Chardham Yatra Guidelines 2024: ಚಾರ್‌ಧಾಮ್ ಹೋಗುವಿರಾ? ಹಾಗಾದರೆ ಈ ವಸ್ತುಗಳೆಲ್ಲವೂ ನಿಮ್ಮ ಬಳಿ ಇರಲೇಬೇಕು...
ಉತ್ತರಖಂಡದ ಪವಿತ್ರ ಚಾರ್‍ಧಾಮ್ ಯಾತ್ರೆ ಅಕ್ಷಯ ತೃತೀಯ ಮೇ 10ನೇ ತಾರೀಕು ಆರಂಭವಾಯಿತು. ಕರ್ನಾಟಕದಿಂದ ನಿತ್ಯ ನೂರಾರು ಜನ ಚಾರ್‍ಧಾಮ್ ಯಾತ್ರೆಗೆ ತೆರಳುತ್ತಿದ್ದಾರೆ. ಕೇದಾರನಾಥ್, ಯಮನೋತ್ರಿ, ಗಂಗೋತ್ರಿ ಹಾಗೂ ಬದರಿನಾಥ ದೇಗುಲವನ್ನು ಚಾರ್‍ಧಾಮ್ ಎಂದು ಕರೆಯಲಾಗುತ್ತದೆ.
ಈ ಯಾತ್ರೆ ವರ್ಷದಲ್ಲಿ ಆರು ತಿಂಗಳು ಮಾತ್ರ ಇರುತ್ತದೆ. ಇನ್ನುಳಿದ ಆರು ತಿಂಗಳು ಈ ಚಾರ್‍ಧಾಮ್‌ಗಳ ಬಾಗಿಲನ್ನು ಮುಚ್ಚಲಾಗುತ್ತದೆ. ಇಲ್ಲಿಗೆ ಭೇಟಿ ನೀಡಲು ಭಕ್ತರು ನೋಂದಣಿ ಮಾಡಿಸಿಕೊಂಡಿರುವುದು ತುಂಬಾ ಮುಖ್ಯ. ಯಾತ್ರಾ ನೋಂದಣಿ ಮಾಡಿಕೊಳ್ಳದೆ ಯಾತ್ರೆಗೆ ಅವಕಾಶ ನೀಡಲಾಗುವುದಿಲ್ಲ.

ಜೊತೆಗೆ ಯಾತ್ರೆಗೆ ತೆರಳುವ ಜನರು ಕೆಲ ಅಗತ್ಯ ವಸ್ತುಗಳನ್ನು ತಮ್ಮೊಂದಿಗೆ ಕೊಂಡೊಯ್ಯಬೇಕಾಗುತ್ತದೆ. ಹಾಗಾದರೆ ಆ ಅಗತ್ಯ ವಸ್ತುಗಳು ಯಾವವು? ಯಾತ್ರೆ ವೇಳೆ ಭಕ್ತರು ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಯೋಣ.
ಚಾರ್‍ಧಾಮ್ ಯಾತ್ರೆಗೆ ತೆರಳುವ ಭಕ್ತರು ತಮ್ಮೊಂದಿಗೆ ಇಟ್ಟುಕೊಳ್ಳಬೇಕಾದ ಅಗತ್ಯ ವಸ್ತುಗಳು ಯಾವವು?
* ರೇನ್ ಸೂಟ್:
ಉತ್ತರಖಂಡದಲ್ಲಿ ಕ್ಷಣ ಕ್ಷಣಕ್ಕೂ ವಾತಾವರಣ ಬದಲಾಗುತ್ತಿರುತ್ತದೆ. ಕೆಲವೊಮ್ಮೆ ಮಳೆ, ಹಿಮಪಾತ, ಪ್ರವಾಹ, ಭೂಕುಸಿತ ಇವೆಲ್ಲವೂ ಯಾತ್ರೆ ವೇಳೆ ಭಕ್ತರು ಅನುಭವಿಸಬೇಕಾಗುತ್ತದೆ. ಹೀಗಾಗಿ ಯಾತ್ರೆಗೆ ತೆರಳುವಾಗ ಕೆಲ ವಸ್ತುಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳುವ ಅಗತ್ಯತೆ ಇದೆ. ಮುಖ್ಯವಾಗಿ ಚಾರ್‍ಧಾಮ್ ಯಾತ್ರೆಗೆ ತೆರಳುವ ಭಕ್ತರು ತಮ್ಮೊಂದಿಗೆ ರೇನ್ ಸೂಟ್ ಅನ್ನು ಇಟ್ಟುಕೊಳ್ಳಬೇಕು. ಯಾಕೆಂದರೆ ತಂಪಾದ ಗಾಳಿ, ಮಳೆ ಹಾಗೂ ಹಿಮಪಾತದಿಂದ ಇದು ನಿಮ್ಮನ್ನು ರಕ್ಷಿಸುತ್ತದೆ.
