ಮಾಜಿ ಗಂಡನನ್ನು ಕೊಂದು ದೇಹವನ್ನು ತುಂಡು ಮಾಡಿ, ಚೆನ್ನೈನ ಹಲವು ಭಾಗಗಳಿಗೆ ಎಸೆದ ಮಹಿಳೆ

ಚೆನ್ನೈ , ಏಪ್ರಿಲ್. 04: ಚೆನ್ನೈನ ಹೊರವಲಯದಲ್ಲಿರುವ ಕೋವಲಂನಲ್ಲಿ ತನ್ನ ಮಾಜಿ ಗಂಡನನ್ನು ಕೊಂದು, ಆತನ ದೇಹವನ್ನು ತುಂಡುಗಳಾಗಿ ಕತ್ತರಿಸಿ ಎಸೆದ ಆರೋಪದ ಮೇಲೆ 38 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ಈ ಅಪರಾಧದಲ್ಲಿ ಆಕೆಗೆ ಸಹಾಯ ಮಾಡಿದ ಮೂವರು ಆರೋಪಿಗಳು ಇನ್ನು ತಲೆಮರೆಸಿಕೊಂಡಿದ್ದಾರೆ.

ಮೃತ ವ್ಯಕ್ತಿ ಮಾರ್ಚ್‌ನಲ್ಲಿ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಾಗಿತ್ತು. ಪೊಲೀಸರ ಪ್ರಕಾರ, ಲೈಂಗಿಕ ಕಾರ್ಯಕರ್ತೆಯಾಗಿದ್ದ ಮಹಿಳೆಗೆ ಕೊಲೆ ಮಾಡಲು ಮತ್ತೆ ಮೂವರು ವ್ಯಕ್ತಿಗಳು ಸಹಾಯ ಮಾಡಿದ್ದಾರೆ. ಪೊಲೀಸರು ಇನ್ನೂ ಮೃತ ದೇಹದ ಭಾಗಗಳನ್ನು ಹೊರತೆಗೆದಿಲ್ಲ.

Chennai Woman kills ex-husband, Chops Body Into Pieces, Held

ಮೃತರನ್ನು ಚೆನ್ನೈನ ನಂಗನಲ್ಲೂರು ಬಳಿ ತನ್ನ ಸಹೋದರಿಯ ಕುಟುಂಬದೊಂದಿಗೆ ವಾಸಿಸುತ್ತಿದ್ದ ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ಏರ್‌ಲೈನ್ಸ್‌ನ ಗ್ರೌಂಡ್ ಸಿಬ್ಬಂದಿ ಎಂ ಜಯಂತನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಸಹೋದರ ಎಂ ಜಯಂತನ್ ಮಾರ್ಚ್ 18 ರಿಂದ ನಾಪತ್ತೆಯಾಗಿದ್ದಾರೆ ಮತ್ತು ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಮೃತನ ಸಹೋದರಿ ಪಜವಂತಂಗಲ್ ಪೊಲೀಸರಿಗೆ ದೂರ ನೀಡಿದ್ದರು. ದೂರು ಸ್ವೀಕರಿಸಿ ಎರಡು ದಿನಗಳ ಬಳಿಕ ಪೊಲೀಸರು ಮಾರ್ಚ್ 20 ರಂದು ಎಫ್‌ಐಆರ್ ದಾಖಲಿಸಿ ಆತನಿಗಾಗಿ ಹುಡುಕಾಟ ಆರಂಭಿಸಿದ್ದರು.

ಆತನ ಮೊಬೈಲ್ ಫೋನ್‌ನ ಕಾಲ್ ರೆಕಾರ್ಡಿಂಗ್ ಮತ್ತು ಇತರ ಪುರಾವೆಗಳ ಆಧಾರದ ಮೇಲೆ, ಕಳೆದ ಮಾರ್ಚ್ 19 ರಂದು ನಾಪತ್ತೆಯಾದ ಒಂದು ದಿನದ ನಂತರ ಜಯಂತನ್ ಪುದುಕ್ಕೊಟ್ಟೈನಲ್ಲಿದ್ದರು ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಆತ ಈ ಹಿಂದೆ ಸಂಬಂಧ ಹೊಂದಿದ್ದ ಮಹಿಳೆ ಜಿ ಬಕ್ಕಿಯಲಕ್ಷ್ಮಿಯನ್ನು ಭೇಟಿಯಾಗಲು ಅಲ್ಲಿಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Chennai Woman kills ex-husband, Chops Body Into Pieces, Held

