ದಕ್ಷಿಣ ಭಾರತೀಯರು ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಬೇಕು: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

ದಕ್ಷಿಣ ಭಾರತದ ರಾಜ್ಯಗಳ ಜನ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಕರೆ ನೀಡಿದ್ದಾರೆ. ವೃದ್ಧರ ಸಂಖ್ಯೆ ಹೆಚ್ಚುತ್ತಿದ್ದು, ಯುವಕರ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ ಅವರು, ಹೆಚ್ಚಿನ ಮಕ್ಕಳಿರುವ ಕುಟುಂಬಗಳಿಗೆ ಪ್ರೋತ್ಸಾಹ ಕೊಡಲು, ಹೊಸ ಕಾನೂನುಗಳನ್ನು ರಚಿಸುವ ಜೊತೆಗೆ ಜನಸಂಖ್ಯೆ ನಿರ್ವಹಣೆಯನ್ನು ಜಾರಿ ಮಾಡಲು ರಾಜ್ಯ ಸರ್ಕಾರ ಯೋಚಿಸುತ್ತಿದೆ ಎಂದು ಹೇಳಿದ್ದಾರೆ.

ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಮಾತ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಲು ಅರ್ಹರಾಗುವ ಕಾನೂನು ಜಾರಿ ಮಾಡಲು ಸರ್ಕಾರ ಯೋಜಿಸಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

chandrababu naidu calls for more children southern states

ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಾರದು ಎಂದು ಈ ಹಿಂದೆ ರಾಜ್ಯವು ಕಾನೂನು ರೂಪಿಸಿದೆ ಎಂದ ಅವರು, ನಾವು ಆ ಕಾನೂನನ್ನು ರದ್ದು ಮಾಡಿದ್ದೇವೆ. ಆ ಯೋಜನೆಯನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದ್ದು, ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ಸರ್ಕಾರವು ಹೆಚ್ಚಿನ ಪ್ರಯೋಜನ ನೀಡುವ ಬಗ್ಗೆ ಯೋಚಿಸುತ್ತದೆ ಎಂದರು.

ದಕ್ಷಿಣ ಭಾರತದಲ್ಲಿ ಸಮಸ್ಯೆ

2047ರವರೆಗೆ ಜನಸಂಖ್ಯೆ ಹೆಚ್ಚಳದ ಪ್ರಯೋಜನ ಹೊಂದಿದ್ದರೂ, ಆಂಧ್ರ ಪ್ರದೇಶ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿದ್ದು, ಯುವಕರ ಸಂಖ್ಯೆ ಕಡಿಮೆಯಾಗುತ್ತಿದೆ. ಜಪಾನ್, ಚೀನಾ ಮತ್ತು ಕೆಲವು ಯೂರೋಪ್‌ ರಾಷ್ಟ್ರಗಳು ವಯಸ್ಸಾದವರ ಸಂಖ್ಯೆಯನ್ನು ಹೆಚ್ಚಿಗೆ ಹೊಂದಿದ್ದು ಅನೇಕ ಸಮಸ್ಯೆ ಜೊತೆ ಹೋರಾಡುತ್ತಿವೆ. ದಕ್ಷಿಣ ಭಾರತದ ಯುವಜನತೆ ದೇಶದ ವಿವಿಧ ಭಾಗಗಳಿಗೆ ಅಥವಾ ವಿದೇಶಗಳಿಗೆ ವಲಸೆ ಹೋಗುತ್ತಿರುವುದರಿಂದ ಸಮಸ್ಯೆ ಹೆಚ್ಚಾಗಿದೆ ಎಂದರು.

ಭಾರತದಲ್ಲಿ ಫಲವತ್ತತೆ ದರ ಸರಾಸರಿ 2.1 ಇದ್ದರೆ ದಕ್ಷಿಣ ಭಾರತದ ಫಲವತ್ತತೆ ದರ 1.6ಕ್ಕೆ ಕಡಿಮೆಯಾಗಿದೆ. ಇದು ಇನ್ನೂ ಕಡಿಮೆಯಾದರೆ 2047 ರಲ್ಲಿ ಭಾರತದಲ್ಲಿ ಯುವಕರಿಗಿಂತ ಹೆಚ್ಚಿನ ಸಂಖ್ಯೆಯ ವೃದ್ಧರನ್ನು ನೋಡುತ್ತೇವೆ. ಆಂಧ್ರ ಮತ್ತು ದೇಶದ ಇತರ ಭಾಗಗಳ ಹಳ್ಳಿಗಳಲ್ಲಿ ಕೇವಲ ವಯಸ್ಸಾದವರು ಮಾತ್ರ ಉಳಿದುಕೊಂಡಿದ್ದಾರೆ. ಯುವಕರು ಹೆಚ್ಚಿನ ಪ್ರಮಾಣದಲ್ಲಿ ನಗರಗಳಿಗೆ ಸೇರುತ್ತಿದ್ದಾರೆ ಎಂದರು.

ಜನಸಂಖ್ಯಾ ನಿಯಂತ್ರಣ ಮಾಡಬೇಕು ಎಂದು ತಾವು ಈ ಮೊದಲು ಹೊಂದಿದ್ದ ನಿಲುವಿನ ಬಗ್ಗೆ ಮಾತನಾಡಿದ ಅವರು, ಆ ಸಮಯದಲ್ಲಿ ವಿರಳವಾಗಿದ್ದ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಣೆ ಮಾಡುವುದು ಗುರಿಯಾಗಿತ್ತು. ಬೆಳೆಯುತ್ತಿರುವ ಜನಸಂಖ್ಯೆಯುವ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ ಎನ್ನುವುದು ನನ್ನ ನಂಬಿಕೆಯಾಗಿತ್ತು. ಜನಸಂಖ್ಯೆಯ ಬೆಳವಣಿಗೆಯನ್ನು ಕಡಿಮೆ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ, ಆದರೆ ಅದರಿಂದ ಹೊಸ ಸವಾಲುಗಳನ್ನು ಎದುರಿಸುವಂತಾಗಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+