ಡಿಸೆಂಬರ್ 26: ಅನಕ್ಷರಸ್ಥ ರಾಜಕಾರಣಿಗಳೇ ನಮ್ಮನ್ನು ಆಳುವುದು ಎಂಬ ಮಾತು ಇಂದಿಗೂ ಸತ್ಯ. ಹೈಸ್ಕೂಲು ಶಿಕ್ಷಣ ಕೂಟ ಪೂರೈಸದವರೂ ಶಿಕ್ಷಣ ಮಂತ್ರಿಗಳಾದ ಉದಾಹರಣೆಗಳು ನಮ್ಮ ಮುಂದಿವೆ.

   ಕರ್ನಾಟಕದ ಸಚಿವ ಸಂಪುಟದಲ್ಲಿಯೂ ಇರುವ ಉನ್ನತ ವಿದ್ಯಾಭ್ಯಾಸ ಪಡೆದ ಸಚಿವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಹೆಚ್ಚಿನವರು ಪ್ರೌಢಶಿಕ್ಷಣವನ್ನೂ ಪೂರೈಸಿಲ್ಲ.

   ಇತ್ತೀಚೆಗಷ್ಟೇ ಬಿಜೆಪಿ ವಿರುದ್ಧ ಭರ್ಜರಿ ಗೆಲುವು ಕಾಣುವ ಮೂಲಕ ಅಧಿಕಾರಕ್ಕೆ ಬಂದ ಛತ್ತೀಸಗಡದಲ್ಲಿನ ಕಾಂಗ್ರೆಸ್ ಸರ್ಕಾರದಲ್ಲಿಯೂ ಇಂತಹ ಸಚಿವರಿದ್ದಾರೆ.

   ಛತ್ತೀಸ್ ಗಢ ಸಿಎಂ ಆಗಿ ಭೂಪೇಶ್ ಬಘೇಲ್ ಪ್ರಮಾಣ ವಚನ

   ಸತತವಾಗಿ ಮೂರು ಅವಧಿಗಳಲ್ಲಿ ಸರ್ಕಾರ ರಚಿಸಿದ್ದ ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕಿಳಿಸಿ ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದೆ. ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಮಂಗಳವಾರ ತಮ್ಮ ಸಂಪುಟವನ್ನು ಮೊದಲ ಬಾರಿಗೆ ವಿಸ್ತರಿಸಿದ್ದಾರೆ.

   ಸೆಕ್ಸ್ ಸಿಡಿ ಹಗರಣದ ಆರೋಪಿ ಈಗ ಸಿಎಂಗೆ ರಾಜಕೀಯ ಸಲಹೆಗಾರ

   90 ಸೀಟುಗಳಿರುವ ಛತ್ತೀಸ್ ಗಡದಲ್ಲಿ ಕಾಂಗ್ರೆಸ್ 68ರಲ್ಲಿ ಗೆದ್ದಿದ್ದರೆ, ಸತತ ಮೂರು ಅವಧಿಗಳಿಂದ ಅಧಿಕಾರದಲ್ಲಿದ್ದ ಬಿಜೆಪಿ, ಕೇವಲ 15 ಸೀಟುಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

   ಸಂಪುಟ ವಿಸ್ತರಣೆ

   ಸಂಪುಟ ವಿಸ್ತರಣೆ

   ಛತ್ತೀಸ್ ಗಡದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಒಂಬತ್ತು ಕಾಂಗ್ರೆಸ್ ಶಾಸಕರನ್ನು ಒಳಗೊಂಡಂತೆ ಮೊದಲ ಸಚಿವ ಸಂಪುಟ ವಿಸ್ತರಣೆಯನ್ನು ಮಂಗಳವಾರ ಮಾಡಿದ್ದಾರೆ. ಇದರಲ್ಲಿ ಒಬ್ಬ ಮಹಿಳಾ ಪ್ರತಿನಿಧಿಯೂ ಇದ್ದಾರೆ. ಈ ಮೂಲಕ ಛತ್ತೀಸ್ ಗಡದ ಬಾಘೇಲ್ ಸರ್ಕಾರದ ಸಂಪುಟದ ಬಲ 12ಕ್ಕೆ ಏರಿದೆ. ರಾಯ್ಪುರ ಪೊಲೀಸ್ ಪೆರೇಡ್ ಮೈದಾನದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ರಾಜ್ಯಪಾಲೆ ಆನಂದಿಬೆನ್ ಪಟೇಲ್ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

