8 ರಾಜ್ಯಕ್ಕೆ ನೂತನ ರಾಜ್ಯಪಾಲರು: ಅಲ್ಲೂ ರಾಜಕೀಯ ದೂರದೃಷ್ಠಿ!
ಕರ್ನಾಟಕ ಸೇರಿದಂತೆ ಎಂಟು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ಕೇಂದ್ರ ಸರಕಾರ ನೇಮಿಸಿ ಆದೇಶ ಹೊರಡಿಸಿದೆ. ಕರ್ನಾಟಕದಲ್ಲಿ ಸುಮಾರು ಏಳು ವರ್ಷಗಳಿಂದ ರಾಜ್ಯಪಾಲರಾಗಿದ್ದ ವಜುಭಾಯಿ ವಾಲಾ ಅವರ ಅಧಿಕಾರದ ಅವಧಿ ಇನ್ನೇನು ಮುಗಿಯಲಿದೆ.
ಎಂಟು ರಾಜ್ಯಪಾಲರ ನೇಮಕದ ವಿಚಾರದಲ್ಲಿ ಕೇಂದ್ರ ಸರಕಾರ ಸ್ಪಷ್ಟವಾಗಿ ಮುಂದಿನ ಅಸೆಂಬ್ಲಿ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡಿದೆ ಎನ್ನುವುದು ಸ್ಪಷ್ಟ. 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್'ಎಂದು ಕೇಂದ್ರ ಸರಕಾರ ಹೇಳುತ್ತಿದೆ.
ಸಾಮಾಜಿಕ ನ್ಯಾಯಕ್ಕೆ ಮೋದಿ ಸರಕಾರ ಮನ್ನಣೆಯನ್ನು ನೀಡಿರುವುದು ಒಂದು ಕಡೆಯಾದರೆ, ಮೇಲ್ವರ್ಗದವರ ಪಕ್ಷ ಎನ್ನುವ ಹಣೆಪಟ್ಟಿನಿಂದ ಹೊರಬರಲು ನಡೆಸಿರುವ ಕಸರತ್ತು ಇದು ಎಂದು ಹೇಳಬಹುದಾಗಿದೆ.
ಮುಂದಿನ ವರ್ಷ ನಡೆಯಲಿರುವ ಏಳು ರಾಜ್ಯಗಳ ಚುನಾವಣೆ ಮತ್ತು ವಿರೋಧ ಪಕ್ಷದವರಿಗೆ ಹಿನ್ನಡೆಯಾಗಲೆಂದೇ ರಾಜ್ಯಪಾಲರ ನೇಮಕದ ವಿಚಾರದಲ್ಲಿ ಬಿಜೆಪಿ ಜಾತಿ ಕಾರ್ಡ್ ಬಳಸಿಕೊಂಡಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ನೂತನವಾಗಿ ಆಯ್ಕೆಯಾಗಿರುವ ಎಂಟು ರಾಜ್ಯಪಾಲರು
ನೂತನವಾಗಿ ಆಯ್ಕೆಯಾಗಿರುವ ಎಂಟು ರಾಜ್ಯಪಾಲರ ಪೈಕಿ ಆರು ಜನ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗದವರು ಎನ್ನುವುದು ಗಮನಿಸಬೇಕಾದ ವಿಚಾರ. ಇದರಿಂದ, ದೇಶದ ನಾಲ್ಕು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ, ಮೂರು ರಾಜ್ಯಗಳಲ್ಲಿ ಹಿಂದುಳಿದ ವರ್ಗ, ಆರು ರಾಜ್ಯಗಳಲ್ಲಿ ಬುಡಕಟ್ಟು ಜನಾಂಗ ಮತ್ತು ಎರಡು ರಾಜ್ಯಗಳಲ್ಲಿ ಮುಸ್ಲಿಂ ಸಮುದಾಯದವರು ರಾಜ್ಯಪಾಲರಾಗಿದ್ದಾರೆ.