* ಹಣ
ಚಾರ್‍ಧಾಮ್ ಯಾತ್ರೆಗೆ ಹೋಗುವ ಭಕ್ತರು ತಮ್ಮ ಬಳಿ ಹಣವನ್ನು ಇಟ್ಟುಕೊಂಡಿರಬೇಕು. ನಮ್ಮ ಬಳಿ ಫೋನ್ ಪೇ ಗೂಗಲ್ ಪೇ ಇದೆ ಅಂದುಕೊಂಡು ಕೈಯಲ್ಲಿ ಹಣವಿಲ್ಲದೆ ಯಾತ್ರೆಗೆ ಹೋಗಬೇಡಿ. ಯಾಕೆಂದರೆ ಯಾತ್ರೆಯ ಟ್ರಕ್ಕಿಂಗ್ ವೇಳೆ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಹಣ ವಾಪತಿಸಲು ಕಷ್ಟವಾಗಬಹುದು. ಇದರಿಂದಾಗಿ ನಿಮ್ಮೊಂದಿಗೆ ಹಣ ಇಟ್ಟುಕೊಳ್ಳುವುದು ಒಳ್ಳೆಯದು. ಇದರಿಂದಾಗಿ ನಿಮ್ಮ ಯಾತ್ರೆಯನ್ನು ನೀವು ಸುಲಭವಾಗಿ ಮಾಡಬಹುದು.
* ಅಗತ್ಯ ವಸ್ತುಗಳು
ಸಾಮಾನ್ಯವಾಗಿ ಎಲ್ಲಾ ವಯೋಮಾನದವರು ಚಾರ್‍ಧಾಮ್ ಯಾತ್ರೆಯನ್ನು ಮಾಡುತ್ತಾರೆ. ವಯಸ್ಸಾದವರು, ಮಕ್ಕಳು ಇದ್ದಾಗ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಯಾಕೆಂದರೆ ವಾತಾವರಣ ಬದಲಾವಣೆಯಿಂದಾಗಿ ಅವರ ಆರೋಗ್ಯದಲ್ಲಿ ಬದಲಾವಣೆಗಳಾಗಬಹುದು. ಇದರಿಂದಾಗಿ ಅಗತ್ಯ ಮಾತ್ರೆಗಳನ್ನು ನಿಮ್ಮೊಂದಿಗೆ ಕೊಂಡೊಯ್ಯುವುದು ಸೂಕ್ತ. ಜೊತೆಗೆ ವಯಸ್ಸಾದವರು ಆರೋಗ್ಯ ಸಮಸ್ಯೆ ಇರುವವರು ವೈದ್ಯರ ಸಲಹೆಯನ್ನು ಪಡೆಯಬೇಕು.
* ಆಹಾರ
ಹೆಚ್ಚು ಚಳಿ, ತಂಪಾಗಿರುವ ವಾತಾವರಣದಲ್ಲಿ ಆರೋಗ್ಯಕ್ಕೆ ಅಗತ್ಯವಿರುವ ಆಹಾರ ನಿಮ್ಮೊಂದಿಗೆ ಇರಬೇಕಾಗುತ್ತದೆ. ಹೀಗಾಗಿ ಹಣ್ಣುಗಳು, ನೀರು, ಡ್ರೈ ಫ್ರೂಟ್ಸ್ ನಿಮ್ಮೊಂದಿಗೆ ಇಟ್ಟುಕೊಳ್ಳುವುದು ಒಳಿತು. ಯಾಕೆಂದರೆ ವಾತಾವರಣ ಬದಲಾವಣೆಯಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಇದರಿಂದಾಗಿ ಆರೋಗ್ಯದ ಮೇಲೆ ತ್ವರಿತ ಪರಿಣಾಮ ಬೀರುವ ಸಾಧ್ಯತೆಗಳು ಇವೆ.