ಜಿ ಬಕ್ಕಿಯಲಕ್ಷ್ಮಿ ಎಂದು ಗುರುತಿಸಲಾದ ಮಹಿಳೆ ಲೈಂಗಿಕ ಕಾರ್ಯಕರ್ತೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ಭೇಟಿಯ ಸಮಯದಲ್ಲಿ, ಜಗಳವಾಗಿದೆ ಹೀಗಾಗಿ ಬಕ್ಕಿಯಲಕ್ಷ್ಮಿ ತನ್ನ ಸ್ನೇಹಿತ ಶಂಕರ್‌ಗೆ ಕರೆ ಮಾಡಿದ್ದಾರೆ. ಆತ ತನ್ನ ಇಬ್ಬರು ಸ್ನೇಹಿತರನ್ನು ಕರೆತಂದು ಎಲ್ಲರು ಸೇರಿ ಜಯಂತನ್ ಅವರನ್ನು ಕೊಲೆ ಮಾಡಿ ದೇಹವನ್ನು ಕತ್ತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

" ಜಯಂತರನ್ನು ಕೊಂದು ಅವನ ದೇಹವನ್ನು ತುಂಡುಗಳಾಗಿ ಕತ್ತರಿಸಿ, ಅವರ ಕೈಕಾಲುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ, ಮಾರ್ಚ್ 20 ರ ಬೆಳ್ಳಂಬೆಳಗ್ಗೆ ಬಸ್ಸನ್ನು ಹತ್ತಿ ನಗರದ ಹೊರವಲಯದಲ್ಲಿ ಇಳಿದು, ದೇಹದ ಭಾಗಗಳನ್ನು ಕೋವಲಂನಲ್ಲಿ ಹೂತುಹಾಕಿ ಪುದುಕ್ಕೊಟ್ಟೈಗೆ ಮರಳಿದ್ದಾರೆ. ಆದರೆ, ಬಕ್ಕಿಯಲಕ್ಷ್ಮಿ ಆರು ದಿನಗಳ ಕಾಲ ದೇಹದ ಉಳಿದ ಭಾಗಗಳೊಂದಿಗೆ ಮನೆಯಲ್ಲಿದ್ದರು. ಮಾರ್ಚ್ 26 ರಂದು ಕಾರನ್ನು ಬಾಡಿಗೆಗೆ ತೆಗೆದುಕೊಂಡು ಶವ ಸಾಗಿಸಿದ್ದಾರೆ. ಈ ಬಾರಿ ದೇವಸ್ಥಾನದ ಅರ್ಚಕರೊಬ್ಬರು ಕೋವಲಂ ಬಳಿ ಶವವನ್ನು ಹೂಳಲು ಸಹಾಯ ಮಾಡಿದ್ದಾರೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅರ್ಚಕನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೇಹದ ಭಾಗಗಳನ್ನು ಹೊರತೆಗೆಯಲು ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಆರೋಪಿಯು ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದು, ಪ್ರಕರಣದ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ. ಪುದುಕ್ಕೊಟ್ಟೈನಲ್ಲಿ ಬಕ್ಕಿಯಲಕ್ಷ್ಮಿಗೆ ಸಹಾಯ ಮಾಡಿದ ಮೂವರ ಪತ್ತೆಗೂ ಬಲೆ ಬೀಸಲಾಗಿದೆ ಎಂದು ಹೇಳಿದ್ದಾರೆ.

ಪೋಲೀಸರ ಪ್ರಕಾರ, ಜಯಂತನ್ ಬಕ್ಕಿಯಲಕ್ಷ್ಮಿಯನ್ನು ಮೊದಲು 2020 ರಲ್ಲಿ ಲಾಡ್ಜ್‌ನಲ್ಲಿ ಭೇಟಿಯಾಗಿದ್ದರು. ಬಳಿಕ ಜಯಂತನ್ ತನ್ನ ಮನೆಯವರಿಗೆ ತಿಳಿಸದೆ ವಿಲ್ಲುಪುರಂನ ದೇವಸ್ಥಾನದಲ್ಲಿ ಬಕ್ಕಿಯಲಕ್ಷ್ಮಿಯನ್ನು ಮದುವೆಯಾದರು. ಆದರೆ, ಜನವರಿ 2021 ರಲ್ಲಿ, ಇಬ್ಬರೂ ಭಿನ್ನಾಭಿಪ್ರಾಯಗಳಿಂದ ಬೇರ್ಪಟ್ಟರು. ಬಕ್ಕಿಯಲಕ್ಷ್ಮಿ ಆಗಾಗ ಜಯಂತನ್‌ಗೆ ಹಣಕ್ಕಾಗಿ ಬೇಡಿಕೆಯಿಡುತ್ತಿದದ್ದು, ಜಗಳಕ್ಕೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಇತ್ತೀಚೆಗಷ್ಟೇ ಆಕೆಯನ್ನು ಮತ್ತೆ ಏಕೆ ಭೇಟಿಯಾದರು ಎಂಬುದು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+