ಚಂಡೀಗಢದಲ್ಲಿರುವ ವಸತಿ ಘಟಕಗಳನ್ನು ಅಪಾರ್ಟ್‌ಮೆಂಟ್‌ಗಳಾಗಿ ಪರಿವರ್ತಿಸಬೇಡಿ: ಸುಪ್ರೀಂ ಕೋರ್ಟ್
ನವದೆಹಲಿ, ಜ. 11: ಚಂಡೀಗಢದ ಮೊದಲ 30 ಸೆಕ್ಟರ್‌ಗಳು ಲೆ ಕಾರ್ಬ್ಯುಸಿಯರ್ ವಲಯದ ಪಾರಂಪರಿಕ ಸ್ಥಾನಮಾನವನ್ನು ಹೊಂದಿವೆ. ಆದ್ದರಿಂದ, ಈ ವಲಯಗಳಲ್ಲಿ ವಸತಿ ಘಟಕಗಳನ್ನು ಅಪಾರ್ಟ್‌ಮೆಂಟ್‌ಗಳಾಗಿ ಪರಿವರ್ತಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.
ಚಂಡೀಗಢ ಹಂತ-1 ರ ವಸತಿ ಘಟಕಗಳನ್ನು ಬಹು ಮಹಡಿ ಅಪಾರ್ಟ್‌ಮೆಂಟ್‌ಗಳಾಗಿ ಪರಿವರ್ತಿಸುವುದು "ಅನೈತಿಕ ಮತ್ತು ಕಾನೂನುಬಾಹಿರ ಅಭ್ಯಾಸ" ಎಂದು ಕಿಡಿಕಾರಿದ್ದು, ವಸತಿ ಘಟಕಗಳನ್ನು ಅಪಾರ್ಟ್‌ಮೆಂಟ್‌ಗಳಾಗಿ ಪರಿವರ್ತಿಸುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಬಿ ವಿ ನಾಗರತ್ನ ಅವರ ಪೀಠವು ಪರಿಸರ ಪರಿಣಾಮ ಮೌಲ್ಯಮಾಪನ (ಇಐಎ) ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದೆ.

ಪಾರಂಪರಿಕ ವಲಯ ಎಂದು ಘೋಷಿಸಲಾದ ಹಂತ-I ರಲ್ಲಿನ 1 ರಿಂದ 30 ರವರೆಗಿನ ಸೆಕ್ಟರ್‌ಗಳಿಗೆ ಈ ತೀರ್ಪು ಅನ್ವಯಿಸುತ್ತದೆ. ಹಂತ-I ರಲ್ಲಿನ ಅಪಾರ್ಟ್‌ಮೆಂಟ್‌ಗಳನ್ನು ಸಹ ಕಾನೂನುಬಾಹಿರ ಎಂದು ಘೋಷಿಸಲಾಗಿದೆ.
131 ಪುಟಗಳ ತೀರ್ಪನ್ನು ಬರೆದು, ತೀರ್ಪಿನ ಪ್ರತಿಗಳನ್ನು ಕ್ಯಾಬಿನೆಟ್ ಕಾರ್ಯದರ್ಶಿ ಮತ್ತು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಲು ಆದೇಶಿಸಿದ ನ್ಯಾಯಮೂರ್ತಿ ಗವಾಯಿ, "ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವೆ ಸರಿಯಾದ ಸಮತೋಲನವನ್ನು ಸಾಧಿಸುವುದು ಅವಶ್ಯಕ" ಎಂದು ಹೇಳಿದ್ದಾರೆ.
ಹರಿಯಾಣ ಪಂಜಾಬ್‌ನ ವಿಭಜನೆಯಿಂದಾಗಿ ಚಂಡೀಗಢವನ್ನು ಕೇಂದ್ರಾಡಳಿತ ಪ್ರದೇಶ ಮತ್ತು ಎರಡೂ ರಾಜ್ಯಗಳ ರಾಜಧಾನಿಯನ್ನಾಗಿ ಮಾಡಲಾಯಿತು. ಚಂಡೀಗಢ ನಗರವು ಎರಡು ಹಂತಗಳಲ್ಲಿ ಅಭಿವೃದ್ಧಿಗೊಂಡಿದೆ. ಹಂತ-I ರಲ್ಲಿ 1 ರಿಂದ 30 ವಲಯಗಳು ಮತ್ತು ಹಂತ-II ರಲ್ಲಿ 31 ರಿಂದ 47 ವಿಭಾಗಗಳಿವೆ.
ವಸತಿ ಘಟಕಗಳನ್ನು ಅಪಾರ್ಟ್‌ಮೆಂಟ್‌ಗಳನ್ನಾಗಿಸಿವ ಮೂಲಕ ನಗರದ ಸೌಂದರ್ಯ ಮತ್ತು ಯೋಜನೆಗೆ ಹಾನಿ ಮಾಡಲಾಗುತ್ತಿದೆ. ಹೀಗಾಗಿ ಹಂತ-1 ರ ಮೂಲ ಯೋಜನೆಯ ಪ್ರಕಾರ ಕಡಿಮೆ ಜನಸಂಖ್ಯೆಯ ಸಾಂದ್ರತೆಯನ್ನು ಉಲ್ಲಂಘಿಸಲಾಗಿದೆ. ಚಂಡೀಗಢದ ಮಾಸ್ಟರ್ ಪ್ಲಾನ್ 2031 ರ ಅಡಿಯಲ್ಲಿ ಇದನ್ನು ನಿಷೇಧಿಸಲಾಗಿದೆ ಎಂದು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಆರೋಪಿಸಿದೆ.
ಸೆಕ್ಟರ್ 10 ರ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ ನಂತರ 2016 ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಈ ವಿಷಯದ ಬಗ್ಗೆ ಅರ್ಜಿ ಸಲ್ಲಿಸಿತ್ತು.












Click it and Unblock the Notifications