ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪ್ರತಿಮಾ ಭೂಮಿಕ್‌ನ ತ್ರಿಪುರಾ ನೂತನ ಸಿಎಂ?
ತ್ರಿಪುರಾ, ಮೇ 14: ತ್ರಿಪುರಾ ಮುಖ್ಯಮಂತ್ರಿ ಸ್ಥಾನಕ್ಕೆ ಬಿಪ್ಲಬ್ ಕುಮಾರ್ ದೇಬ್ ರಾಜೀನಾಮೆ ನೀಡಿದ ಬೆನ್ನಲ್ಲೇ ಅವರ ಸ್ಥಾನಕ್ಕೆ ಈಗ ಕೇಂದ್ರ ಸಚಿವ ಪ್ರತಿಮಾ ಭೂಮಿಕ್ ಅವರ ಹೆಸರು ಕೇಳಿ ಬಂದಿದೆ.
ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಬಿಜೆಪಿ ವರಿಷ್ಠರ ಸೂಚನೆಯಂತೆ ಬಿಪ್ಲಬ್ ಕುಮಾರ್ ದೇಬ್ ಅವರು ರಾಜೀನಾಮೆ ಈಗಷ್ಟೇ ನೀಡಿದ್ದರು. ಈಗ ಅವರ ಸ್ಥಾನಕ್ಕೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವೆ ಪ್ರತಿಮಾ ಭೂಮಿಕ್ ಅವರನ್ನು ನೇಮಿಸುವ ಮಾತುಕತೆಗಳು ಆರಂಭವಾಗಿವೆ ಎಂದು ಮೂಲಗಳು ಹೇಳುತ್ತಿವೆ.
ಇಂದು ರಾತ್ರಿ 8 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಅಲ್ಲಿ ಹೊಸ ಸಿಎಂ ಆಯ್ಕೆ ಮಾಡುವ ಸಾಧ್ಯತೆ ಇದೆ. ಸದ್ಯ ಕೇಂದ್ರ ಸಚಿವೆ ಆಗಿರುವ ಪ್ರತಿಮಾ ಭೂಮಿಕ್ ಅವರು ತ್ರಿಪುರಾದ ಸಿಎಂ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
2018 ರ ತ್ರಿಪುರಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ ನಂತರ ದೇಬ್ ರಾಜ್ಯದ ಮುಖ್ಯಮಂತ್ರಿಯಾದರು, ಎಡರಂಗ ಸರ್ಕಾರದ 25 ವರ್ಷಗಳ ಸುದೀರ್ಘ ಆಡಳಿತವನ್ನು ಕೊನೆಗೊಳಿಸಿದ್ದರು.
Comments
English summary
chance to prathima bumik is the new cm of tripura,
Story first published: Saturday, May 14, 2022, 17:36 [IST]