ಸೆಂಟ್ರಲ್ ವಿಸ್ಟಾ ಹೊಸ ಸಂಸತ್ತಿನ ಕಟ್ಟಡವನ್ನು ವಿನ್ಯಾಸಗೊಳಿಸಿದ ವ್ಯಕ್ತಿ ಇವರೇ ನೋಡಿ
ನವದೆಹಲಿ, ಸೆಪ್ಟೆಂಬರ್ 19: ನವದೆಹಲಿಯಲ್ಲಿ ನಿರ್ಮಾಣವಾಗಿರುವ ಭಾರತದ ಹೊಸ ಸಂಸತ್ತಿನ ಕಟ್ಟಡವನ್ನು ಮೇ 27 ರಂದು ಉದ್ಘಾಟಿಸಲಾಗಿದೆ. ಆದರೆ ಹೊಸದಾಗಿ ನಿರ್ಮಿಸಲಾದ ರಚನೆಯಲ್ಲಿ ಇನ್ನೂ ಯಾವುದೇ ಅಧಿವೇಶನಗಳನ್ನು ನಡೆಸಲಾಗಿಲ್ಲ. ಈಗ ಸಂಸತ್ ವಿಶೇಷ ಅಧಿವೇಶನವನ್ನು ಹೊಸ ಕಟ್ಟದಲ್ಲಿ ನಡೆಸಲು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಹೊಸ ಸಂಸತ್ ಕಟ್ಟಡವನ್ನು ಬಿಮಲ್ ಪಟೇಲ್ ಎಂಬುವವರು ವಿನ್ಯಾಸಗೊಳಿಸಿದ್ದಾರೆ. ಬಿಮಲ್ ಪಟೇಲ್ ವಾಸ್ತುಶಿಲ್ಪ ಕ್ಷೇತ್ರದಲ್ಲಿ ಪ್ರಮುಖ ಹೆಸರು ಮತ್ತು ಹೊಸ ಸಂಸತ್ತಿನ ಕಟ್ಟಡದ ವಿನ್ಯಾಸಕಾರರಾಗಿದ್ದಾರೆ. ಇವರು ಗುಜರಾತ್ ಮೂಲದ ವಾಸ್ತುಶಿಲ್ಪಿ ಬಿಮಲ್ ಪಟೇಲ್ ಅವರು ಕಾಶಿ ವಿಶ್ವನಾಥ ಕಾರಿಡಾರ್‌ನ ಹಿಂದಿನ ವಿನ್ಯಾಸದ ವ್ಯಕ್ತಿಯೂ ಹೌದು. ಅವರು ಈ ಮೊದಲು ಸಾಬರಮತಿ ರಿವರ್‌ಫ್ರಂಟ್ ಯೋಜನೆಯನ್ನೂ ವಿನ್ಯಾಸಗೊಳಿಸಿದ್ದರು.

ಬಿಮಲ್ ಪಟೇಲ್ ಯಾರು?:
ಬಿಮಲ್ ಹಸ್ಮುಖ್ ಪಟೇಲ್ ಅವರು ಮೂರು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ಪ್ರಸಿದ್ಧ ವಾಸ್ತುಶಿಲ್ಪಿ. ಪಟೇಲ್ ಅವರು ಅಹಮದಾಬಾದ್‌ನ ಸಿಇಪಿಟಿ ವಿಶ್ವವಿದ್ಯಾಲಯದ ಅಧ್ಯಕ್ಷರಾಗಿದ್ದಾರೆ. ಅವರು HCP ವಿನ್ಯಾಸ ಯೋಜನೆ ಮತ್ತು ನಿರ್ವಹಣೆ ಪ್ರೈವೇಟ್ ಲಿಮಿಟೆಡ್‌ನ ಮುಖ್ಯಸ್ಥರಾಗಿದ್ದಾರೆ. HCP ಡಿಸೈನ್ ಪ್ಲಾನಿಂಗ್ ಅಂಡ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಅನ್ನು ಅವರ ತಂದೆ ಹಸ್ಮುಖ್ ಸಿ ಪಟೇಲ್ 1960 ರಲ್ಲಿ ಸ್ಥಾಪಿಸಿದ್ದರು.
ಬಿಮಲ್ ಪಟೇಲ್ ಅಹಮದಾಬಾದ್‌ನ ಸೇಂಟ್ ಕ್ಸೇವಿಯರ್ಸ್ ಹೈಸ್ಕೂಲ್‌ನಲ್ಲಿ ಶಿಕ್ಷಣ ಪಡೆದರು. ಶಾಲೆಯ ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ ಅವರು ಸ್ಕೂಲ್ ಆಫ್ ಆರ್ಕಿಟೆಕ್ಚರ್, ಸೆಂಟರ್ ಫಾರ್ ಎನ್ವಿರಾನ್ಮೆಂಟಲ್ ಪ್ಲಾನಿಂಗ್ ಅಂಡ್ ಟೆಕ್ನಾಲಜಿ ಕಲಿಯಲು CEPT ಗೆ ಹೋದರು. ಬಳಿಕ ಬಿಮಲ್ ಅವರು 1995 ರಲ್ಲಿ ಯುಎಸ್‌ನ ಯುಸಿ ಬರ್ಕ್ಲಿನಲ್ಲಿ ಪಿಎಚ್‌ಡಿ ಪಡೆದರು.
ಬಿಮಲ್ ಪಟೇಲ್ ಅವರಿಗೆ 2019 ರಲ್ಲಿ ಪದ್ಮಶ್ರೀ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಲಾಗಿದೆ. ವರದಿಗಳ ಪ್ರಕಾರ, ಬಿಮಲ್ ಪಟೇಲ್ ಅವರ ಸಂಸ್ಥೆಯು ಹೊಸ ಸಂಸತ್ತು ಸೇರಿದಂತೆ ಮಹತ್ವಾಕಾಂಕ್ಷೆಯ ಯೋಜನೆಗೆ ಸಲಹಾ ಸೇವೆಗಳಿಗಾಗಿ 229.75 ಕೋಟಿ ರೂಪಾಯಿಗಳನ್ನು ಪಡೆದಿದೆ ಎನ್ನಲಾಗಿದೆ.












Click it and Unblock the Notifications