   ನಕ್ಸಲ್ ದಾಳಿಯಲ್ಲಿ ಬದುಕುಳಿದಿದ್ದರು

   ನಕ್ಸಲ್ ದಾಳಿಯಲ್ಲಿ ಬದುಕುಳಿದಿದ್ದರು

   ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ ಒಂಬತ್ತು ಶಾಸಕರಲ್ಲಿ ಕೊಂಟಾ ವಿಧಾನಸಭೆ ಕ್ಷೇತ್ರದ ಶಾಸಕ ಕವಾಸಿ ಲಖ್ಮಾ ಒಬ್ಬರು. 2013ರಲ್ಲಿ ಸುಕ್ಮಾ ಜಿಲ್ಲೆಯ ದರ್ಭಾ ಕಣಿವೆಯಲ್ಲಿ ಕಾಂಗ್ರೆಸ್ ಸಮಾವೇಶದ ಮೇಲೆ ನಡೆದ ನಕ್ಸಲರ ದಾಳಿಯಲ್ಲಿ ಜೀವ ಉಳಿಸಿಕೊಂಡವರಲ್ಲಿ ಲಖ್ಮಾ ಸೇರಿದ್ದರು. ಈ ದಾಳಿಯಲ್ಲಿ 27 ಮಂದಿ ಮೃತಪಟ್ಟಿದ್ದರು. ಘಟನೆಯಲ್ಲಿ ಮಾಜಿ ಸಚಿವ ಮಹೇಂದ್ರ ಕರ್ಮಾ ಮತ್ತು ಛತ್ತೀಸ್ ಗಡ ಕಾಂಗ್ರೆಸ್ ಮುಖ್ಯಸ್ಥ ನಂದಕುಮಾರ್ ಪಟೇಲ್ ಹಾಗೂ ವಿದ್ಯಾ ಚರಣ್ ಶುಕ್ಲಾ ಬಲಿಯಾಗಿದ್ದರು.

   ವ್ಯಕ್ತಿಚಿತ್ರ : ಛತ್ತೀಸ್ ಗಡದ ಕಾಂಗ್ರೆಸ್ಸಿನ ನೇತಾರ ಸಿಎಂ ಭೂಪೇಶ್ ಬಘೇಲ್

   ರಾಜ್ಯಪಾಲರು ಹೇಳಿದ್ದನ್ನೇ ಹೇಳಿದರು

   ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ಲಖ್ಮಾ ಅವರಿಗೆ ಪ್ರಮಾಣವಚನ ಬೋಧಿಸಿದರು. ಆಗ ಶಾಸಕ ಲಖ್ಮಾ, ತಮ್ಮ ಕೈಯಲ್ಲಿದ್ದ ಪ್ರಮಾಣವಚನದ ಬರಹದ ಕಾಗದದ ಕಡೆ ನೋಡಲೂ ಹೋಗಲಿಲ್ಲ. ತಮ್ಮ ಪರವಾಗಿ ಆನಂದಿಬೆನ್ ಪಟೇಲ್ ಹೇಳಿದ್ದನ್ನೇ ಪುನರುಚ್ಚರಿಸಿದರು. ಏಕೆಂದರೆ, ಬಾಲ್ಯದಿಂದಲೇ ಅವರು ಶಿಕ್ಷಣದಿಂದ ವಂಚಿತರಾಗಿದ್ದರು. ಹೀಗಾಗಿ ಅವರಿಗೆ ಓದಲು ಮತ್ತು ಬರೆಯಲು ಬರುವುದಿಲ್ಲ.