ಹೀಗಾಗಿ ನಿಮ್ಮ ಆರೋಗ್ಯದಲ್ಲಿ ಇಂತೆಲ್ಲಾ ಬದಲಾವಣೆಗಳು ಕಂಡು ಬಂದಾಗ ತ್ವರಿತವಾಗಿ ದೇಹಕ್ಕೆ ಶಕ್ತಿ ನೀಡುವ ಆಹಾರ ಸೇವಿಸುವುದು ಹಾಗೂ ಆಗಾಗ ನೀರು ಕುಡಿಯುವುದು ಒಳ್ಳೆಯದು. ಮತ್ತೊಂದು ವಿಚಾರ ಅಂದರೆ ಕೇದಾರನಾಥ್ ಟ್ರಕ್ಕಿಂಗ್ ವೇಳೆ ಎಲ್ಲಂದರಲ್ಲಿ ಆಹಾರ ಸಿಗುವುದಿಲ್ಲ. ಹೀಗಾಗಿ ಇದೆಕ್ಕೆಲ್ಲಾ ನೀವು ಸಿದ್ದರಿರಬೇಕು.
* ಬೆಚ್ಚಗಿನ ಬಟ್ಟೆ
ಉತ್ತರಖಂಡದಲ್ಲಿ ಅತೀ ಹೆಚ್ಚು ತಂಪಾದ ವಾತಾವರಣ, ಮಳೆ ಹಾಗೂ ಹಿಮಪಾತವಾಗುವುದರಿಂದ ಯಾತ್ರೆ ವೇಳೆ ಬೆಚ್ಚಗಿನ ಬಟ್ಟೆ ಧರಿಸಿರಿ. ಕೆಲ ಬಾರಿ ನೀವು ಎಷ್ಟೇ ಪ್ಯಾಕ್ ಆಗಿದ್ದರು ಚಳಿ ಹೆಚ್ಚಾಗಬಹುದು. ನಡುಕದಿಂದ ನೀವು ತೊಂದರೆ ಅನುಭವಿಸಬಹುದು. ಹೀಗಾಗಿ ಚಳಿಯಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕಾಗುತ್ತದೆ. ಇದರಿಂದ ನಿಮ್ಮ ಯಾತ್ರೆಯನ್ನು ನೀವು ಆನಂದಿಸಬಹುದು. ಮಾತ್ರವಲ್ಲದೆ ನಿಮ್ಮವರನ್ನು ಜಾಗರೂಕತೆಯಿಂದ ಯಾತ್ರೆಗೆ ಕರೆದೊಯ್ಯಬಹುದು.

* ಶೂ
ಯಾತ್ರೆ ವೇಳೆ ಚಪ್ಪಲಿಗಿಂತ ಶೂ ಧರಿಸುವುದು ಉತ್ತಮ. ಯಾಕೆಂದರೆ ಇದರಿಂದ ಟ್ರಕ್ಕಿಂಗ್ ಮಾಡುವುದು ಸುಲಭವಾಗಿರುತ್ತದೆ. ಇದು ಮಳೆ, ತಂಪು ಗಾಳಿ, ಚಳಿಗೆ ನಿಮ್ಮ ಕಾಲನ್ನು ರಕ್ಷಿಸುತ್ತದೆ. ಮಾತ್ರವಲ್ಲದೆ ಚಪ್ಪಲಿಗಿಂತ ಯಾತ್ರೆ ವೇಳೆ ಶೂಗಳು ಆರಾಮದಾಯಕವಾಗಿರುತ್ತವೆ. ಹೀಗಾಗಿ ನಿಮ್ಮೊಂದಿಗೆ ಇಂತೆಲ್ಲಾ ವಸ್ತುಗಳನ್ನು ಇಟ್ಟುಕೊಂಡಿರುವುದು ನಿಮ್ಮ ಪ್ರಯಾಣವನ್ನು ಸುಗಮಗೊಳಿಸುತ್ತದೆ.
* ಕೋಲು
ಯಾತ್ರೆಯ ಸಮಯದಲ್ಲಿ ಭಕ್ತರು ಕೋಲು ಖರೀದಿಸುವುದು ಉತ್ತಮ. ಇದು ನಿಮ್ಮ ಟ್ರಕ್ಕಿಂಗ್‌ಗೆ ಸಹಾಯಕವಾಗಿದೆ. ಟ್ರಕ್ಕಿಂಗ್ ವೇಳೆ ನೀವು ಈ ಕೋಲಿನ ಸಹಾಯದಿಂದ ಸುಲಭವಾಗಿ ನಡೆಯಬಹುದು. ನಿಮ್ಮನ್ನು ನೀವು ರಕ್ಷಸಿಕೊಳ್ಳುತ್ತಾ ಸಾಗಲು ಈ ಕೋಲು ನಿಮಗೆ ಸಹಾಯಕವಾಗುತ್ತದೆ. ಹೀಗಾಗಿ ಸ್ಥಳೀಯವಾಗಿ ಸಿಗುವ ಕೋಲನ್ನು ಯಾತ್ರೆ ವೇಳೆ ಖರೀದಿಸಿ.
