ಚಂದ್ರಲೋಕ ನೋಡಬೇಕೇ: ಇಲ್ಲಿವೆ ನೋಡಿ ಅದರ ಚಿತ್ರ!

ಶ್ರೀಹರಿಕೋಟಾ, ನವೆಂಬರ್.13: ಹುಣ್ಣಿಮೆಯ ದಿನ ಕತ್ತಲ ರಾತ್ರಿಯಲ್ಲೂ ಭೂಮಿಗೆ ಬೆಳಕು ನೀಡುವ ಚಂದಿರ ಎಂದರೆ ಎಂಥವರಿಗೂ ಪಂಚಪ್ರಾಣ. ಭೂಮಿ ಹೊರತಾಗಿ ಮತ್ತೊಂದು ಗ್ರಹದ ಮೇಲೆ ಜನರು ಅತಿಯಾದ ಬಾಂಧವ್ಯವನ್ನು ಬೆಳೆಸಿಕೊಂಡಿದ್ದಾರೆ ಎಂದರು ಅದು ಚಂದಿರ.

ಪುಟ್ಟ ಮಗುವಿಗೆ ಕೈತುತ್ತು ನೀಡುವ ತಾಯಿ ಚಂದಿರನನ್ನೇ ತೋರಿಸುತ್ತಾಳೆ. ಯಾಕೆಂದರೆ ಚಂದಿರನ ಆ ಲೋಕ ಅಷ್ಟೊಂದು ಸುಂದರ. ಚಂದಾಮಾಮಾ ಕಥೆಗಳು ಈಗಲ್ಲ, ಪ್ರಾಚೀನ ಕಾಲದಿಂದಲೂ ಜನಪ್ರಿಯವಾಗಿ ಬೆಳೆದು ಬಂದಿವೆ.

ಭಾರತದ ಆದಿಯಾಗಿ ಹಲವು ದೇಶಗಳು ಚಂದ್ರಯಾನ ಕೈಗೊಂಡಿವೆ. ಇದಕ್ಕೆಲ್ಲ ಕಾರಣವೇ ಅದೊಂದು ಕುತೂಹಲ. ಚಂದಿರನ ಆ ಅಂಗಳ ಹೇಗಿದೆ ಎಂಬುವನ್ನು ತಿಳಿದುಕೊಳ್ಳಲು ವಿಜ್ಞಾನಿಗಳು ಕೂಡಾ ಕಾತರರಾಗಿದ್ದಾರೆ. ಅದಕ್ಕಾಗಿ ಮೇಲಿಂದ ಮೇಲೆ ಸಂಶೋಧನೆಗಳು ನಡೆಯುತ್ತಲೇ ಇವೆ. ಭಾರತ ಕೂಡಾ ಒಂದು ಬಾರಿ ಯಶಸ್ವಿಯಾಗಿ ಚಂದ್ರಯಾನ ಮಾಡಿದೆ.

ಚಿತ್ರ ಕೃಪೆ: ಇಸ್ರೋ

ಇದೇ ನೋಡಿ ಚಂದಿರನ ಆ ಅಂಗಳ

ಇದೇ ನೋಡಿ ಚಂದಿರನ ಆ ಅಂಗಳ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಆಗಾಗ ಚಂದಿರನ ಕುರಿತು ಕುತೂಹಲಕಾರಿ ಮಾಹಿತಿಯನ್ನು ನೀಡುತ್ತದೆ. ಹಲವು ಬಾರಿ ಚಂದಿರನ ಮೇಲ್ಮೈ ಪದರ ಹೇಗಿದೆ ಎಂಬ ಚಿತ್ರಗಳು ಕೂಡಾ ಬಿಡುಗಡೆಯಾಗಿವೆ. ಇದೀಗ ಅಂಥದ್ದೇ ಮತ್ತೊಂದು ಕುತೂಹಲಕಾರಿ ವಿಚಾರವನ್ನು ಇಸ್ರೋ ಹೊರ ಹಾಕಿದೆ.

ಇಸ್ರೋ ಬಿಡುಗಡೆ ಮಾಡಿದ ಚಿತ್ರಪಟ!

ಇಸ್ರೋ ಬಿಡುಗಡೆ ಮಾಡಿದ ಚಿತ್ರಪಟ!

ಚಂದ್ರನ ಮೇಲ್ಮೈ ಭಾಗದಲ್ಲಿ ಜ್ವಾಲಾಮುಖಿಯ ಸುಳಿಯಂತೆ ಇರುವ ಚಿತ್ರವೊಂದು ಲಭ್ಯವಾಗಿದೆ. ಟೆರೈನ್ ಮ್ಯಾಪಿಂಗ್ ಕ್ಯಾಮರಾ-2ನಲ್ಲಿ ಸೆರೆಯಾದ ಚಿತ್ರ ಇದೀಗ ಸಾಕಷ್ಟು ಕುತೂಹಲ ಕೆರಳಿಸಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಅದರ 3ಡಿ ಚಿತ್ರವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಅಪ್ ಲೋಡ್ ಮಾಡಿದೆ.

ಜುಲೈ.22ರಂದು ನಭಕ್ಕೆ ಜಿಗಿದಿದ್ದ ರಾಕೆಟ್

ಜುಲೈ.22ರಂದು ನಭಕ್ಕೆ ಜಿಗಿದಿದ್ದ ರಾಕೆಟ್

ಕಳೆದ ಜುಲೈ.22ರಂದು ಚಂದ್ರಯಾನ-2 ನೌಕೆಯ ಯಾನ ಆರಂಭವಾಗಿತ್ತು. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಧ್ಯಾಹ್ನ 2.43ಕ್ಕೆ ಆರ್ಬಿಟರ್, ವಿಕ್ರಂ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ಒಳಗೊಂಡ ಜಿಎಸ್ಎಲ್ ವಿ ಮಾರ್ಕ್-3 ರಾಕೆಟ್ ನಭಕ್ಕೆ ಜಿಗಿದಿತ್ತು.

ಮೊದಲ ಪೋಟೋ ಕಳಿಸಿದ್ದ ವಿಕ್ರಮ್ ಲ್ಯಾಂಡರ್

ಮೊದಲ ಪೋಟೋ ಕಳಿಸಿದ್ದ ವಿಕ್ರಮ್ ಲ್ಯಾಂಡರ್

ಆ.22ರಂದು ಚಂದ್ರನ ಕಕ್ಷೆ ತಲುಪಿದ ಚಂದ್ರಯಾನ-2, ಮೊದಲ ಬಾರಿ ಚಂದ್ರನ ಚಿತ್ರಣವನ್ನು ಸೆರೆಹಿಡಿದು ಕಳುಹಿಸಿತ್ತು. ಚಂದ್ರನಿಂದ 2,650 ಕಿ.ಮೀ ದೂರದಿಂದ ಚಂದ್ರನ ಮೇಲ್ಮೆಯನ್ನು ವಿಕ್ರಮ್​ ಲ್ಯಾಂಡರ್​ ಆ ಚಿತ್ರವನ್ನು ಸೆರೆ ಹಿಡಿದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+