ಚಂದ್ರಯಾನ 3 ರೋವರ್ ಕಾರ್ಯಾಚರಣೆ ಬಗ್ಗೆ ಇಸ್ರೋ ಅಪ್ಡೇಟ್ ಮಾಹಿತಿ
ಬೆಂಗಳೂರು, ಆಗಸ್ಟ್ 24: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬುಧವಾರ ಚಂದ್ರ ಅಂಗಳ ತಲುಪುವಲ್ಲಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೆ ಅಲ್ಲಿನ ಕಾರ್ಯಚಟುವಟಿಕೆ ಆರಂಭದ ಕುರಿತು ಮಹತ್ವದ ಮಾಹಿತಿ ತಿಳಿಸಿದೆ.
ಚಂದ್ರನ ಮೇಲೆ ಲ್ಯಾಂಡ್ ಆಗಿರುವ ರೋವರ್ ಪ್ರಗ್ಯಾನ್ ಮುಂದಿನ 14ದಿನ ಚಂದ್ರನ ಮೇಲ್ಮೈ ಕುರಿತು ಅಧ್ಯಯನ ಮಾಡಲಿದೆ. ಇದೆಲ್ಲವು ಇಸ್ರೋ ವಿಜ್ಞಾನಿಗಳ ತಂಡ ನಿಗದಿ ಮಾಡಿರುವ ವೇಳಾಪಟ್ಟಿಯ ಪ್ರಕಾರ ನಡೆಯಲಿದೆ.

ಗುರುವಾರ ಲ್ಯಾಂಡರ್ ಮಾಡ್ಯೂಲ್ ಪೇಲೋಡ್‌ಗಳಾದ ILSA, RAMBHA ಮತ್ತು ChaSTE ಇಂದು ಆನ್ ಮಾಡಲಾಗಿದೆ. ರೊವರ್ ಮೊಬಿಲಿಟಿಗಳು ಸಹ ಕಾರ್ಯಾಚರಣೆ ಆರಂಭಿಸಿವೆ. ಇಸ್ರೋ ವಿಜ್ಞಾನಿಗಳು ಬೆಂಗಳೂರಿನ ಪೀಣ್ಯದಲ್ಲಿರುವ ಕಚೇರಿಯಿಂದ ನಿರ್ವಹಣೆ ಮಾಡುತ್ತಿರುವುದು ವಿಶೇಷ.
ರೋವರ್ ಮೊದಲ ದಿನದ ಕಾರ್ಯಾಚರಣೆ
ಕಳೆದ ಭಾನುವಾರವೇ ಪ್ರೊಪಲ್ಷನ್ ಮಾಡ್ಯೂಲ್‌ನಲ್ಲಿ ಶೇಪ್ ಪೇಲೋಡ್ ಅನ್ನು ಆನ್ ಮಾಡಲಾಗಿತ್ತು. ಅದು ಸಹ ತನ್ನ ಕೆಲಸ ಆರಂಭಿಸಿದೆ. ಸದ್ಯ ಎಲ್ಲ ವ್ಯವಸ್ಥೆಗಳು ಸಾಮಾನ್ಯವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಅಪ್ಡೇಟ್ ನೀಡಿದೆ.
Chandrayaan-3 Mission:
— ISRO (@isro) August 24, 2023
All activities are on schedule.
All systems are normal.
🔸Lander Module payloads ILSA, RAMBHA and ChaSTE are turned ON today.
🔸Rover mobility operations have commenced.
🔸SHAPE payload on the Propulsion Module was turned ON on Sunday.
ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ನೇತೃತ್ವದಲ್ಲಿ ತಂಡ ಮುಂದಿನ 14 ದಿನ ಕಾರ್ಯಾಚರಣೆಯ ಪ್ರತಿ ಮಾಹಿತಿಯನ್ನು ಚಂದ್ರನೂರಿನಿಂದಲೇ ಪಡೆಯಲಿದ್ದಾರೆ. ಸದ್ಯ ರೋವರ್ ಮೊದಲ ದಿನದ ಕಾರ್ಯಾಚರಣೆ ಆರಂಭಿಸಿದೆ.

ಬುಧವಾರ ಸಂಜೆ 6.4ಕ್ಕೆ ಇಳಿದ ನಂತರ ವಿಕ್ರಮ್ ಲ್ಯಾಂಡರ್‌ನಿಂದ ಹೊರ ಬಂದ ರೋವರ್ ಪ್ರಗ್ಯಾನ್ ಚಂದ್ರನ ಮೇಲ್ಮೈ ಪ್ರದೇಶದ ಒಂದೆರಡು ಫೋಟೊಗಳನ್ನು ಭೂಮಿಗೆ ಕಳುಹಿಸಿಕೊಟ್ಟಿತ್ತು. ಅದಾದ ಬಳಿಕ ಗುರುವಾರ ರೋವರ್ ಹಂತ ಹಂತವಾಗಿ ಕಾರ್ಯಾಚರಣೆ ಆರಂಭಿಸಲಿವೆ. ಚಂದ್ರನ ಮೇಲ್ಮೈ, ಮಣ್ಣು, ಅಲ್ಲಿನ ವಾತಾವರಣ, ನೀರು, ಖನಿಜ ಇನ್ನೂ ಮುಂತಾದ ಅಂಶಗಳ ಕುರಿತು ಸಂಶೋಧನೆ ಮಾಡಿ ಭೂಮಿಗೆ ಮಾಹಿತಿ ರವಾನಿಸಲಿದೆ.
ವಿದೇಶಗಳು ಕೈಜೋಡಿಸಲು ಉತ್ಸುಕ
ಒಟ್ಟು ಸುಮಾರು 600ಕ್ಕೂ ಹೆಚ್ಚು ಕೋಟಿ ಮೊತ್ತದ ಈ ಚಂದ್ರಯಾನ ಯೋಜನೆ ಯಶಸ್ವಿಯಾಗುತ್ತಿದ್ದಂತೆ ಭಾರತೀಯರು ಹೆಮ್ಮೆಯಿಂದ ಬೀಗಿದ್ದಾರೆ. ಭಾರತದ ಬಾಹ್ಯಾಕಾಶ ಸಾಧನೆ ಕಂಡು ವಿದೇಶಗಳು ಸಹ ಭಾರತದ ಜೊತೆಗೆ ಈ ವಲಯದ ಸಂಶೋಧನೆಗೆ ಕೈ ಜೋಡಿಸಲು ಹೆಚ್ಚು ಉತ್ಸುಕರಾಗಿದ್ದಾರೆ.
ಕಳೆದ ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್‌ನಿಂದ ಚಂದ್ರಯಾನ 3 ಉಡಾವಣೆಗೊಂಡು ದೇಶ ವಿದೇಶದವರೆನ್ನೆಲ್ಲ ಕಾತುರದಿಂದ ಕಾಯುವಂತೆ ಈ ಯೋಜನೆ ಮಾಡಿತ್ತು.












Click it and Unblock the Notifications