'ಸಾಮಾಜಿಕ ನ್ಯಾಯ'ಎಂದು ಬಿಜೆಪಿ ಜನರ ಮುಂದೆ ಹೋಗಬಹುದು
ಮುಂದಿನ ವರ್ಷದ ಆದಿಯಲ್ಲಿ ಗೋವಾ, ಮಣಿಪುರ, ಪಂಜಾಬ್, ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಚುನಾವಣೆ ನಡೆಯಬೇಕಿದೆ. ಅದರಲ್ಲಿ ಪ್ರಮುಖವಾಗಿ ಉತ್ತರಪ್ರದೇಶದಲ್ಲಿ ರಾಜ್ಯಪಾಲರಾಗಿ ಇರುವವರು ಪರಿಶಿಷ್ಟ ಜಾತಿಯ ಬೇಬಿರಾಣಿ ಮೌರ್ಯ ಅವರು. ಮಂಗಳವಾರ (ಜುಲೈ 6) ಘೋಷಣೆ ಮಾಡಿರುವ ರಾಜ್ಯಪಾಲರ ಪೈಕಿ ಚುನಾವಣೆ ನಡೆಬೇಕಾಗಿರುವುದು ಗೋವಾ ಮಾತ್ರವಾದರೂ, ಇತರ ರಾಜ್ಯಗಳ ಚುನಾವಣಾ ಪ್ರಚಾರಕ್ಕೆ 'ಸಾಮಾಜಿಕ ನ್ಯಾಯ'ಎಂದು ಬಿಜೆಪಿ ಜನರ ಮುಂದೆ ಹೋಗಬಹುದು.

ತಾವರ್ ಚಂದ್ ಗೆಹ್ಲೋಟ್ - ಕರ್ನಾಟಕ (ಪರಿಶಿಷ್ಟ ಜಾತಿ)
ಎಂಟು ನೂತನ ರಾಜ್ಯಪಾಲರ ಪೈಕಿ ಆರು ಜನ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗದವರು. ಅದು ಹೀಗಿದೆ:
ತಾವರ್ ಚಂದ್ ಗೆಹ್ಲೋಟ್ - ಕರ್ನಾಟಕ (ಪರಿಶಿಷ್ಟ ಜಾತಿ)
ರಾಜೇಂದ್ರನ್ ವಿಶ್ವನಾಥ್ ಅರಳೇಕರ್ - ಹಿಮಾಚಲ ಪ್ರದೇಶ (ಪರಿಶಿಷ್ಟ ಜಾತಿ)
ಸತ್ಯದೇವ ನಾರಾಯಣ ಆರ್ಯ - ತ್ರಿಪುರಾ (ಪರಿಶಿಷ್ಟ ಜಾತಿ)
(ಚಿತ್ರದಲ್ಲಿ: ತಾವರ್ ಚಂದ್ ಗೆಹ್ಲೋಟ್)

ಬಂಡಾರು ದತ್ತಾತ್ರೇಯ - ಹರಿಯಾಣ - ಬುಡಕಟ್ಟು ಜನಾಂಗ
ಇನ್ನುಳಿದಂತೆ ಮೂರು ರಾಜ್ಯಗಳ ರಾಜ್ಯಪಾಲರ ಜಾತಿ ಕಾರ್ಡ್ ಹೀಗಿದೆ:
ಮಂಗುಭಾಯ್ ಚಗನ್‌ಭಾಯ್ ಪಟೇಲ್ - ಮಧ್ಯಪ್ರದೇಶ- ಬುಡಕಟ್ಟು ಜನಾಂಗ
ಬಂಡಾರು ದತ್ತಾತ್ರೇಯ - ಹರಿಯಾಣ - ಬುಡಕಟ್ಟು ಜನಾಂಗ
ರಮೇಶ್ ಬಿಯಾಸ್ - ಜಾರ್ಖಂಡ - ಬುಡಕಟ್ಟು ಜನಾಂಗ
(ಚಿತ್ರದಲ್ಲಿ: ಬಂಡಾರು ದತ್ತಾತ್ರೇಯ)












Click it and Unblock the Notifications