ಹಾವು & ಏಣಿ ಆಟ: ಛತ್ತೀಸ್‌ಗಢ ಸಿಎಂ & ಕಾಂಗ್ರೆಸ್ ಅಭ್ಯರ್ಥಿ ಬಘೇಲ್‌ಗೆ ಭಾರಿ ಹಿನ್ನಡೆ!
ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸುತ್ತೆ ಅನ್ನೋ ಕಾಂಗ್ರೆಸ್ ನಾಯಕರ ನಂಬಿಕೆ ಹುಸಿಯಾಗುತ್ತಿದೆ. ಈಗಾಗಲೇ ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳಲ್ಲಿ ಕಾಂಗ್ರೆಸ್ ಬಹುತೇಕ ಸೋಲನ್ನು ಕಂಡಿದೆ. ಅಧಿಕೃತವಾಗಿ ಸೋಲು ಘೋಷಣೆ ಆಗಬೇಕಿದೆ ಅಷ್ಟೇ. ಹೀಗಿದ್ದಾಗ ಮತ್ತೊಂದು ರಾಜ್ಯದಲ್ಲೂ, ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವುದು ಬಹುತೇಕ ಗ್ಯಾರಂಟಿ ಆಗುತ್ತಿದೆ. ಹಾಗಾದರೆ ಯಾವುದು ಆ ರಾಜ್ಯ?
ಬೆಳಗ್ಗೆ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಬಿಜೆಪಿ 37 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 46 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಈಗ ದಿಢೀರ್ ಎಲ್ಲಾ ಬದಲಾಗಿದ್ದು, ಕಾಂಗ್ರೆಸ್ ಛತ್ತೀಸ್‌ಗಢ ವಿಧಾನಸಭೆ ಫಲಿತಾಂಶದಲ್ಲಿ ಹಿಂದೆ ಬೀಳುತ್ತಿದೆ.

ಹೀಗೆ ಬಿಜೆಪಿ ಛತ್ತೀಸ್‌ಗಢದಲ್ಲಿ ಮತ್ತೆ ಅಧಿಕಾರ ಹಿಡಿಯುವ ಮುನ್ಸೂಚನೆಯು ಸಿಕ್ಕಿದೆ. ಹಾಗಾದರೆ ಈಗಿನ ಮಾಹಿತಿ ಪ್ರಕಾರ ಬಿಜೆಪಿ ಎಷ್ಟು ಸ್ಥಾನದಲ್ಲಿ ಮುಂದೆ ಇದೆ..? ಹಾಗೇ ಕಾಂಗ್ರೆಸ್ ಎಷ್ಟು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ?
ಸ್ವತಃ ಮುಖ್ಯಮಂತ್ರಿಗೆ ಭಾರಿ ಹಿನ್ನಡೆ!
ಛತ್ತೀಸ್‌ಗಢ ರಾಜ್ಯದಲ್ಲಿ ಹಾಲಿ ಸಿಎಂ ಮತ್ತು ಕಾಂಗ್ರೆಸ್ ಅಭ್ಯರ್ಥಿ ಭೂಪೇಶ್ ಬಘೇಲ್ 407 ಮತಗಳ ಅಂತರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಈಗಾಗಲೇ ಬಿಜೆಪಿ ಪಕ್ಷ 43 ಸ್ಥಾನದಲ್ಲಿ ಬಹುತೇಕ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಕೇವಲ 37 ಸ್ಥಾನದಲ್ಲಿ ಬಹುತೇಕ ಗೆಲುವನ್ನು ಸಾಧಿಸಿದೆ. ಹೀಗಾಗಿ ಭಾಗಶಃ ಛತ್ತೀಸ್‌ಗಢ ಬಿಜೆಪಿ ತೆಕ್ಕೆಗೆ ಬಿದ್ದಂತಾಗಿದೆ. ಇನ್ನೇನು ಕೆಲವೇ ಕ್ಷಣದಲ್ಲಿ ಅಂತಿಮ ಫಲಿತಾಂಶ ಹೊರಬೀಳಲಿದೆ.
ಸರ್ಕಾರ ರಚಿಸಲು ಎಷ್ಟು ಸ್ಥಾನ ಬೇಕು?
ಛತ್ತೀಸ್‌ಗಢದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬ ಕಾಂಗ್ರೆಸ್ ಲೆಕ್ಕಾಚಾರ ನಿಧಾನವಾಗಿ ಮಂಕಾಗ್ತಿದೆ. ಒಟ್ಟು 90 ಸ್ಥಾನ ಇರುವ, ಛತ್ತೀಸ್‌ಗಢ ರಾಜ್ಯದಲ್ಲಿ ಬಹುಮತ ಪಡೆಯಲು 46 ಸ್ಥಾನ ಬೇಕಿದೆ. ಈ ಮೊದಲು ಕಾಂಗ್ರೆಸ್ ಇಲ್ಲಿ ಭಾರಿ ಬಹುಮತ ಪಡೆಯುವ ಮುನ್ಸೂಚನೆ ಸಿಕ್ಕಿತ್ತು.

ಆದ್ರೆ ಟ್ರೆಂಡ್ ಸಂಪೂರ್ಣ ಬದಲಾಗಿದ್ದು, ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್ ಈಗ ಬಹುಮತಕ್ಕಿಂತ ಕೆಳಗೆ ಬಿದ್ದಿದೆ. ಆದರಲ್ಲೂ ಸ್ವತಃ ಛತ್ತೀಸ್‌ಗಢ ರಾಜ್ಯದಲ್ಲಿ ಸ್ವತಃ ಸಿಎಂ ಭೂಪೇಶ್ ಬಘೇಲ್ ಅವರಿಗೆ ಶಾಕ್ ಸಿಗುತ್ತಿದೆ.
ಕಾಂಗ್ರೆಸ್ ನಾಯಕರ ಶ್ರಮ ವ್ಯರ್ಥ?
ಇನ್ನು ಈ ಬಾರಿ ಹೇಗಾದರೂ ಮಾಡಿ ಮತ್ತೊಮ್ಮೆ ಛತ್ತೀಸ್‌ಗಢ ರಾಜ್ಯದಲ್ಲಿ ಅಧಿಕಾರವನ್ನ ಪಡೆಯಬೇಕು ಅನ್ನೊದು ಕಾಂಗ್ರೆಸ್ ನಾಯಕರ ಹಠವಾಗಿತ್ತು. ಇದೇ ಕಾರಣಕ್ಕೆ ಕೇಂದ್ರದ, ಹಿರಿಯ ನಾಯಕರ ದಂಡೇ ಛತ್ತೀಸ್‌ಗಢಕ್ಕೆ ಬಂದು ಪ್ರಚಾರ ನಡೆಸಿತ್ತು. ಈಗ ನೋಡುತ್ತಿದ್ರೆ ಎಲ್ಲವೂ ಉಲ್ಟಾ ಆಗುತ್ತಿದೆ. ಅಂದುಕೊಂಡ ಮಟ್ಟಿಗೆ ಛತ್ತೀಸ್‌ಗಢ ವಿಧಾನಸಭೆಯಲ್ಲಿ ಈಗ ಕಾಂಗ್ರೆಸ್‌ಗೆ ಸ್ಥಾನಗಳು ಸಿಗುತ್ತಿಲ್ಲ.












Click it and Unblock the Notifications