Get Updates
Get notified of breaking news, exclusive insights, and must-see stories!

Cheetah Cubs: 'ಚೀತಾ' ಗಳಿರುವ 'ಕುನೋ' ರಾಷ್ಟ್ರೀಯ ಉದ್ಯಾನ ಹೊಸ 3 ಸದಸ್ಯರನ್ನು ಸ್ವಾಗತಿಸಿದೆ

ಭೂಪಾಲ್, ಜನವರಿ 04: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ (Kuno National Park) ನಮೀಬಿಯಾದಿಂದ ಚಿರತೆಗಳನ್ನು ತಂದು ಬಿಡಲಾಗಿತ್ತು. ಇದೀಗ ಈ ಉದ್ಯಾನವನವು ಮೂರು ಮರಿಗಳನ್ನು ಸ್ವಾಗತಿಸಿದ್ದಾಗಿ ಸಿಹಿ ಸುದ್ದಿಯೊಂದು ನೀಡಿದೆ.

ಹೌದು, ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಪ್ರಧಾನಿ ಮೋದಿ ಹೆಸರಿಸಿರುವ 'ಆಶಾ ಚಿರತೆ' (Asha Cheeta) ಮೂರು ಮರಿಗಳಿಗೆ ಜನ್ಮ ನೀಡಿದೆ. ಈ ಮೂಲಕ ಕೇಂದ್ರ ಸರ್ಕಾರದ ಉದ್ದೇಶ ಸಾಕಾರವಾಗಲಿದೆ. ಭಾರತದಲ್ಲಿ ಚಿರತೆಯ ಸಂತತಿಯನ್ನು ಪುನರುಜ್ಜೀವನಗೊಳಿಸುವ ಭರವಸೆ ಸಿಕ್ಕಿದೆ.

Cheetah Asha Give Birth 3 Cubs in Kuno National Park in MP: MP CM Shared Video

ಆಶಾ ಚೀತಾಗೆ ಮೂರು ಮರಿಗಳಿಗೆ ಜನ್ಮ ನೀಡಿದ್ದು, ಆ ಮೂರು ಮರಿಗಳ ವಿಡಿಯೋವನ್ನು ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಮೂರು ಪುಟ್ಟ ಚಿರತೆ ಮರಿಗಳನ್ನು ನೀವು ನೋಡಬಹುದು. ಇದು ಪ್ರಧಾನಿ ಮೋದಿಯವರು ಚೀತಾ ಯೋಜನೆಗೆ ಸಿಕ್ಕ ಅದ್ಭುತ ಯಶಸ್ಸು ಅಂತಲೂ ಬಣ್ಣಿಸಲಾಗುತ್ತಿದೆ. ಯೋಜನೆಯಲ್ಲಿ ತೊಡಗಿರುವ ಎಲ್ಲ ಅಧಿಕಾರಿಗಳು, ಸಿಬ್ಬಂದಿಗೂ ಈ ವೇಳೆ ಅಭಿನಂದನೆ ತಿಳಿಸಲಾಗಿದೆ.

ಚೀತಾ ಯೋಜನೆಗೆ ಬಲ

'ಆಶಾ ಚೀತಾ' ಮೂರು ಮರಿಗಳಿಗೆ ಜನ್ಮ ನೀಡಿದೆ. ಇದರಿಂದ ಯೋಜನೆಗೆ ಮತ್ತಷ್ಟು ಬಲ ಬಂದಂತಾಗಿದೆ. ವಾಂಡರರ್ ಚಿರತೆ ಪವನ್ ಅಕಾ ಓಬನ್‌ನಿಂದ ಮರಿಗಳಿಗೆ ತಂದೆಯಾಗಿದೆ. ಇದನ್ನು ರಾಜಸ್ಥಾನದಿಂದ ಇತ್ತೀಚೆಗೆ ಕುನೋಗೆ ತರಲಾಗಿತ್ತು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

Cheetah Asha Give Birth 3 Cubs in Kuno National Park in MP: MP CM Shared Video

ಭಾರತದಲ್ಲಿ ಈ ಚೀತಾ ಸಂತತಿಗಳ ಹೆಚ್ಚಿಸುವ ಉದ್ದೇಶದಿಂದ ನಮೀಬಿಯಾದಿಂದ ಒಟ್ಟು 5ಹೆಣ್ಣು ಮತ್ತು 3 ಗಂಡು ಚೀತಾ ಸೇರಿ ಒಟ್ಟು ಎಂಟು ಚೀತಾಗಳನ್ನು 2022ರಲ್ಲಿ ತಂದು ಬಿಡಲಾಗಿತ್ತು. ಕಳೆದ ವರ್ಷ 2023ರ ಮಾರ್ಚ್ 24ರಂದು ಹೆಣ್ಣು ಚೀತಾ 'ಜ್ವಾಲಾ' ಕುನೋ ಕಾಡಿನಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಈ ಪೈಕಿ ಮೂರು ಮರಿಗಳು ಮೃತಪಟ್ಟಿದ್ದವು. ಒಂದೇ ಒಂದು ಮರಿ ಜೀವಂತವಾಗಿದ್ದು, ಬೆಳೆಯುತ್ತಿದೆ.

ಚೀತಾ ಮರಿ ಜನನಕ್ಕೆ ಎಂಪಿ ಸಿಎಂ ಹರ್ಷ

''ಕುನೋದಲ್ಲಿ ಮೂರು ಪುಟ್ಟ ಚಿರತೆಗಳ ಆಗಮನದ ಸುದ್ದಿ ಅತ್ಯಂತ ಸಂತೋಷದಾಯಕವಾಗಿದೆ. ಹೊಸ ವರ್ಷದಲ್ಲಿ ಸಿಹಿ ಸುದ್ದಿ ಸಿಕ್ಕಂತಾಗಿದೆ. ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಮಧ್ಯಪ್ರದೇಶ 'ಚೀತಾ ರಾಜ್ಯ' ಎಂದು ಗುರುತಿಸಿಕೊಂಡಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಎಕ್ಸ್‌ನಲ್ಲಿ ವೀಡಿಯೊ, ಚಿತ್ರವನ್ನು ಹಂಚಿಕೊಂಡು ಶ್ಲಾಘಿಸಿದ್ದಾರೆ.

ಇದು ಸಕಾರಾತ್ಮಕ ಬೆಳವಣಿಗೆಯಾಗಿದೆ, ಆದರೆ ಈ ಚೀತಾ ಮರಿಗಳ ಬೆಳವಣಿಗೆ ದೀರ್ಘ ಮತ್ತು ಸವಾಲಿನ ಹಾದಿಯಿದೆ ಎಂದು ದಿ ಮೆಟಾಪೋಪ್ಯುಲೇಶನ್ ಇನಿಶಿಯೇಟಿವ್-ಚೀತಾ ಮೆಟಾಪೋಪ್ಯುಲೇಶನ್ ಪ್ರಾಜೆಕ್ಟ್‌ನ ನಿರ್ದೇಶಕ ವಿನ್ಸೆಂಟ್ ವ್ಯಾನ್ ಡೆರ್ ಮೆರ್ವೆ ಹೇಳಿದರು. ಇದೇ ವೇಳೆ ಅರಣ್ಯಾಧಿಕಾರಿಗಳಿಗೆ ಅವರು ಅಭಿನಂದನೆ ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+