Ayushman Bharat: ದೇಶದ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ದೀಪಾವಳಿ ಗಿಪ್ಟ್
ನವದೆಹಲಿ, ಅಕ್ಟೋಬರ್ 29: ಭಾರತದಲ್ಲಿ ಕಳೆದ ಸೆಪ್ಟಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ಅನುಮೋದನೆ ನೀಡಿದ್ದ 'ಆಯುಷ್ಮಾನ್ ಪ್ರಧಾನಮಂತ್ರಿ ಜನ ಆರೋಗ್ಯ' ಯೋಜನೆ ಹಾಗೂ ಬಹುಕೋಟಿ ಮೊತ್ತದ ಯೋಜನೆಗಳಿಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದರು. ಹಿರಿಯ ನಾಗರಿಕರ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಕೇಂದ್ರವು ಮಹತ್ವದ ಯೋಜನೆಗೆ (ABPMJAY) ಗ್ರೀನ್ ಸಿಗ್ನಲ್ ನೀಡಿದೆ.
ಈ ಯೋಜನೆಗಳಿಂದ ದೇಶದ ಸುಮಾರು 06 ಕೋಟಿ ಹಿರಿಯ ನಾಗರಿಕರಿಗೆ ಆರೋಗ್ಯ ರಕ್ಷಣೆಯ ಖಚಿತತೆ ಲಭ್ಯವಾಗುತ್ತಿದೆ. ಅಂದರೆ ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಚಿವ ಸಂಪುಟದಲ್ಲಿ 70 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ 5 ಲಕ್ಷ ರೂಪಾಯಿವರೆಗಿನ ಆರೋಗ್ಯ ವಿಮಾ ಯೋಜನೆ ಇದಾಗಿದೆ.

ಈ ಆಯುಷ್ಮಾನ್ ಭಾರತ್ ಯೋಜನೆ ಹಾಗೂ U-WIN ಪೋರ್ಟಲ್ ಅನ್ನು ಸಹ ಪ್ರಧಾನಿ ಮೋದಿ ಅನಾವರಣಗೊಳಿಸಿದ್ದಾರೆ. ದೇಶದ 4.5 ಕೋಟಿ ಕುಟುಂಬಗಳು ಹಾಗೂ ಒಟ್ಟು ಆರು ಕೋಟಿ ವೃದ್ಧರಿಗೆ ಈ 'ಆಯುಷ್ಮಾನ್ ಪ್ರಧಾನಮಂತ್ರಿ ಜನ ಆರೋಗ್ಯ' (ABPMJAY) ಯೋಜನೆ ಸಹಾಯ ಮಾಡಲಿದೆ.
ಕಡಿಮೆ ಆದಾಯ ಹೊಂದಿರುವವರು ಮಾತ್ರವಲ್ಲದೇ ಕಡು ಬಡವರು, ಮಧ್ಯಮ ವರ್ಗದವರು, ಮೇಲ್‌ಮಧ್ಯಮ ವರ್ಗದವರಿ (ಶ್ರೀಮಂತರು) ಒಳಗೊಂಡಂತೆ ಜಾತಿ ಭೇದ ಇಲ್ಲದೇ 70 ವರ್ಷ ಇಲ್ಲವೇ ಅದಕ್ಕಿಂತ ಹೆಚ್ಚು ವಯಸ್ಸಾದವರು ಈ ಯೋಜನೆ ಫಲಾನುಭವಿಗಳಾಗುತ್ತಾರೆ.
