Chandrababu Naidu: ಜಾಮೀನು ಪಡೆದು ಹೊರ ಬಂದ ಚಂದ್ರಬಾಬು ನಾಯ್ಡು ಮುಂದಿನ ನಡೆ ಏನು?
ಕೌಶಲ್ಯಾಭಿವೃದ್ಧಿ ಹಗರಣ ಪ್ರಕರಣದಲ್ಲಿ ಬಂಧಿತರಾಗಿದ್ದ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೊನೆಗೂ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದಾರೆ.
53 ದಿನಗಳ ಕಾಲ ಬಂಧನದಲ್ಲಿದ್ದ ಅವರು, ಆರೋಗ್ಯ ಕಾರಣದಿಂದ ನಾಲ್ಕು ವಾರಗಳ ಕಾಲ ಜಾಮೀನು ಪಡೆದು ಹೊರಬಂದಿದ್ದಾರೆ. ಚಂದ್ರಬಾಬು ನಾಯ್ಡು ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಬೆಂಬಲಿಗರು ಮತ್ತು ಅಭಿಮಾನಿಗಳು ಪಟಾಕಿಗಳನ್ನು ಸಿಡಿಸಿ ಮತ್ತು ಸಿಹಿ ಹಂಚಿ ಸಂಭ್ರಮಿಸಿದರು. ಅವರಿಗೆ ಜಾಮೀನು ಸಿಗುತ್ತಿದ್ದಂತೆ ರಾಜ್ಯಾದ್ಯಂತ ಬೆಂಬಲಿಗರು ಸಂಭ್ರಮಾಚರಣೆ ಮಾಡಿದ್ದರು.

ಚಂದ್ರಬಾಬು ನಾಯ್ಡು ಅವರು ರಾಜಮಂಡ್ರಿ ಕೇಂದ್ರ ಕಾರಾಗೃಹದಿಂದ ಗುಂಟೂರಿನ ಉಂಡವಳ್ಳಿಯಲ್ಲಿರುವ ಅವರ ಮನೆಗೆ ರಸ್ತೆ ಮೂಲಕ ಪ್ರಯಾಣಿಸುವ ಸಂದರ್ಭದಲ್ಲಿ ತಡರಾತ್ರಿಯವರೆಗೆ, ತಮ್ಮ ನಾಯಕನ ನೋಡಲು, ಸ್ವಾಗತಿಸಲು ಅಪಾರ ಪ್ರಮಾಣದಲ್ಲಿ ಬೆಂಬಲಿಗರು ಸೇರಿದ್ದರು.
ರಾಜಕೀಯವಾಗಿ ಕಟ್ಟಿಹಾಕಲು ತಂತ್ರ!
ಇನ್ನು ಆರು ತಿಂಗಳಿನಲ್ಲಿ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಚಂದ್ರಬಾಬು ನಾಯ್ಡು ಸಿದ್ಧತೆ ಮಾಡಿಕೊಳ್ಳುವ ಸಂದರ್ಭದಲ್ಲೇ ಅವರನ್ನು ಬಂಧಿಸಲಾಗಿದೆ. ಇದು ಟಿಡಿಪಿ ನಾಯಕರು ಮತ್ತು ಪಕ್ಷದ ಕಾರ್ಯಕರ್ತರ ಆತ್ಮವಿಶ್ವಾಸಕ್ಕೆ ಪೆಟ್ಟುಕೊಟ್ಟಿದೆ.
ಚಂದ್ರಬಾಬು ನಾಯ್ಡು ಅವರಿಗೆ ನ್ಯಾಯಾಲಯದಿಂದ ಸಿಕ್ಕಿರುವುದು ತಾತ್ಕಾಲಿಕ ವಿರಾಮ ಎಂದು ಚೆನ್ನಾಗಿ ತಿಳಿದಿದೆ. ನವೆಂಬರ್ 28 ರಂದು ಸಂಜೆ 5 ಗಂಟೆಯೊಳಗೆ ಜೈಲು ಅಧೀಕ್ಷಕರಿಗೆ "ಶರಣಾಗುವಂತೆ" ಕೇಳಲಾಗಿದೆ.
ನಾಯ್ಡು ಅವರ ಮೇಲೆ ಇನ್ನೂ ಕನಿಷ್ಠ ಮೂರು ಭ್ರಷ್ಟಾಚಾರದ ಆರೋಪದ ಪ್ರಕರಣಗಳು ದಾಖಲಾಗಿವೆ, ಫೈಬರ್ನೆಟ್ ಪ್ರಕರಣ, ಇನ್ನರ್ ರಿಂಗ್ ರೋಡ್ ಪ್ರಕರಣ ಮತ್ತು ಇತ್ತೀಚಿನ ಮದ್ಯದ ಪರವಾನಗಿ ಪ್ರಕರಣ ಕೂಡ ಅವರನ್ನು ಸುತ್ತಿಕೊಂಡಿದೆ, ಇವುಗಳಲ್ಲಿ ಅವರನ್ನು ಆರೋಪಿಯನ್ನಾಗಿ ಮಾಡಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಪಡೆಯಲು ಪ್ರಯತ್ನಗಳು ನಡೆಯುತ್ತಿವೆ. ಒಟ್ಟಾರೆ ಕಾನೂನು ಅಸ್ತ್ರ ಬಳಸಿ ನಾಯ್ಡು ಅವರನ್ನು ಹಣಿಯಲು ಪ್ರಯತ್ನಗಳು ನಡೆಯುತ್ತಿವೆ.
