'ಮತಹಾಕಿದರೆ ಬೆರಳು ಕತ್ತಿರಿಸುತ್ತೇವೆ' ಎಂದಿದ್ದರೂ ಮತ ಹಾಕಿದ ಧರ್ಯವಂತ ಗ್ರಾಮಸ್ಥರು

ದಂತೇವಾಡ, ನವೆಂಬರ್ 12: ಮತ ಚಲಾಯಿಸಿದರೆ, ಇಂಕು ಮೆತ್ತಿದ ಬೆರಳನ್ನೇ ಕತ್ತರಿಸಿ ಹಾಕುತ್ತೇವೆ ಎಂದು ನಕ್ಸಲರು ಎಚ್ಚರಿಕೆ ನೀಡಿದ್ದರೂ ಸಹ ಗ್ರಾಮಸ್ಥರು ಮತ ಚಲಾಯಿಸಿ ಧರ್ಯ ಮೆರೆದಿದ್ದಾರೆ ಛತ್ತೀಸ್‌ಘಡ ರಾಜ್ಯದಲ್ಲಿ.

ಛತ್ತೀಸ್‌ಘಡ ರಾಜ್ಯ ವಿಧಾನಸಭೆ ಚುನಾವಣೆ ಇಂದು. ರಾಜ್ಯದ ಬಹುಪ್ರದೇಶ ನಕ್ಸಲ್‌ ಹಾಗೂ ಮಾವೋವಾದಿಗಳ ಪ್ರಬಾಲ್ಯ ಇದೆ. ಅದರಲ್ಲಿಯೂ ದತೇವಾಡ ಜಿಲ್ಲೆ ಪೂರಾ ನಕ್ಸಲರದ್ದೇ ಪ್ರಾಬಲ್ಯ. ಆದರೆ ಅಲ್ಲಿಯೂ ಸಹ ಗ್ರಾಮಸ್ಥರು ಧೈರ್ಯದಿಂದ ಮತ ಚಲಾಯಿಸುತ್ತಿದ್ದಾರೆ.

ದಂತೆವಾಡ ಜಿಲ್ಲೆಯ ಮದೆಂಡಾ ಗ್ರಾಮಕ್ಕೆ ಕೆಲವು ದಿನಗಳ ಹಿಂದಷ್ಟೆ ನುಗ್ಗಿದ್ದ ನಕ್ಸಲರು ಮತ ಹಾಕಿದರೆ ಬೆರಳು ಕತ್ತಿರಿಸುತ್ತೇವೆ ಎಂದಿದ್ದರು, ಅದೊಂದೆ ಅಲ್ಲ ಅಲ್ಲಿನ ಹಲವು ಗ್ರಾಮಗಳಿಗೆ ತೆರಳು ಎಚ್ಚರಿಕೆ ನೀಡಿದ್ದರು ಆದರೆ ಅಲ್ಲಿನ ಗ್ರಾಮಸ್ಥರು ಹೆದರಿಲ್ಲ.

chattisgarh election: People cast their votes even after threat from the Naxals

ಮದೆಂಡಾ ಗ್ರಾಮದಲ್ಲಿ 263 ನೊಂದಾಯಿತ ಮತದಾರರಿದ್ದಾರೆ. ಎಲ್ಲರೂ ಧೈರ್ಯದಿಂದ ಮತಚಲಾಯಿಸುತ್ತಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಇಲ್ಲಿ ಭದ್ರತೆ ಕೂಡ ಭಾರಿ ಪ್ರಮಾಣದಲ್ಲಿ ನೀಡಲಾಗಿದೆ.

ಕೆಲವು ದಿನಗಳ ಹಿಂದಷ್ಟೆ ನಕ್ಸರ ದಾಳಿಗೆ ತುತ್ತಾಗಿ ಪತ್ರಕರ್ತ ಸೇರಿ ಪೊಲೀಸರು ಹತ್ಯೆಯಾಗಿದ್ದ ನಿಲ್ವಾಯಾದಲ್ಲೂ ಸಹ ಮತಚಲಾವಣೆ ಚೆನ್ನಾಗಿಯೇ ನಡೆಯುತ್ತಿದೆ. ಇಲ್ಲಿ ಮೂರು ಹಂತಗಳಲ್ಲಿ ಪೊಲೀಸರು ಮತ್ತು ಸೇನಾ ಸಿಬ್ಬಂದಿ ಭದ್ರತೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+