ಚಂದ್ರಯಾನ 3: ರೋವರ್ ಪ್ರಗ್ಯಾನ್‌ಗೆ ಎದುರಾದ ಗುಂಡಿ, ದಾರಿ ಬದಲಿಸಲು ಸೂಚನೆ: ಇಸ್ರೋ

ನವದೆಹಲಿ, ಆಗಸ್ಟ್ 28: ಚಂದ್ರಯಾನ-3 ಯಶಸ್ವಿಯಾಗಿ, ರೋವರ್ ಪ್ರಗ್ಯಾನ್ ಗೆ ಚಂದ್ರನ ಮೇಲೆ ಓಡಾಡಲು ಶುರು ಮಾಡಿ ಇಂದಿಗೆ ನಾಲ್ಕು ದಿನ ಕಳೆದಿವೆ. ಇತ್ತ ಬಾಕಿ ಹತ್ತು ದಿನದ ಕಾರ್ಯಾಚರಣೆಗೆ ಇಸ್ರೋ ಕೆಲಸ ಚುರುಕುಗೊಳಿಸಿದೆ. ಈ ಮಧ್ಯೆ ಪ್ರಗ್ಯಾನ್ ಸಂಚರಿಸುವ ವೇಳೆ ದೊಡ್ಡ ಗುಂಡಿಯೊಂದು ಕಾಣಿಸಿಕೊಂಡ ಪರಿಣಾಮ ಸಂಚಾರದ ದಾರಿ ಬದಲಾಯಿಸಿದೆ ಎಂದು ಇಸ್ರೋ ಸೋಮವಾರ ಮಾಹಿತಿ ನೀಡಿದೆ.

ಇಸ್ರೋ ಸಂಸ್ಥೆ ಸೋಮವಾರ ಫೋಟೊ ಸಹಿತ ಪೋಸ್ಟ್ ಮಾಡಿ ಮಾಹಿತಿ ಹಂಚಿಸಿಕೊಂಡಿದೆ. ಸಂಶೋಧನೆ ಆರಂಭಿಸಿರುವ ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈ ನಲ್ಲಿ ಸಂಚರಿಸುವ 4 ಮೀಟರ್ ವ್ಯಾಸದ ಗುಂಡಿ (ಕುಳಿ) ಯನ್ನು ಗಮನಿಸಿದೆ. ಹೀಗಾಗಿ ಇಸ್ರೋ ವಿಜ್ಞಾನಿಗಳ ತಂಡವು ರೋವರ್‌ಗೆ ದಾರಿ ಬದಲಾಯಿಸುವಂತೆ ಹಾಗೂ ಸುರಕ್ಷತೆ ಖಚಿತಪಡಿಸಿಕೊಳ್ಳುವಂತೆ ತ್ವರಿತವಾಗಿ ಆದೇಶಿಸಿತು.

chandrayaan-3

ಸದ್ಯ ಕಳೆದ ನಾಲ್ಕು ದಿನಗಳಲ್ಲಿ ರೋವರ್ ಪ್ರಜ್ಞಾನ್ ಎದುರಿಸಿದ ಎರಡನೇ ತಗ್ಗು ಇದಾಗಿದೆ. ಇದರಲ್ಲಿ ರೋವರ್ ಸಂಚಾರ ಅಸಾಧ್ಯವಾಗಿದ್ದು, ಸಮರ್ಥವಾಗಿ ವಿಜ್ಞಾನಿಗಳು ನಿಭಾಯಿಸುತ್ತಿದ್ದಾರೆ. ಗುಂಡಿ ತಪ್ಪಿಸಲು ಉತ್ತಮ ದಾರಿಯ ಆಯ್ಕೆಗೆ ಇಸ್ರೋ ಸೂಚಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಪ್ರಗ್ಯಾನ್ ಅಧ್ಯಯನಕ್ಕೆ 10 ದಿನ ಬಾಕಿ

ಸದ್ಯ ಪ್ರಗ್ಯಾನ್ ಸುರಕ್ಷಿತ ಹಾದಿಯಲ್ಲಿ ಕೆಲಸ ಮುಂದುವರೆಸಿದೆ. ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗುತ್ತಿದ್ದಂತೆ ಭಾರತ ವಿಶ್ವಮಟ್ಟದಲ್ಲಿ ಬೀಗಿತು. ಇಂತದ್ದೊಂದು ಐತಿಹಾಸಿಕ ಸಾಧನೆ ನಡೆದು ನಾಲ್ಕು ದಿನಗಳು ಕಳೆದಿವೆ. ಉದ್ದೇಶದಂತೆ ಇನ್ನೂ 10 ದಿನಗಳು ಚಂದ್ರನ ಅಧ್ಯಯನಕ್ಕೆ ಬಾಕಿ ಉಳಿದಿವೆ. ಹೀಗಾಗಿ ಶೋಧನೆಯ ಕೆಲಸವನ್ನು ಇಸ್ರೋ ವಿಜ್ಞಾನಿಗಳು ಇನ್ನಷ್ಟು ಚುರುಕುಗೊಳಿಸಿದ್ದಾರೆ.

chandrayaan-3

ಸೆ.2ರಂದು ಆದಿತ್ಯ ಎಲ್ 1 ಉಡಾವಣೆ

ಇನ್ನು ಚಂದ್ರಯಾನ 3 ಯಶಸ್ವಿ ಆಗುತ್ತಿದ್ದಂತೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯು ಸೆಪ್ಟಂಬರ್ 2ರಂದು (ತಾತ್ಕಾಲಿಕ ದಿನಾಂಕ) ಸೂರ್ಯಾನ್ವೇಷಣೆಗಾಗಿ ಆದಿತ್ಯ L1 ಅನ್ನು ಉಡಾವಣೆ ಮಾಡುವುದಾಗಿ ಈಗಾಗಲೇ ತಿಳಿಸಿದೆ. ಇದು ಸಹ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್‌ನಿಂದ ಅಂದು ಬೆಳಗ್ಗೆ ಉಡಾವಣೆಗೊಳ್ಳಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+