* ಬ್ಯಾಗ್
ಯಾತ್ರೆ ವೇಳೆ ನೀವು ಕ್ಯಾರಿ ಮಾಡುವ ಬ್ಯಾಗ್ ಹಗುರವಾಗಿರುವಂತೆ ನೋಡಿಕೊಳ್ಳಿ. ಯಾಕೆಂದರೆ ಬ್ಯಾಗ್ ಭಾರವಾದಂತೆ ಯಾತ್ರೆಗೆ ಹೋಗಲು ಕಷ್ಟವಾಗುತ್ತದೆ. ಕಾಲ್ನಡಿಗೆಯಲ್ಲಿ ಮುಂದೆ ಸಾಗಿದಂತೆ ಬ್ಯಾಗ್ ಭಾರವಾಗಲು ಶುರುವಾಗುತ್ತದೆ. ಸರಳವಾದ ಭಾರವಾಗಿಲ್ಲದ ಬ್ಯಾಗ್ ಅನ್ನು ಕ್ಯಾರಿ ಮಾಡಿ. ಜೊತೆಗೆ ಆದಷ್ಟು ಅಗತ್ಯವಿರುವ ವಸ್ತುಗಳನ್ನು ಕ್ಯಾರಿ ಮಾಡಿ ಅನಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಬೇಡಿ.
ಚಾರ್‍ಧಾಮ್ ಯಾತ್ರೆಯಲ್ಲಿ ಮಾಡಬಾರದ ಕೆಲಸಗಳು:-
* ಚಾರ್‍ಧಾಮ್ ಯಾತ್ರೆಯಲ್ಲಿ ಕೆಲ ತಪ್ಪುಗಳನ್ನು ಮಾಡದಿರಲು ಭಕ್ತರಿಗೆ ಮನವಿ ಮಾಡಲಾಗಿದೆ. ಎಲ್ಲಂದರಲ್ಲಿ ಕಸವನ್ನು ಹಾಕುವುದು, ಉಗುಳುವುದು, ಗಲೀಜು ಮಾಡುವುದನ್ನು ತಪ್ಪಿಸಬೇಕು.
* ಸಾಂಪ್ರದಾಯಿಕ ಬಟ್ಟೆಯನ್ನು ಧರಿಸುವುದು ಉತ್ತಮ. ಚಾರ್‌ಧಾಮ್ ಯಾತ್ರೆಗೆ ತೆರಳುವ ಭಕ್ತರು ಫ್ಯಾನ್ಸಿ ಬಟ್ಟೆಗಳನ್ನು ಧರಿಸದೇ ಇರುವುದು ಒಳ್ಳೆಯದು.
* ಚಾರ್‍ಧಾಮ್ ಯಾತ್ರೆ ವೇಳೆ ಮೋಸ ಮಾಡುವವರು, ಕಳ್ಳತನ ಮಾಡುವವರು ಇರುತ್ತಾರೆ. ಅವರಿಂದ ಜಾಗರೂಕರಾಗಿರಿ.
ಹೀಗೆ ಚಾರ್‍ಧಾಮ್ ಯಾತ್ರೆ ವೇಳೆ ಕೆಲ ಅಗತ್ಯ ವಸ್ತುಗಳನ್ನು ನಿಮ್ಮೊಂದಿಗೆ ಕೊಂಡೊಯ್ಯುವುದರಿಂದ ನೀವು ನಿಮ್ಮ ಪ್ರಯಾಣವನ್ನು ಸುಗಮಗೊಳಿಸಬಹುದು. ಮಾತ್ರವಲ್ಲದೆ ಯಾತ್ರೆಯನ್ನು ಆನಂದಿಸಿ ಜೀವನದ ಅತ್ಯುತ್ತಮ ಕ್ಷಣವನ್ನಾಗಿ ಮಾಡಬಹುದು.
-
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ












Click it and Unblock the Notifications