ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್ 23, 24ಕ್ಕೆ ದೆಹಲಿಯಲ್ಲಿ ಬ್ಯಾಂಕಿಂಗ್ ಸಮಾವೇಶ, ನಿರೀಕ್ಷೆಗಳೇನು?

|
Google Oneindia Kannada News

ನವದೆಹಲಿ, ಆಗಸ್ಟ್ 21: ಇದೇ ತಿಂಗಳ 23, 24ನೇ ತಾರೀಕು ಎರಡು ದಿನಗಳ ಬ್ಯಾಂಕಿಂಗ್ ಸಮಾವೇಶ ದೆಹಲಿಯಲ್ಲಿ ನಡೆಯಲಿದೆ. ಆರ್ಥಿಕ ನೀತಿ ಸಂಶೋಧನಾ ಕೇಂದ್ರವು (ಸಿಇಪಿಆರ್) ನೀತಿ ಆಯೋಗದ ಜತೆಗೂಡಿ ಈ ಸಮಾವೇಶವನ್ನು ಆಯೋಜಿಸಿದೆ.

ಬ್ಯಾಂಕಿಂಗ್ ವಲಯದಲ್ಲಿನ ಪ್ರತಿ ಸಮಸ್ಯೆ ಹಾಗೂ ಅದನ್ನು ನಿವಾರಿಸಲು ಕೈಗೊಳ್ಳಬೇಕಾದ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಸಿ, ವರದಿಯೊಂದನ್ನು ಸರಕಾರ ನೀಡಲು ತೀರ್ಮಾನಿಸಲಾಗಿದೆ. ಹೀಗೆ ಮಾಡುವುದರಿಂದ ದೀರ್ಘಾವಧಿಗೆ ಸುಧಾರಣೆಗಾಗಿ ಅಗತ್ಯ ಇರುವ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ.

ಜಿಡಿಪಿ ಬೆಳವಣಿಗೆಯಲ್ಲಿ ಏರಿಕೆ: ನೋಟು ರದ್ದತಿ ಬಳಿಕ ಇದು ಅತ್ಯಧಿಕ ಜಿಡಿಪಿ ಬೆಳವಣಿಗೆಯಲ್ಲಿ ಏರಿಕೆ: ನೋಟು ರದ್ದತಿ ಬಳಿಕ ಇದು ಅತ್ಯಧಿಕ

ಆಯೋಜಕರಲ್ಲಿ ಒಬ್ಬರಾದ ಗೋಪಾಲ್ ಕೃಷ್ಣ ಅಗರ್ ವಾಲ್ ಒನ್ಇಂಡಿಯಾ ಜತೆ ಮಾತನಾಡಿ, ನೀತಿ ಆಯೋಗ ಮಾತ್ರವಲ್ಲ, ಸಿಇಪಿಆರ್ ನಿಂದಲೂ ಪ್ರತಿ ಅಗತ್ಯವನ್ನು ವರದಿಯಲ್ಲಿ ಸೇರಿಸಲಾಗುವುದು. ಹಲವಾರು ಸಚಿವರು ಸಮಾವೇಶದ ಎಲ್ಲ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಆದರೂ ನಾವು ಸಮಾವೇಶದಲ್ಲಿ ಕೇಳಿಬರುವ ಎಲ್ಲ ಮಾಹಿತಿಯನ್ನು ಸರಕಾರಕ್ಕೆ ನೀಡುತ್ತೇವೆ ಎಂದಿದ್ದಾರೆ.

