Breaking: ಭಾರತದಲ್ಲಿ ಒಂದು ಸಿಲಿಂಡರ್ ಮೇಲೆ 200 ರೂ. ಸಬ್ಸಿಡಿ
ನವದೆಹಲಿ, ಮೇ 21: ಪ್ರಧಾನಮಂತ್ರಿ ಉಜ್ವಲ ಯೋಜನೆಯ 9 ಕೋಟಿ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಪ್ರತಿ ಗ್ಯಾಸ್ ಸಿಲಿಂಡರ್ ಮೇಲೆ 200 ರೂಪಾಯಿ ಸಬ್ಸಿಡಿ ನೀಡುವುದಾಗಿ ಘೋಷಿಸಿದೆ.
ಪ್ರತಿವರ್ಷ ಉಜ್ವಲ ಯೋಜನೆಯ ಅಡಿಯಲ್ಲಿ 12 ಗ್ಯಾಸ್ ಸಿಲಿಂಡರ್ ಅನ್ನು ನೀಡುತ್ತೇವೆ. "ಈ ವರ್ಷ ನಾವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ 9 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ನೀಡುವ ಪ್ರತಿ ಗ್ಯಾಸ್ ಸಿಲಿಂಡರ್‌ಗೆ 200 ಸಬ್ಸಿಡಿ ನೀಡುತ್ತೇವೆ," ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
Breaking: ಅಬಕಾರಿ ಸುಂಕ ಕಡಿತ; ಪೆಟ್ರೋಲ್ ಬೆಲೆ 9.5ರೂ., ಡೀಸೆಲ್ ಬೆಲೆ 7 ರೂ. ಇಳಕೆ
ಇದು ನಮ್ಮ ತಾಯಿ ಮತ್ತು ಸಹೋದರಿಯರಿಗೆ ಸಹಾಯವಾಗುತ್ತದೆ. ಇದರಿಂದ ವರ್ಷಕ್ಕೆ ಸುಮಾರು 6100 ಕೋಟಿ ರೂಪಾಯಿ ಆದಾಯದ ಮೇಲೆ ಪ್ರಭಾವ ಬೀರುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಪೆಟ್ರೋಲ್-ಡೀಸೆಲ್ ದರದಲ್ಲೂ ಇಳಿಕೆ:
ಕೇಂದ್ರದ ಅಬಕಾರಿ ಸುಂಕ ಕಡಿತದಿಂದ ಪೆಟ್ರೋಲ್ ಬೆಲೆ ಲೀಟರ್‌ಗೆ 9.5 ರೂ ಕಡಿಮೆ ಆಗಲಿದೆ. ಡೀಸೆಲ್ ಬೆಲೆಯಲ್ಲಿ ಎಳು ರೂ ಇಳಿಕೆ ಆಗುತ್ತದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಚಾರವನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ. ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ ಕ್ರಮದಿಂದ ಸರಕಾರಕ್ಕೆ ಒಂದು ವರ್ಷದಲ್ಲಿ ಒಂದು ಲಕ್ಷ ರೂ ಆದಾಯಕ್ಕೆ ಖೋತಾ ಆಗಲಿದೆ ಎಂದೂ ಅವರು ತಿಳಿಸಿದ್ದಾರೆ.
ಹಣದುಬ್ಬರಕ್ಕೆ ಕಾರಣ ತಿಳಿಸಿದ ನಿರ್ಮಲಾ ಸೀತಾರಾಮನ್:
ಇಂದು ಜಗತ್ತು ಕಷ್ಟದ ಕಾಲವನ್ನು ದಾಟುತ್ತಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಜಗತ್ತು ಚೇತರಿಸಿಕೊಳ್ಳುತ್ತಿರುವಾಗಲೂ, ಉಕ್ರೇನ್ ಸಂಘರ್ಷವು ಪೂರೈಕೆ ಸರಪಳಿ ಸಮಸ್ಯೆಗಳನ್ನು ಮತ್ತು ವಿವಿಧ ಸರಕುಗಳ ಕೊರತೆಯನ್ನು ತಂದಿದೆ. ಇದು ಬಹಳಷ್ಟು ದೇಶಗಳಲ್ಲಿ ಹಣದುಬ್ಬರ ಮತ್ತು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.












Click it and Unblock the Notifications