7th Pay Commission: ಸರ್ಕಾರಿ ನೌಕರರಿಗೆ ಭರ್ಜರಿ ನ್ಯೂಸ್: ಐಶಾರಾಮಿ ರೈಲುಗಳಲ್ಲಿ ಸಂಚಾರಕ್ಕೆ ಅವಕಾಶ ನೀಡಿ ಆದೇಶ

ನವದೆಹಲಿ, ಜನವರಿ 16: ಕೇಂದ್ರ ಸರ್ಕಾರ ಬಜೆಟ್‌ ಮಂಡನೆಗೆ ಸಿದ್ಧತೆ ಆರಂಭಿಸಿದೆ. ಫೆಬ್ರವರಿ ಮೊದಲ ವಾರ ಬಜೆಟ್ ಮಂಡನೆ ಆಗಲಿದ್ದು, ಅದಕ್ಕೂ ಮೊದಲೇ ಸರ್ಕಾರ ತನ್ನ ನೌಕರರಿಗೆ ಭರ್ಜರಿ ಗುಡ್ ನ್ಯೂಸ್‌ವೊಂದನ್ನ ನೀಡಿದೆ. ರಜೆ ಪ್ರಯಾಣ ರಿಯಾಯಿತಿ (LTC) ನಿಯಮಗಳಲ್ಲಿ ಮಹತ್ವದ ಬದಲಾವಣೆ ತರುವ ಮೂಲಕ ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣಿಕರಿಗೆ ಸಂಚಾರಕ್ಕೆ ಅವಕಾಶ ನೀಡಿ ಆದೇಶ ಹೊರಡಿಸಿದೆ. 7ನೇ ವೇತನ ಆಯೋಗದ ಪ್ರಯೋಜನ ಪಡೆಯುವವರಿಗೆ ಮತ್ತೊಂದು ಸರ್ಕಾರಿ ಸೌಲಭ್ಯ ಸಿಗಲಿದೆ.

ಹಲವು ಮನವಿ ಮತ್ತು ಒತ್ತಾಯಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ನೌಕರರ ರಜೆ ಪ್ರಯಾಣ ರಿಯಾಯಿತಿ (LTC) ನಿಯಮಗಳಲ್ಲಿ ಬದಲಾವಣೆ ತಂದಿದೆ. ಹೊಸ ನಿಯಮಗಳ ಪ್ರಕಾರ, ಕೇಂದ್ರ ಸರ್ಕಾರಿ ನೌಖರರು ಈ ರಜೆ ಪ್ರಯಾಣ ರಿಯಾಯಿತಿ (LTC) ಯೋಜನೆ ಯಡಿ ಪ್ರೀಮಿಯಂ ರೈಲುಗಳಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ.

Central Has Changed LTC Rules to Allow Government Employees to Travel in Premium Trains

ಈ ಪ್ರೀಮಿಯಂ ರೈಲುಗಳಿಗೆ ಅವಕಾಶ

ಭಾರತೀಯ ರೈಲ್ವೆ ಇಲಾಖೆಯ ತೇಜಸ್, ವಂದೇ ಭಾರತ್ ಮತ್ತು ಹಮ್‌ಸಫರ್ ರೈಲುಗಳ ಪ್ರಯಾಣಿಸಲು ಸರ್ಕಾರ ಅನುಮತಿ ನೀಡಿ ಆದೇಶ ಹೊರಡಿಸಲಾಗಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಕಚೇರಿ ಸಿಬ್ಬಂದಿ, ನೌಕರರ ಸಂಘಗಳು ನೀಡಿದ ಮನವಿ ಮೇರೆಗೆ ಸರ್ಕಾರ ಈ ಸೌಲಭ್ಯಕ್ಕೆ ಅವಕಾಶ ನೀಡಿ ಆದೇಶ ಪ್ರಕಟಿಸಿದೆ.

ಸರ್ಕಾರಿ ನೌಕರರಿಗೆ ಈ ವಿಷೇಶ ಸೌಲಭ್ಯ ಕಲ್ಪಿಸಲು ವೆಚ್ಚವನ್ನು ಭರಿಸುವುದರ ಕುರಿತು ರೈಲ್ವೆ ಇಲಾಖೆ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಲಾಗುತ್ತದೆ. ಸದ್ಯ ದೇಶದಲ್ಲಿ ಅಸ್ತಿತ್ವದಲ್ಲಿರುವ ರಾಜಧಾನಿ, ಶತಾಬ್ದಿ ಮತ್ತು ಡುರೊಂಟೊ ರೈಲುಗಳನ್ನು ಬಿಟ್ಟು ತೇಜಸ್ ಎಕ್ಸ್‌ಪ್ರೆಸ್, ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಹಮ್‌ಸಫರ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪ್ರಯಾಣ ಮಾಡಬಹುದು. ಇದು ನೌಕರರ ವರ್ಗದ ಅರ್ಹತೆಯನ್ನು ಪರಿಗಣಿಸಿ ಸಂಚಾರಕ್ಕೆ ಅನುಮತಿ ನೀಡಿದೆ ಎಂದು ತಿಳಿಸಲಾಗಿದೆ.

Central Has Changed LTC Rules to Allow Government Employees to Travel in Premium Trains

ದೇಶದಲ್ಲಿ ಸದ್ಯ 7ನೇ ವೇತನ ಆಯೋಗ ಜಾರಿಯಲ್ಲಿದೆ. ಸರ್ಕಾರಿ ನೌಕರರು ತುಟ್ಟಿಭತ್ಯೆ, ತುಟ್ಟಿ ಪರಿಹಾರ, ಮನೆ ಬಾಡಿಗೆ ಭತ್ಯೆ ಇನ್ನಿತ ಆರ್ಥಿಕ ಹೆಚ್ಚಳದ ಲಾಭ ಪಡೆಯದಿದ್ದಾರೆ. ಈ ಫಲಾನುಭವಿಗಳೆಲ್ಲರು ಈ ರಜೆ ಪ್ರಯಾಣ ರಿಯಾಯಿತಿ (LTC) ಅವಕಾಶ ಹೊಂದಿದ್ದಾರೆ.

ಪ್ರಯಾಣಕ್ಕಾಗಿ ವೇತನ ಸಹಿತ ರಜೆ

ಅರ್ಹ ಉದ್ಯೋಗಿಗಳಿಗೆ ನೌಕರರು ಎಲ್‌ಟಿಸಿ ಅಡಿಯಲ್ಲಿ ಕೆಲಸದ ಸ್ಥಳದಿಂದ ನಿಮ್ಮ ಊರುಗಳಿಗೆ ಇಲ್ಲವೇ ಭಾರತದ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. ಟಿಕೆಟ್ ಹಣ ಮರುಪಾವತಿ ವ್ಯವಸ್ಥೆ ಇದೆ. ಮುಖ್ಯವಾಗಿ ನೌಕರರಿಗೆ ವೇತನ ಸಹಿತ ರಜೆ ನೀಡಲಾಗುತ್ತದೆ. ವೇತನ ಸಹಿತ ರಜೆ, ಐಶಾರಾಮಿ ರೈಲುಗಳಲ್ಲಿ ಸಂಚಾರ, ಟಿಕೆಟ್ ಹಣದ ಮರು ಪಾವತಿಯು ಸಿಗಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+