ಹೊಸ ಉದ್ಯೋಗಿಗಳ ಇಪಿಎಫ್ ಗೆ ಸರಕಾರದಿಂದ ಶೇ 12ರಷ್ಟು ಕೊಡುಗೆ
Recommended Video

ಕಾರ್ಮಿಕರ ಭವಿಷ್ಯ ನಿಧಿಗೆ ಸರಕಾರ ಶೇ 12ರಷ್ಟು ಮೂರು ವರ್ಷಗಳ ಕಾಲ ನೀಡಲಿದೆ. ಇದು ಎಲ್ಲ ವಲಯದ ಹೊಸ ಉದ್ಯೋಗಿಗಳಿಗೆ ಅನ್ವಯ ಆಗಲಿದೆ. ಕೇಂದ್ರ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವ ಅರುಣ್ ಜೇಟ್ಲಿ ಮಾಹಿತಿ ನೀಡಿದರು. ಕಾರ್ಮಿಕ ಭವಿಷ್ಯ ನಿಧಿ ಕಾಯ್ದೆಗೆ ತಿದ್ದುಪಡಿ ತಂದು ಮಹಿಳೆಯರ ಇಪಿಎಫ್ ಕೊಡುಗೆ ಶೇ 12ರಿಂದ ಶೇ 8ಕ್ಕೆ ಇಳಿಸಲಾಗುವುದು ಎಂದು ಹೇಳಿದರು.
ಆದರೆ, ಉದ್ಯೋಗದಾತರು ನೀಡುವ ಶೇ 12ರ ಇಪಿಎಫ್ ಕೊಡುಗೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಇದರಿಂದ ಮಹಿಳಾ ಉದ್ಯೋಗಿಗಳಿಗೆ ಕೈಗೆ ಸಿಗುವ ವೇತನದ ಪ್ರಮಾಣ ಹೆಚ್ಚಾಗುತ್ತದೆ. ಅಂದರೆ ಮಹಿಳಾ ಉದ್ಯೋಗಿಗಳ ಕೊಡುಗೆ ಶೇ 8ರಷ್ಟಾದರೆ, ಉದ್ಯೋಗದಾತರ ಕೊಡುಗೆ ಶೇ 12ರಷ್ಟೇ ಇರುತ್ತದೆ.
ಕಾರ್ಮಿಕರ ಭವಿಷ್ಯ ನಿಧಿ ಒಕ್ಕೂಟದ ಮಾಹಿತಿ ಪ್ರಕಾರ 18-25ರ ವಯೋಮಾನದ ಮಧ್ಯೆ ಇರುವ 36.8 ಲಕ್ಷ ಹೊಸ ಸದಸ್ಯರು ಕಳೆದ ನವೆಂಬರ್ ನಿಂದ ಈಚೆಗೆ ಸೇರ್ಪಡೆ ಆಗಿದ್ದಾರೆ. ಈ ಯೋಜನೆಯಿಂದ ಉದ್ಯೋಗಿಗಳಿಗೆ ಹೆಚ್ಚಿನ ಹಣ ಉಳಿತಾಯ ಆಗುತ್ತದೆ. ಜತೆಗೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ.
70 lakh formal jobs have been created this year. Govt will contribute 12% of the wages as EPF in all sectors for the next three years. Contributions from women employees will be brought down from 12% to 8%- FM @arunjaitley #NewIndiaBudget pic.twitter.com/EIAoUdSXTh
— BJP (@BJP4India) February 1, 2018












Click it and Unblock the Notifications