• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಏರಿಕೆ; ಮೂರು ರಾಜ್ಯಗಳಿಗೆ 50 ತಂಡಗಳನ್ನು ನಿಯೋಜಿಸಿದ ಕೇಂದ್ರ

|

ನವದೆಹಲಿ, ಏಪ್ರಿಲ್ 6: ದೇಶದಲ್ಲಿ ಕೊರೊನಾ ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರವು ಐವತ್ತು ಉನ್ನತ ಮಟ್ಟದ ಸಾರ್ವಜನಿಕ ಆರೋಗ್ಯಾಧಿಕಾರಿಗಳ ತಂಡವನ್ನು ರಚಿಸಿದ್ದು, ಮಹಾರಾಷ್ಟ್ರ, ಛತ್ತೀಸ್‌ಗಡ ಹಾಗೂ ಪಂಜಾಬ್‌ನ ಐವತ್ತು ಜಿಲ್ಲೆಗಳಿಗೆ ನಿಯೋಜಿಸಿದೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ಕೊರೊನಾ ಪ್ರಕರಣಗಳು ಕಂಡುಬರುತ್ತಿರುವುದರಿಂದ ಅಲ್ಲಿನ ಮೂವತ್ತು ಜಿಲ್ಲೆಗಳಿಗೆ, ಛತ್ತೀಸ್‌ಗಡದ ಹನ್ನೊಂದು ಜಿಲ್ಲೆಗಳಿಗೆ ಹಾಗೂ ಪಂಜಾಬ್‌ನ ಒಂಬತ್ತು ಜಿಲ್ಲೆಗಳಿಗೆ ಈ ತಂಡಗಳನ್ನು ನಿಯೋಜಿಸಿದ್ದು, ರಾಜ್ಯದ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತಕ್ಕೆ ಕೊರೊನಾ ಸಂಬಂಧ ನೆರವಾಗುವಂತೆ ಸೂಚಿಸಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಒಂದು ತಂಡವು ಇಬ್ಬರನ್ನೊಳಗೊಂಡಿರುವುದಾಗಿ ತಿಳಿದುಬಂದಿದೆ. ಈ ತಂಡಗಳು ರಾಜ್ಯಗಳಿಗೆ ಶೀಘ್ರವೇ ಭೇಟಿ ನೀಡುತ್ತವೆ. ಅಲ್ಲಿನ ಕೊರೊನಾ ನಿರ್ವಹಣೆ ಕುರಿತು ಪರಿಶೀಲನೆ ನಡೆಸುತ್ತವೆ. ಕೊರೊನಾ ಪರೀಕ್ಷೆ, ಕಂಟೇನ್ಮೆಂಟ್ ಕಾರ್ಯಾಚರಣೆ, ಕೊರೊನಾ ಮಾರ್ಗಸೂಚಿಗಳ ಪಾಲನೆ, ಇನ್ನಿತರ ಆರೋಗ್ಯ ಸೌಲಭ್ಯಗಳ ಕುರಿತು ನಿಗಾ ವಹಿಸಲಿವೆ ಎಂದು ತಿಳಿಸಿದೆ.

"ಪ್ಲೀಸ್.. 25 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ಕೊಡಿ"

ಇದರೊಂದಿಗೆ ಈ ಮೂರು ರಾಜ್ಯಗಳಿಗೆ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನಿಯೋಜಿಸಲಾಗಿದೆ. ನೋಡಲ್ ಅಧಿಕಾರಿಗಳೊಂದಿಗೆ ಈ ತಂಡವು ನಿರಂತರ ಸಂಪರ್ಕದಲ್ಲಿದ್ದು, ರಾಜ್ಯದ ಕೊರೊನಾ ಸ್ಥಿತಿಗತಿ ಕುರಿತು ಮಾಹಿತಿ ನೀಡುತ್ತಿರುತ್ತವೆ. ಕೊರೊನಾ ಪರೀಕ್ಷೆ, ಟ್ರೇಸಿಂಗ್, ಆಸ್ಪತ್ರೆ ಮೂಲ ಸೌಲಭ್ಯಗಳು, ಕೊರೊನಾ ನಿಯಮಾವಳಿಗಳ ಅನುಸರಣೆ ಹಾಗೂ ಕೊರೊನಾ ಲಸಿಕೆ, ಈ ಐದು ವಿಷಯಗಳ ಕುರಿತು ಈ ತಂಡವು ವರದಿ ನೀಡುತ್ತದೆ.

English summary
Centre deploys 50 public health teams to 3 states over increasing corona cases
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X