   ಬಡಕುಟುಂಬದಲ್ಲಿ ಜನನ

   ನಾನು ಬಡಕುಟುಂಬದಲ್ಲಿ ಜನಿಸಿದವನು. ಹೀಗಾಗಿ ಶಾಲೆಗೆ ಹೋಗಿರಲಿಲ್ಲ. ಆದರೂ ದೇಶದ ಅತಿದೊಡ್ಡ ಪಕ್ಷವು ನನಗೆ ಸ್ಪರ್ಧಿಸಲು ಟಿಕೆಟ್ ನೀಡಿತು. ಉದ್ಯಮ ವರ್ಗ, ಬಡವರು ಮತ್ತು ಯುವಜನರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರೂ ನನಗೆ ತುಂಬಾ ಪ್ರೀತಿ ನೀಡಿದ್ದಾರೆ. ನಾನು ಔಪಚಾರಿಕ ಶಿಕ್ಷಣದಿಂದ ವಂಚಿತನಾದರೂ ಸಚಿವನಾಗಿದ್ದೇನೆ. ನಾನು ಬಡವರ ಬೆಂಬಲದೊಂದಿಗೆ ಅವರಿಗಾಗಿ ಕೆಲಸ ಮಾಡುತ್ತೇನೆ ಎಂದು ಲಖ್ಮಾ ಹೇಳಿದ್ದಾರೆ.

   ಐದು ಬಾರಿ ಸತತ ಗೆಲುವು

   ಕೊಂಟಾ ಕ್ಷೇತ್ರದ ಬುಡಕಟ್ಟು ಸಮುದಾಯದವರಾದ ಲಖ್ಮಾ, ಛತ್ತೀಸ್ ಗಡವು ಮಧ್ಯಪ್ರದೇಶ ರಾಜ್ಯದ ಭಾಗವಾಗಿದ್ದ ಸಂದರ್ಭದಲ್ಲಿ 1998ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಗೆದ್ದಿದ್ದರು. ಅಲ್ಲಿಂದ ಇಲ್ಲಿಯವರೆಗೂ ಒಮ್ಮೆಯೂ ಅವರು ಸೋಲು ಕಂಡಿಲ್ಲ. 2003, 2008, 2013 ಮತ್ತು 2018ರಲ್ಲಿ ಅವರು ಸತತವಾಗಿ ಮರು ಆಯ್ಕೆಯಾಗಿದ್ದಾರೆ.

   'ದೇವರು ಬುದ್ಧಿ ಕೊಟ್ಟಿದ್ದಾನೆ'

   ಸಚಿವರಾಗಿ ಕಡತಗಳನ್ನು ಓದದೆ ಹೇಗೆ ಸಹಿ ಹಾಕುತ್ತೀರಿ ಎಂಬ ಪ್ರಶ್ನೆಗೆ ಅವರು, 'ದೇವರು ನನಗೆ ಬುದ್ಧಿ ನೀಡಿದ್ದಾನೆ. ಎರಡು ದಶಕಗಳಿಂದ ಶಾಸಕನಾಗಿ ಹೇಗೆ ಅದನ್ನು ಬಳಸಿಕೊಂಡಿದ್ದೇನೆಯೋ ಹಾಗೆಯೇ ಬಳಸಿಕೊಳ್ಳುತ್ತೇನೆ' ಎಂದು ಪ್ರತಿಕ್ರಿಯಿಸಿದ್ದಾರೆ.

   'ಕಳೆದ 20 ವರ್ಷಗಳಿಂದ ಶಾಸಕನಾಗಿದ್ದೇನೆ. ನನ್ನ ಮೇಲೆ ಎಂದಿಗೂ ಭ್ರಷ್ಟಾಚಾರ ಅಥವಾ ಅಪ್ರಮಾಣಿಕತೆಯ ಆರೋಪ ಬಂದಿಲ್ಲ. ಸಚಿವನಾಗಿ ನಾನು ಸಮಗ್ರತೆಯೊಂದಿಗೆ ನನ್ನ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದೇನೆ ಎಂಬ ನಂಬಿಕೆ ಇದೆ' ಎಂದು ಲಖ್ಮಾ ತಿಳಿಸಿದ್ದಾರೆ.

   English summary
   Chhattisgarh Cheif Minister Bhupesh Baghel on Tuesday expanded his cabinet to 12 by inducting 9 MLAs. Kawasi Lakhma a MLA from Konta constituency who cannot read or write was also sworn as minister.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X