CEPR and NITI Aayog to submit India Banking Conclave report to the government

ಈ ಸಮಾವೇಶದಲ್ಲಿ ಪ್ಯಾನೆಲ್ ಡಿಸ್ಕಷನ್ ನಲ್ಲಿ ನಾಲ್ಕು ವಿಭಾಗ ಇರುತ್ತದೆ. ಮೊದಲು ಸಾರ್ವಜನಿಕ ವಲಯದ ಬ್ಯಾಂಕ್ ಗಳು ಮತ್ತು ಇತರ ಆರ್ಥಿಕ ಸಂಸ್ಥೆಗಳು; ಎರಡನೆಯದಾಗಿ ನೀತಿ ನಿರೂಪಕರು (ರೆಗ್ಯುಲೇಟರ್ಸ್); ಮೂರನೆಯದು ಗ್ರಾಹಕರು ಮತ್ತು ಶೈಕ್ಷಣಿಕ ತಜ್ಞರು, ಸಂಶೋಧಕರು ಮತ್ತು ನಾಲ್ಕನೆಯದಾಗಿ ಥಿಂಕ್ ಟ್ಯಾಂಕ್ ಗಳು ಪಾಲ್ಗೊಳ್ಳಲಿದ್ದಾರೆ.

ವಾಟ್ಸಾಪ್ ಬ್ಯಾಂಕಿಂಗ್ ಬಾಗಿಲು ತೆರೆಯಲು ಸಿದ್ಧವಾಗಿದೆ!ವಾಟ್ಸಾಪ್ ಬ್ಯಾಂಕಿಂಗ್ ಬಾಗಿಲು ತೆರೆಯಲು ಸಿದ್ಧವಾಗಿದೆ!

ಹೀಗೆ ಮಾಡುವುದರಿಂದ ಎಲ್ಲ ವಿಭಾಗಗಳ ದೃಷ್ಟಿಕೋನ ಏನು ಎಂಬ ಬಗ್ಗೆ ಗೊತ್ತಾಗುತ್ತದೆ. ಗ್ರಾಹಕರಿಗೂ ಅನುಕೂಲವಾಗುತ್ತದೆ. ಸರಕಾರವು ಬ್ಯಾಂಕಿಂಗ್ ವಲಯಕ್ಕಾಗಿ ಸಾಕಷ್ಟು ಮಾಡಿದೆ. ಅದು ಕೂಡ ತಿಳಿದು ಬರಲಿದೆ ಎಂದು ಅಗರ್ ವಾಲ್ ಹೇಳಿದ್ದಾರೆ.

ಬ್ಯಾಂಕಿಂಗ್ ವ್ಯವಸ್ಥೆ ಸರಿಪಡಿಸಲು 'ನೀಲಕಂಠ'ನಾಗಲೂ ಸಿದ್ಧ: ಊರ್ಜಿತ್ ಬ್ಯಾಂಕಿಂಗ್ ವ್ಯವಸ್ಥೆ ಸರಿಪಡಿಸಲು 'ನೀಲಕಂಠ'ನಾಗಲೂ ಸಿದ್ಧ: ಊರ್ಜಿತ್

ಮುಂದಿನ ಒಂದು ದಶಕದಲ್ಲಿ ಭಾರತವು ಹತ್ತು ಬಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆ ಆಗುವ ದೆಸೆಯಲಿದೆ. ಆದ್ದರಿಂದ ದೊಡ್ಡ ಮಟ್ಟದ ಹಣಕಾಸು ಒದಗಿಸಲು ಬ್ಯಾಂಕಿಂಗ್ ಕ್ಷೇತ್ರದ ಪಾತ್ರ ಬಹಳ ಮುಖ್ಯವಾದದ್ದು. ಭಾರತದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹಣಕಾದು ಹೇಗೆ ಹೊಂದಿಸಿಕೊಳ್ಳುವುದು ಎಂಬ ಬಗ್ಗೆ ಕೂಡ ಸಮಾವೇಶದಲ್ಲಿ ಚರ್ಚೆಗಳು ಆಗುತ್ತವೆ. ಕೆಲವು ಪರಿಹಾರಗಳು ಕೂಡ ದೊರೆಯುವ ನಿರೀಕ್ಷೆಗಳಿವೆ.

English summary
Two-day India Banking Conclave organised by Centre for Economic Policy Research with NITI Aayog is planned in such a way that deliberations on every issue that is good for the banking industry and such issues that is plaguing the sector will be compiled in a form of a report for handing it over to the government so than action can be initiated on them in the long run.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X