ಉದ್ಯೋಗಿಗಳ ತೆರಿಗೆರಹಿತ ಗ್ರಾಚ್ಯುಟಿ ಮಿತಿ 20 ಲಕ್ಷಕ್ಕೆ ಏರಿಕೆ
Recommended Video

ನವದೆಹಲಿ, ಸೆಪ್ಟೆಂಬರ್ 13: ತೆರಿಗೆರಹಿತ ಗ್ರಾಚ್ಯುಯಿಟಿ ಮೊತ್ತವನ್ನು ಇಪ್ಪತ್ತು ಲಕ್ಷಕ್ಕೆ ಏರಿಸುವ ತಿದ್ದುಪಡಿ ಮಸೂದೆಗೆ ಕೇಂದ್ರ ಸರಕಾರ ಮಂಗಳವಾರ (ಸೆಪ್ಟೆಂಬರ್ 12) ಒಪ್ಪಿಗೆ ನೀಡಿದೆ. ಆ ಮೂಲಕ ಈಗಿರುವ ಹತ್ತು ಲಕ್ಷ ಮಿತಿಯು ಎರಡು ಪಟ್ಟು ಆದಂತಾಗಿದೆ.
"ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟವು ಪೇಮಂಟ್ ಆಫ್ ಗ್ರಾಚ್ಯುಯಿಟಿ (ತಿದ್ದುಪಡಿ) ಮಸೂದೆ, 2017 ಅನ್ನು ಸಂಸತ್ ನಲ್ಲಿ ಮಂಡಿಸಲು ಒಪ್ಪಿಗೆ ನೀಡಿದೆ" ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಈ ತಿದ್ದುಪಡಿ ಮೂಲಕ ಖಾಸಗಿ, ಸಾರ್ವಜನಿಕ ಸ್ವಾಮ್ಯ ಹಾಗೂ ಸ್ವಾಯತ್ತ ಸಂಸ್ಥೆಗಳ ನೌಕರರಿಗೆ ಅನ್ವಯಿಸಲಿದ್ದು, ಗ್ರಾಚ್ಯುಯಿಟಿ ಗರಿಷ್ಠ ಮಿತಿ 20 ಲಕ್ಷಕ್ಕೆ ಏರಿಕೆಯಾಗಲಿದೆ. ಸದ್ಯಕ್ಕೆ ಈ ಮಿತಿ ಹತ್ತು ಲಕ್ಷ ರುಪಾಯಿ ಇದೆ. ಜನವರಿ 1, 2016ರಿಂದ ಈ ನಿಯಮ ಜಾರಿ ಆಗಲಿದೆ.
ಹಣದುಬ್ಬರ, ವೇತನ ಹೆಚ್ಚಳ ಮತ್ತಿತರ ಅಂಶಗಳನ್ನು ಗುರುತಿಸಲಾಗಿದೆ. ಪೇಮಂಟ್ ಆಫ್ ಗ್ರಾಚ್ಯುಯಿಟಿ ಕಾಯ್ದೆ 1972ರ ಅಡಿ ಬರುವ ಎಲ್ಲ ಉದ್ಯೋಗಿಗಳಿಗೂ ಇದು ಅನ್ವಯ ಆಗಲಿದೆ. ಹತ್ತು ಮತ್ತು ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳಿರುವ ಸಂಸ್ಥೆಗಳಿಗೆ ಈ ನಿಯಮ ಅನ್ವಯವಾಗಲಿದೆ.
ನಿವೃತ್ತಿ ನಂತರ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆ ದೊರೆಯಬೇಕು ಎಂಬ ಕಾರಣಕ್ಕೆ ಈ ನಿಯಮ ಜಾರಿಗೆ ತರಲಾಗುತ್ತಿದೆ.












Click it and Unblock the Notifications