Best Teachers Award 2024: ಕರ್ನಾಟಕದ 4 ಮಂದಿ ಸೇರಿ ದೇಶದ 50 ಶಿಕ್ಷಕರಿಗೆ 'ರಾಷ್ಟ್ರೀಯ ಪ್ರಶಸ್ತಿ' ಪ್ರಕಟ, ಹೆಸರುಗಳ ಪಟ್ಟಿ
ಬೆಂಗಳೂರು, ಸೆಪ್ಟಂಬರ್ 04: ಜನ್ಮ ನೀಡಿದ ತಂದೆ ತಾಯಿಯಂತೆ ಗುರುಗಳ ಪಾತ್ರವು ನಮ್ಮ ಜೀವನದಲ್ಲಿ ಮಹತ್ವದ್ದಾಗಿರುತ್ತದೆ. ಬುದುಕು ರೂಪಿಸಿದ, ನಮ್ಮ ಬಾಲ್ಯದಲ್ಲಿಯೇ ಭವಿಷ್ಯಕ್ಕೆ ಶಿಕ್ಷಣ ಹೆಸರಿನಲ್ಲಿ ಭದ್ರ ಬುನಾದಿ ಹಾಕುವ ಶಿಕ್ಷಕರಿಗೆ ಗೌರವ ಸಲ್ಲಿಸುವ ಪ್ರಯುಕ್ತ ಸೆಪ್ಟಂಬರ್ 05 ರಂದು 'ಶಿಕ್ಷಕರ ದಿನಾಚರಣೆ' (Teachers Day) ಆಚರಿಸಲಾಗುತ್ತದೆ. ಈ ಸುದಿನದಂತೆ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸಿದ ಗುರುಗಳನ್ನು ಗುರುತಿಸಿ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಸರ್ಕಾರವು ಗೌರವಿಸುತ್ತಾ ಬಂದಿದೆ.
ಮಕ್ಕಳ ಮೂಲಕ ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಶಿಕ್ಷಕರ ಪಾತ್ರವನ್ನು ಭಾರತ ಸರ್ಕಾರವು ಗೌರವಿಸುತ್ತದೆ. ಶೈಕ್ಷಣಿಕ ರಂಗದಲ್ಲಿ ಅತ್ಯಮೂಲ್ಯ ಕೊಡುಗೆ ನೀಡಿರುವ ಅರ್ಹರಿಗೆ 2024ರ ವಾರ್ಷಿಕ 'ಉತ್ತಮ ಶಿಕ್ಷಕರು ರಾಷ್ಟ್ರೀಯ ಪ್ರಶಸ್ತಿ' ಪ್ರದಾನ ಮಾಡುವ ಕೇಂದ್ರ ಸರ್ಕಾರ ಈ ಬಾರಿಯು ಪುರಸ್ಕೃತರ ಪಟ್ಟಿ ಪ್ರಕಟಿಸಿದೆ.

ನಾಳೆ ಸೆಪ್ಟಂಬರ್ 05ರಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ 'ಶಿಕ್ಷಕರ ದಿನಾಚರಣೆ' ಪ್ರಶಸ್ತಿ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯನ್ನು 50 ಪ್ರತಿಷ್ಠಿತ ಶಿಕ್ಷಕರಿಗೆ ನೀಡಿ ಗೌರವಿಸಲಿದ್ದಾರೆ.
ಕರ್ನಾಟಕದ ನಾಲ್ವರು ಸೇರಿದಂತೆ ದೇಶಾದ್ಯಂತ ಒಟ್ಟು 50 ಶಿಕ್ಷಕರು ಕಾರ್ಯಕ್ರಮದಲ್ಲಿ ₹ 50,000 ನಗದು ಹಾಗೂ ಬೆಳ್ಳಿ ಪದಕ ಮತ್ತು ಶಿಕ್ಷಕರ ಶ್ರೇಷ್ಠತೆ ಪ್ರಶಸ್ತಿ ಪತ್ರವನ್ನು ಪಡೆಯಲಿದ್ದಾರೆ. ಈ ಪ್ರಶಸ್ತಿಗಳು 2024ರಲ್ಲಿ ತಮ್ಮ ವಿದ್ಯಾರ್ಥಿಗಳ ಮೇಲೆ ಗಣನೀಯವಾಗಿ ಪ್ರಭಾವ ಬೀರಿದ, ಶೈಕ್ಷಣಿಕ ವ್ಯವಸ್ಥೆಗೆ ಕೊಡುಗೆ ನೀಡಿದವನ್ನು ಗುರುತಿಸಿ ನೀಡಲಾಗುತ್ತದೆ.
ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುವ ಮೂಲಕ ಶೈಕ್ಷಣಿಕ ರಂಗಕ್ಕೆ ಅವರು ನೀಡಿ ಕೊಡುಗೆಯನ್ನು ಸ್ಮರಿಸಲಾಗುತ್ತದೆ...
ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಲ್ಲಿದೆ
* ನರಸಿಂಹ ಮೂರ್ತಿ ಎಚ್.ಕೆ: ಕರ್ನಾಟಕ
* ಅಶೋಕ್ ಸೆಂಗುಪ್ತ : ಕರ್ನಾಟಕ
* ಎಚ್.ಎನ್.ಗಿರೀಶ್ : ಕರ್ನಾಟಕ
* ನಾರಾಯಣಸ್ವಾಮಿ ಆರ್: ಕರ್ನಾಟಕ
* ಅವಿನಾಶ ಶರ್ಮಾ : ಹರಿಯಾಣ
* ಚಾರು ಮೈನಿ: ಹರಿಯಾಣ
* ಬಲ್ಜಿಂದರ್ ಸಿಂಗ್ ಬ್ರಾರ್: ರಾಜಸ್ಥಾನ
* ಹುಕಮ್ ಚಂದ್ ಚೌಧರಿ: ರಾಜಸ್ಥಾನ
* ಕುಸುಮ ಲತಾ ಗರಿಯಾ: ಉತ್ತರಾಖಂಡ
* ಸುನಿಲ್ ಕುಮಾರ್: ಹಿಮಾಚಲ ಪ್ರದೇಶ
* ಪಂಕಜ್ ಕುಮಾರ್ ಗೋಯಲ್: ಪಂಜಾಬ್
* ರಾಜಿಂದರ್ ಸಿಂಗ್ : ಪಂಜಾಬ್
* ಚಂದ್ರಲೇಖಾ ದಾಮೋದರ ಮೇಷ್ಟ್ರು: ಗೋವಾ
* ಚಂದ್ರೇಶ್ ಕುಮಾರ್ ಬೋಳಶಂಕರ ಬೋರಿಸಾಗರ : ಗುಜರಾತ್
* ವಿನಯ್ ಶಶಿಕಾಂತ್ ಪಟೇಲ್ : ಗುಜರಾತ್
* ಮಾಧವ್ ಪ್ರಸಾದ್ ಪಟೇಲ್ : ಮಧ್ಯಪ್ರದೇಶ
* ಸುನೀತಾ ಗೋಧಾ : ಮಧ್ಯಪ್ರದೇಶ
* ಕೆ. ಶಾರದಾ: ಛತ್ತೀಸ್‌ಗಢ
* ದ್ವಿತಿ ಚಂದ್ರ ಸಾಹು: ಒಡಿಶಾ
* ಸಂತೋಷ್ ಕುಮಾರ್ ಕರ್ : ಒಡಿಶಾ
* ಆಶಿಶ್ ಕುಮಾರ್ ರಾಯ್ : ಪಶ್ಚಿಮ ಬಂಗಾಳ
* ಪ್ರಶಾಂತ ಕುಮಾರ್ ಮಾರಿಕ್: ಪಶ್ಚಿಮ ಬಂಗಾಳ
* ಉರ್ಫಾನಾ ಅಮೀನ್: ಜಮ್ಮು ಮತ್ತು ಕಾಶ್ಮೀರ
* ರವಿಕಾಂತ್ ದ್ವಿವೇದಿ : ಉತ್ತರ ಪ್ರದೇಶ
* ಶ್ಯಾಮ್ ಪ್ರಕಾಶ್ ಮೌರ್ಯ: ಉತ್ತರ ಪ್ರದೇಶ
* ಡಾ.ಮಿನಾಕ್ಷಿ ಕುಮಾರಿ: ಬಿಹಾರ
* ಸಿಕೇಂದ್ರ ಕುಮಾರ್ ಸುಮನ್ : ಬಿಹಾರ
* ಕೆ.ಸುಮಾ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
* ಸುನಿತಾ ಗುಪ್ತಾ: ಮಧ್ಯಪ್ರದೇಶ
* ಚಾರು ಶರ್ಮಾ: ದೆಹಲಿ
* ಜ್ಯೋತಿ ಪಂಕ : ಅರುಣಾಚಲ ಪ್ರದೇಶ
* ಲೆಫಿಜೊ ಅಪೋನ್ : ನಾಗಾಲ್ಯಾಂಡ್
* ನಂದಿತಾ ಚೋಂಗ್ತಮ್: ಮಣಿಪುರ
* ಯಂಕಿಲಾ ಲಾಮಾ: ಸಿಕ್ಕಿಂ
* ಜೋಸೆಫ್ ವನ್ಲಾಲ್ಹ್ರುಯಾ ಸೈಲ್ : ಮಿಜೋರಾಂ
* ಎವರ್ಲಾಸ್ಟಿಂಗ್ ಪೈಂಗ್ರೋಪ್ : ಮೇಘಾಲಯ
* ಡಾ. ನಾನಿ ಗೋಪಾಲ್ ದೇಬನಾಥ್ : ತ್ರಿಪುರಾ
* ದೀಪೇನ್ ಖಣಿಕರ್ : ಅಸ್ಸಾಂ
* ಆಶಾರಾಣಿ ಡಾ: ಜಾರ್ಖಂಡ್
* ಜಿನು ಜಾರ್ಜ್ : ಕೇರಳ
* ಕೆ.ಶಿವಪ್ರಸಾದ್ : ಕೇರಳ
* ಮಿಡಿ ಶ್ರೀನಿವಾಸ್ ರಾವ್: ಆಂಧ್ರಪ್ರದೇಶ
* ಸುರೇಶ ಕುನಾಟಿ : ಆಂಧ್ರಪ್ರದೇಶ
* ಮಾಂತಯ್ಯ ಚಿನ್ನಿ ಬೇಡ್ಕೆ: ಮಹಾರಾಷ್ಟ್ರ
* ಸಾಗರ್ ಚಿತ್ತರಂಜನ್ ಬಗಡೆ: ಮಹಾರಾಷ್ಟ್ರ
* ಪ್ರಭಾಕರ ರೆಡ್ಡಿ ಪೆಸರ : ತೆಲಂಗಾಣ
* ಥದುರಿ ಸಂಪತ್ ಕುಮಾರ್: ತೆಲಂಗಾಣ
* ಪಲ್ಲವಿ ಶರ್ಮಾ: ನವದೆಹಲಿ
* ಗೋಪಿನಾಥ್ ಆರ್ : ತಮಿಳುನಾಡು
* ಮುರಳೀಧರನ್ ರಮಿಯಾ ಸೇತುರಾಮನ್: ತಮಿಳುನಾಡು












Click it and Unblock the Notifications