ರೂ. 5 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ
ಯೋಜನೆಯಡಿ ಒಮ್ಮೆ ನೋಂದಣಿಯಾದರೆ ಫಲಾನುಭವಿ ಹಿರಿಯ ನಾಗರಿಕರು AB PMJAY ನೆಟ್‌ವರ್ಕ್ ಅಡಿಯಲ್ಲಿ ದೇಶದ, ನಿಮ್ಮ ರಾಜ್ಯದ ಯಾವುದೇ ಆಸ್ಪತ್ರೆಯಲ್ಲಿ ರೂ. 5 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಪಡೆಯಬಹುದು. ಇದು ಸೇರಿದಂತೆ ಹಲವು ಸೌಲಭ್ಯಗಳು ಈ ಯೋಜನೆಯಿಂದ ದೊರಕಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಈ ಯೋಜನೆ ವ್ಯಾಪ್ತಿಯಡಿ ಈಗಾಗಲೇ ಅರ್ಹ ಹಿರಿಯ ನಾಗರಿಕರು ನೋಂದಣಿ ಮಾಡಿಕೊಂಡಿದ್ದರೆ, ಹೊಸ ಯೋಜನೆ ಜಾರಿ ಬಳಿಕ ನಿಮ್ಮ ಕಾರ್ಡ್‌ಗೆ ಹೆಚ್ಚುವರಿ ಅನುದಾನ ಸೇರ್ಪಡೆಯಾಗಲಿದೆ. ನಿಮಗೆ ಪ್ರತಿ ವರ್ಷ 5 ಲಕ್ಷವರೆಗೆ ವಿಮೆ ಅನುದಾನದಡಿ ಚಿಕಿತ್ಸೆ ಪಡೆಯಲು ಅರ್ಹರಾಗುತ್ತೀರಿ.
ವಿಶೇಷವೆಂದರೆ ಸರ್ಕಾರದ ಇತರ ಯಾವುದೇ ಯೋಜನೆ, ಆರೋಗ್ಯ ವಿಮೆ ಪಡೆದುಕೊಂಡಿದ್ದರೂ ಸಹಿತ ಈ ಯೋಜನೆಯ ಲಾಭವನ್ನು ಅರ್ಹರು ಫಲಾನುಭವಿಗಳಾಗುತ್ತಾರೆ. ಕೇಂದ್ರ ಇತರ ಪಡೆಗಳಲ್ಲಿ ಕಾರ್ಯನಿರ್ವಹಿಸಿದ್ದವರು, ಅದರೊಂದಿಗೆ ಈ ಆಯಷ್ಮಾನ್ ಭಾರತ್ ಯೋಜನೆ ಆರೋಗ್ಯ ಲಾಭ ಪಡೆದುಕೊಳ್ಳಬಹುದು ಎಂದು ಕೇಂದ್ರವು ಮಾಹಿತಿ ನೀಡಿದೆ.
ಖಾಸಗಿ ಕಂಪನಿ ಆರೋಗ್ಯ ವಿಮೆ ಪಡೆದವರು ಅರ್ಹರು
ಮುಖ್ಯ ವಿಷಯವೆಂದರೆ 70 ವರ್ಷ ಮೇಲ್ಪಟ್ಟವರು ಖಾಸಗಿ ಕಂಪನಿಗೆ ಆರೋಗ್ಯ ವಿಮೆ ಇಲ್ಲವೇ ಸರ್ಕಾರಿ ನೌಕರರಿಗೆ ನೀಡುವ ವಿಮಾ ಯೋಜನೆ ಇದ್ದರೂ ಸಹಿತ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಪಡೆಯಬಹುದಾಗಿದೆ.
ಆಯುಷ್ಮಾನ್ ಕಾಡ್ ಹೊಂದಿದ ನಾಗರಿಕರಿಗೆ ಐದು ಲಕ್ಷ ರೂ.ವರೆಗೆ ನಿಗಿದಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸಿಗಲಿದೆ. ವೈದ್ಯಕೀಯ ತಪಾಸಣೆ, ಚಿಕಿತ್ಸೆ, ಔಷಧಿ, ಇತರ ಪೂರಕ ಚಿಕಿತ್ಸೆ, ತೀವ್ರ ನಿಗಾ ಘಟಕ ಇನ್ನಿತರ ಸೇವೆಗಳು ಈ ಯೋಜನೆಯಡಿ ಸಿಗಲಿವೆ..












Click it and Unblock the Notifications