ಚಂದ್ರಯಾನ-3ಗೆ ಶ್ರಮಿಸಿದ ಇಂಜಿನಿಯರ್‌ಗಳಿಗೆ 17 ತಿಂಗಳ ವೇತನ ನೀಡಿಲ್ಲ
ಬೆಂಗಳೂರು, ಆಗಸ್ಟ್ 24: ಚಂದ್ರಯಾನ 3 ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗುತ್ತಿದ್ದಂತೆ ಆ ವಿಚಾರವಾಗಿ ಕಾಣಿಸಿಕೊಂಡ ಮತ್ತು ಅದರ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಸ್ರೋ ಸದಸ್ಯರ ಪರಿಶ್ರಮಕ್ಕೆ ತಕ್ಕ ಗೌರವ ನೀಡುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಚಂದ್ರಯಾನ 3 ಉಡಾವಣೆಗಾಗಿ ವಾಹನ ತಯಾರಿಸಿ ಎಂಜಿನಿಯರ್‌ಗಳಿಗೆ ಕಳೆದ ಸುಮಾರು 17 ತಿಂಗಳ ವೇತನ ಪಾವತಿ ಮಾಡಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಆರೋಪಿಸಿದ್ದಾರೆ. ಈ ಕುರಿತು ಅವರು ಸಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್‌ನ ಸಂಭ್ರಮ ಮತ್ತು ಭಾರತದ ಹೆಮ್ಮೆ ನಮ್ಮೊಂದಿಗೆ ದೀರ್ಘಕಾಲ ಉಳಿಯುತ್ತದೆ. ಇಸ್ರೋ ಅಧ್ಯಕ್ಷ ಡಾ. ಸೋಮನಾಥ್ ಅವರ ನಾಯಕತ್ವವು ನಿಜವಾಗಿಯೂ ಇತಿಹಾಸ ಸೃಷ್ಟಿಸಿದೆ. ನಾವು ಇಸ್ರೋಗೆ, ಅಧ್ಯಕ್ಷರು ಮತ್ತವರ ತಂಡಕ್ಕೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ಪ್ರಧಾನಿಗೆ ಕಾಂಗ್ರೆಸ್ ಪ್ರಶ್ನೆ
ಆದರೆ, ವೇತನ ನೀಡದೇ ವಿಡಿಯೋ ಮೂಲಕ ಕಾಣಿಸಿಕೊಳ್ಳುವ ನಿಮ್ಮ ಬೂಟಾಟಿಕೆಗೆ ಕುರಿತು ನೀವೇ (ಪ್ರಧಾನಿ) ಉತ್ತರ ನೀಡಬೇಕು. ಲ್ಯಾಂಡಿಂಗ್ ಆಗುತ್ತಿದ್ದಂತೆ ಕ್ರೆಡಿಟ್ ತೆಗೆದುಕೊಳ್ಳಲು ಹವಣಿಸುತ್ತಿದ್ದೀರಿ. ಆದರೆ ವಿಜ್ಞಾನಿಗಳು ಮತ್ತು ಇಸ್ರೋವನ್ನು ಬೆಂಬಲಿಸುವಲ್ಲಿ ನಿಮ್ಮ ಸರ್ಕಾರವು ಏಕೆ ವಿಫಲವಾಗಿದೆ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಚಂದ್ರಯಾನ 3ರಲ್ಲಿ ಯೋಜನೆಯಲ್ಲಿ ಕೆಲಸ ಮಾಡಿದ HEC ಇಂಜಿನಿಯರ್‌ಗಳಿಗೆ ಕಳೆದ 17 ತಿಂಗಳಿನಿಂದ ವೇತನವನ್ನು ಪಾವತಿಸಿಲ್ಲ. ಭಾರತ ನಿರ್ಣಾಯಕ ಕಾರ್ಯಗಳಿಗೆ ಶ್ರಮಿಸುವ ಇಸ್ರೋನಂತಹ ಸಂಸ್ಥೆಗಳಿಗೆ, ಬಾಹ್ಯಾಕಾಶ ಕಾರ್ಯಗಳಿಗೆ ಕೇಂದ್ರ ಸರ್ಕಾರ ಶೇಕಡಾ 32% ಬಜೆಟ್ ಅನ್ನು ಕಡಿತಗೊಳಿಸಿದೆ.
ಇಸ್ರೋ ವಿಜ್ಞಾನಿಗಳು ಭಾರತ ಹಿರೋಗಳು, ಅವರು ವಿಶ್ವ ದರ್ಜೆಯ ಬಾಹ್ಯಾಕಾಶ ಸಂಶೋಧನಾ ಕಾರ್ಯಕ್ರಮ, ಯೋಜನೆ ಯಶಸ್ವಿಯಾಗಿ ನಡೆಸಿದ್ದಾರೆ. ಆದರೆ ವಿಜ್ಞಾನಿಗಳು, ಎಂಜಿನಿಯರ್ ಅವರ ಪ್ರತಿಭೆ ಮತ್ತು ಕಠಿಣ ಪರಿಶ್ರಮಕ್ಕೆ ನಿಮ್ಮ ಸರ್ಕಾರ ಯಾವುದೇ ಗೌರವ ನೀಡಿಲ್ಲ. 17 ತಿಂಗಳ ವೇತನ ನೀಡಿಲ್ಲ ಎಂದು ಅವರು ದೂರಿದರು.












Click it and Unblock the Notifications