ಎಲ್ಲರ ಕೈಲೂ ದೊಡ್ಡ ನೋಟು , ದೇಶದೆಲ್ಲೆಡೆ ಎಟಿಎಂಗಳಲ್ಲಿ ನೂಕು ನುಗ್ಗಲು

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 08: ಪ್ರಧಾನಿ ಮೋದಿ ಅವರು ಭ್ರಷ್ಟಾಚಾರಿಗಳ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ದಾಳಿ ಮಾಡಿರಬಹುದು. ಆದರೆ, ಇದರ ಪರಿಣಾಮ ನೇರವಾಗಿ ಜನ ಸಾಮಾನ್ಯರ ಮೇಲಾಗುತ್ತಿದೆ. 12 ಗಂಟೆಗೆ ಇನ್ನು ಎಷ್ಟು ಸಮಯವಿದೆ ಎಂದು ಗಡಿಯಾರ ನೋಡಿಕೊಂಡು ಅಕ್ಕ ಪಕ್ಕದ ಎಟಿಎಂ, ಪೆಟ್ರೋಲ್ ಬಂಕ್ ಗಳತ್ತ ಧಾವಿಸುತ್ತಿದ್ದಾರೆ.

ಎಲ್ಲರ ಕೈಲೂ 500 ಹಾಗೂ 1000 ನೋಟುಗಳಿವೆ. 8 ಗಂಟೆಯ ಪ್ರಧಾನಿ ಭಾಷಣ ಕೇಳಿಸಿಕೊಳ್ಳದ ಅಂಗಡಿಯವರು ಈಗಲೂ ನೋಟುಗಳನ್ನು ತೆಗೆದುಕೊಳ್ಳುತ್ತಿದ್ದಾರೆ. [500 ಹಾಗೂ 1000 ರು ಕರೆನ್ಸಿ ನೋಟು ಚಲಾವಣೆ ಬಂದ್: ಮೋದಿ]

Chaos after Rs 500 and Rs 1,000 notes go out of circulation

ಸದ್ಯಕ್ಕೆ ಎಟಿಎಂ ಹಾಗೂ ಪೆಟ್ರೋಲ್ ಬಂಕ್ ಗಳು ಹಣ ವಿನಿಮಯ ಕೇಂದ್ರಗಳಾಗಿ ಬದಲಾಗಿವೆ. ಆದರೆ, ಎಲ್ಲೆಡೆ ನೂಕು ನುಗ್ಗಲು, ಗೊಂದಲ ಮುಂದುವರೆದಿದೆ.

ಹಲವೆಡೆ ಎಟಿಎಂ ಸರ್ವರ್ ಕೈಕೊಟ್ಟಿದ್ದರೆ, ಕೆಲವೆಡೆ ಎಟಿಎಂನಲ್ಲಿ ಹಣವೆ ಇಲ್ಲ. ನಾಳೆ, ನಾಡಿದ್ದು ಎಟಿಎಂ ಇರುವುದಿಲ್ಲ ಎಂಬ ಪ್ರಕಟಣೆ ಎಲ್ಲರ ತಲೆ ಕೆಡಿಸಿದೆ.

ನಾಳೆ ಕೂಡಾ ಇದೆ ಇದೇ ರೀತಿ ಗೊಂದಲ ಮುಂದುವರೆಯಲಿದೆ. ನವೆಂಬರ್ 10 ರಿಂದ ಡಿಸೆಂಬರ್ 30 ರ ತನಕ ನೋಟುಗಳನ್ನು ಬದಲಾಯಿಸಿಕೊಳ್ಳಬಹುದಾಗಿದೆ. ಡೆಡ್ ಲೈನ್ ಆದ ಮೇಲೂ ನಿಮ್ಮ ಬಳಿ ನೋಟುಗಳು ಇದ್ದರೆ, ಮಾರ್ಚ್ 2017ರೊಳಗೆ ಆರ್ ಬಿಐಗೆ ಹೋಗಿ ಅಧಿಕೃತ ಗುರುತಿನ ಚೀಟಿ ನೀಡಿ ನೋಟುಗಳನ್ನು ಬದಲಾಯಿಸಿಕೊಳ್ಳಬಹುದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The sudden announcement made by the Prime Minister of India, Narendra Modi to pull out of circulation the Rs 500 and 1,000 notes did lead to a lot of chaos. Minutes after the announcement was made, there were long queues outside ATMs with people trying to withdraw money.
Please Wait while comments are loading...