28ನೇ ವಯಸ್ಸಿಗೆ ಶಾಸಕ
ನಾಯ್ಡು ಅವರು 28 ನೇ ವಯಸ್ಸಿನಲ್ಲಿ ಅತ್ಯಂತ ಕಿರಿಯ ಶಾಸಕ, 30 ನೇ ವಯಸ್ಸಿನಲ್ಲಿ ಮಂತ್ರಿ, ಮತ್ತು ನಂತರ 45 ನೇ ವಯಸ್ಸಿನಲ್ಲಿ ಮುಖ್ಯಮಂತ್ರಿ ಆದ ರಾಜಕಾರಣಿ. 2004ರಲ್ಲಿ ಹೀನಾಯ ಸೋಲನ್ನು ಎದುರಿಸಿ, 2014ರಲ್ಲಿ ವಿಭಜಿತ ರಾಜ್ಯದ ಮುಖ್ಯಮಂತ್ರಿಯಾಗಿ, 2018ರಲ್ಲಿ ಮತ್ತೆ ಅಧಿಕಾರ ಕಳೆದುಕೊಂಡರು, ರಾಜಕೀಯದಲ್ಲಿ ಹಲವು ಏಳು ಬೀಳು ಕಂಡಿರುವ ಅವರು, ಈಗ ಯಾವ ದಾಳ ಉರುಳಿಸುತ್ತಾರೆ ಎನ್ನುವುದು ಕುತೂಹಲಕಾರಿಯಾಗಿದೆ.
2024 ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಆಂಧ್ರಪ್ರದೇಶವನ್ನು ಗೆಲ್ಲುವ ಮೂಲಕ ರಾಜಕೀಯ ಪುನರಾಗಮನವನ್ನು ಮಾಡುವುದು ಈ ಇತ್ತೀಚಿನ ಯುದ್ಧದಲ್ಲಿ ಅವರ ಉತ್ತಮ ಅವಕಾಶವಾಗಿದೆ.
ನಾಯ್ಡು ಅವರನ್ನು ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದರೂ, ಅವರ ರಾಜಕೀಯ ಚಟುವಟಿಕೆಯ ಮೇಲೆ ನಿರ್ಬಂಧಗಳನ್ನು ಹೇರಲಾಗಿದೆ. ಆದರೂ ಅವರು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಅವಕಾಶವನ್ನು ಬಳಸಿಕೊಂಡು ಜನರ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ವಿವಾದದಿಂದ ದೂರವಾಗುವಂತೆ ಭಾಷಣ
ನ್ಯಾಯಾಲಯ ವಿಧಿಸಿದ ಷರತ್ತುಗಳು ಮತ್ತು ನಾಯ್ಡು ಅವರು ಜಾಮೀನು ಪಡೆದ ನಂತರ, ಅವರು ರಾಜಕೀಯ ಭಾಷಣ ಮಾಡುವ ಅಪಾಯವಿದೆಯೇ ಎಂಬ ಅನುಮಾನವಿತ್ತು. ಆದರೂ ಅವರು ಭಾಷಣ ಮಾಡಿದರು, ಸಂದೇಶವನ್ನು ತಲುಪಿಸಿದರೂ, ಆದರೆ ಕಾನೂನು ವಿವಾದದಿಂದ ದೂರ ಉಳಿದರು.
ಭಾಷಣದಲ್ಲಿ ಮೇಲ್ನೋಟಕ್ಕೆ, ಇದು ತಮ್ಮನ್ನು ಸ್ವಾಗತಿಸಲು ಬಂದವರಿಗೆ ಧನ್ಯವಾದ ಹೇಳುವ ಭಾಷಣದಂತೆ ಕಂಡುಬಂದಿತು, ಇದು ರಾಜಕೀಯವಾಗಿ ತುಂಬಿದ ಭಾಷಣವಾಗಿತ್ತು, ಪ್ರಾಮಾಣಿಕತೆಯ ವ್ಯಕ್ತಿ, ಜನರು ಗೌರವಿಸುವ ಮತ್ತು ಪ್ರೀತಿಸುವ ವ್ಯಕ್ತಿ, ನನ್ನ 45 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ, ಬೇರೆಯವರಿಗೂ ತಪ್ಪು ಮಾಡಲು ಬಿಡುವುದಿಲ್ಲ ಎಂದರು.
ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಮತ್ತು ಪ್ರಪಂಚದಾದ್ಯಂತದ ಜನರ ಅಗಾಧ ಬೆಂಬಲಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಜನಸೇನೆ ಹೊರಬಂದು ಬಹಿರಂಗವಾಗಿ ನಮ್ಮನ್ನು ಬೆಂಬಲಿಸಿತು. ನಮಗೆ ಬಿಜೆಪಿ, ಬಿಆರ್‌ಎಸ್, ಸಿಪಿಐ ಮತ್ತು ಕಾಂಗ್ರೆಸ್‌ನಿಂದಲೂ ಬೆಂಬಲ ಸಿಕ್ಕಿತು ಎಂದು ಧನ್ಯವಾದ ಹೇಳಿದ್ದಾರೆ.
ಹಿಂದಿನ ತಿಂಗಳುಗಳಲ್ಲಿ ಎನ್‌ಡಿಎಗೆ ಹತ್ತಿರವಾಗುವ ಪ್ರಯತ್ನದಲ್ಲಿ ವಿಫಲವಾಗಿದ್ದರು. ಚುನಾವಣೆಗೆ ಕೇವಲ ಆರು ತಿಂಗಳುಗಳು ಬಾಕಿ ಇರುವಾಗ, ಅವರು ತಮ್ಮ ನಾಯಕರು ಮತ್ತು ಪಕ್ಷದ ಕಾರ್ಯಕರ್ತರ ಆತ್ಮವಿಶ್ವಾಸ ಉಳಿಸಬೇಕಾಗಿದೆ.
ಅದಕ್ಕಾಗಿಯೇ, ಅವರ ಅನುಪಸ್ಥಿತಿಯಲ್ಲಿ, ಚಂದ್ರಬಾಬು ನಾಯ್ಡು ಅವರ ಪತ್ನಿ ಭುವನೇಶ್ವರಿ ಮತ್ತು ಸೊಸೆ ಬ್ರಹ್ಮಣಿ, ಇಬ್ಬರೂ ರಾಜಕೀಯವಾಗಿ ಮುನ್ನಲೆಗೆ ಬಂದಿಲ್ಲವಾದರೂ, ವೇದಿಕೆಯನ್ನು ತೆಗೆದುಕೊಳ್ಳಲು ಮತ್ತು ಪಕ್ಷದ ರಾಜಕೀಯ ಚಟುವಟಿಕೆಯನ್ನು ಗರಿಗೆದರುವಂತೆ ಮಾಡಿದರು.
ಭುವನೇಶ್ವರಿ ಅವರ ಸತ್ಯ ಗೆಲ್ಲಬೇಕು (ನಿಜಂ ಗೆಲವಾಲಿ) ಯಾತ್ರೆಯನ್ನು ಮಾಡಿದರು. ಚಂದ್ರಬಾಬು ನಾಯ್ಡು ಜೈಲಿಗೆ ಹೋಗುವ ಆಘಾತದಿಂದ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಸುಮಾರು 150 ಕುಟುಂಬಗಳನ್ನು ಭುವನೇಶ್ವರಿ ಭೇಟಿ ಮಾಡಿ ಸಾಂತ್ವನ ಹೇಳಿದ್ದರು.
ತೆಲುಗು ದೇಶಂ ಮತ್ತು ಜನಸೇನೆ ಈ ರಾಜಕೀಯ ಚಟುವಟಿಕೆಗಳಲ್ಲಿ ಒಟ್ಟಿಗೆ ಗೋಚರಿಸುತ್ತಿವೆ, ಎರಡೂ ಪಕ್ಷಗಳು ಒಗ್ಗಟ್ಟಾಗಿರುವುದು ರಾಜಕೀಯವಾಗಿ ಲಾಭವಾಗಲಿದೆ ಎಂದು ನಂಬಲಾಗಿದೆ.
ತಿರುಮಲ-ತಿರುಪತಿಗೆ ಭೇಟಿಯ ನಂತರ, ನಾಯ್ಡು ಅವರು ಆಂಧ್ರಪ್ರದೇಶದಿಂದ ದೂರ, ಹೈದರಾಬಾದ್‌ನಲ್ಲಿ ಸಮಯ ಕಳೆಯುವ ನಿರೀಕ್ಷೆಯಿದೆ, ಎಲ್‌ವಿ ಪ್ರಸಾದ್ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.
-
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
Viral Video: ಲಂಡನ್ ರಸ್ತೆಯಲ್ಲಿ ರಾರಾಜಿಸಿದ ಭಾರತದ ಆಟೋ ರಿಕ್ಷಾ: ವಿಡಿಯೋ ನೋಡಿ ದೆಹಲಿ ಎಂದ ನೆಟ್ಟಿಗರು -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು











Click it and Unblock the Notifications