LPG: ಕೇಂದ್ರದಿಂದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ..
LPG: ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ವಿತರಣೆಯಲ್ಲಿ ವಿಳಂಬ ಹಿನ್ನೆಲೆ ಗ್ರಾಹಕರಿಗೆ ತುಂಬಾ ತೊಂದರೆ ಆಗುತ್ತಿತ್ತು. ಇದೀಗ ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಹಾಗಾದ್ರೆ, ಅದೇನು ಎನ್ನುವ ಪ್ರಶ್ನೆ ಬಹುತೇಕ ಮಂದಿಯ ತಲೆಯಲ್ಲಿರುತ್ತದೆ. ಇದಕ್ಕೆಲ್ಲ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಎಲ್‌ಪಿಜಿ ಸಿಲಿಂಡರ್‌ಗಳ ವಿತರಣೆಯಲ್ಲಿ ಭಾರೀ ವಿಳಂಬ ಆಗುತ್ತಿದ್ದು, ಇದರಿಂದ ಗ್ರಾಹಕರು ಬೇಸತ್ತು ಹೋಗಿದ್ದರು. ಇದೀಗ ಈ ಕುರಿತು ಗಮನಹರಿಸಿದ ಕೇಂದ್ರ ಸರ್ಕಾರ ಗ್ರಾಹಕರಿಗೆ ಶೀಘ್ರದಲ್ಲೇ ಎಲ್‌ಪಿಜಿ ಸಿಲಿಂಡರ್‌ಗಳು ಸಿಗುವಂತೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ.

ಇಂತಹ ವಿಳಂಬವನ್ನು ತಪ್ಪಿಸಲು ಕೇಂದ್ರ ಸರ್ಕಾರ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಲ್ಲಿ ಏಕೀಕೃತ ಎಲ್‌ಪಿಜಿ ವಿತರಣಾ ವ್ಯವಸ್ಥೆ ಜಾರಿ ಮಾಡಲು ಮುಂದಾಗಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ಹೊಸ ಎಲ್‌ಪಿಜಿ ಇಂಟರ್‌ಆಪರೇಬಲ್ ಸರ್ವಿಸ್ ಡೆಲಿವರಿ ಫ್ರೇಮ್‌ವರ್ಕ್ ಕುರಿತು ಗ್ರಾಹಕರಿಂದ ಅಭಿಪ್ರಾಯ ಪಡೆಯಲು ಪ್ರಾರಂಭಿಸಿದೆ. ಇದು ಸಿಲಿಂಡರ್ ವಿತರಣೆಯಲ್ಲಿ ವಿಳಂಬ ಕುರಿತು ದೀರ್ಘಕಾಲದ ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸುವತ್ತ ಚಿತ್ತ ಹರಿಸಿದೆ.
ಪ್ರಸ್ತಾವಿತ ಚೌಕಟ್ಟಿನಡಿಯಲ್ಲಿ ಮೂರು ಸರ್ಕಾರಿ ಸ್ವಾಮ್ಯದ ವಿತರಕರು, ಇಂಡೇನ್, ಭಾರತ್ ಗ್ಯಾಸ್ ಮತ್ತು ಎಚ್‌ಪಿ ಗ್ಯಾಸ್ ಇನ್ನು ಮುಂದೆ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವುದಿಲ್ಲ. ಬದಲಾಗಿ, ಅವರು ಒಂದೇ ರಾಷ್ಟ್ರೀಯ ನೆಟ್‌ವರ್ಕ್‌ನ ಭಾಗವಾಗಿ ಕಾರ್ಯನಿರ್ವಹಿಸುತ್ತವೆ. ಗ್ರಾಹಕರು ಬುಕ್ ಮಾಡಿದ ವಿತರಕರು, ನಿಗದಿತ ಸಮಯದೊಳಗೆ ಸಿಲಿಂಡರ್ ಅನ್ನು ಪೂರೈಸಲು ಸಾಧ್ಯ ಆಗದಿದ್ದರೆ, ಆರ್ಡರ್ ಅನ್ನು ಸ್ವಯಂಚಾಲಿತವಾಗಿ ಇತರ ಯಾವುದೇ ಹತ್ತಿರದ ಪಿಎಸ್‌ಯು ಕಂಪನಿಯ ಡೀಲರ್‌ಗೆ ಸಿಲಿಂಡರ್ ವಿತರಣೆಯ ಜವಾಬ್ದಾರಿ ನೀಡುತ್ತದೆ.
ಈ ವೇದಿಕೆ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸುತ್ತದೆ. ಕಂಪನಿಗಳು ತಮ್ಮ ಸೇವೆಯನ್ನು ಸುಧಾರಿಸುವಂತೆ ಮಾಡಲು ಸಹಾಯ ಮಾಡುತ್ತದೆ. ಈ ಹಂತವು ಅನಿಲ ಪೂರೈಕೆದಾರರ ಅನಿಯಂತ್ರಿತತೆ ಮತ್ತು ವಿತರಣಾ ವಿಳಂಬದಂತಹ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.
ಹೊಸ ಎಲ್‌ಪಿಜಿ ಇಂಟರ್‌ಆಪರೇಬಲ್ ಸರ್ವಿಸ್ ಡೆಲಿವರಿ ಫ್ರೇಮ್‌ವರ್ಕ್ ಅಡಿಯಲ್ಲಿ ಗ್ರಾಹಕರಿಗೆ ಇನ್ಮುಂದೆ ತಾವು ಬುಕ್ ಮಾಡಿದ 24 ಗಂಟೆಗಳೊಳಗೆ ಗ್ಯಾಸ್ ಸಿಲಿಂಡರ್ ತಮ್ಮ ಮನೆಯನ್ನು ತಲುಪುವ ಭರವಸೆ ನೀಡಿದೆ. ಪ್ರಸ್ತುತ ಇದೀಗ ಇರುವ 48 ಗಂಟೆಗಳ ಸಮಯದ ನಿಯಮದಲ್ಲಿ ಬದಲಾವಣೆ ಆಗಲಿದೆ. ಗ್ರಾಹಕರಿಗೆ ಕಡಿಮೆ ಸಮಯದಲ್ಲಿ ಸೇವೆ ಒದಗಿಸುವುದೇ ಇದರ ಉದ್ದೇಶ ಆಗಿದೆ.
ನವರಾತ್ರಿಯ ಸಮಯದಲ್ಲೇ ಕೇಂದ್ರ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ, 2025-26ರ ಹಣಕಾಸು ವರ್ಷದಲ್ಲಿ ಹೆಚ್ಚುವರಿ ಆಗಿ 25,00,000 ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸಲು ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಈ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ ನೀಡುವ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆ ಮತ್ತಷ್ಟು ಬಡ ಮಹಿಳೆಯರಿಗೆ ತಲುಪಲಿದೆ. ಇನ್ನು ಮತ್ತೊಂದೆಡೆ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಆರಂಭದಲ್ಲಿ ಎಲ್‌ಪಿಜಿ ಸಿಲಿಂಡರ್ ದರಗಳನ್ನು ಪರಷ್ಕರಣೆ ಮಾಡುತ್ತವೆ. ಸಾಮಾನ್ಯವಾಗಿ ಪ್ರತಿ ತಿಂಗಳ ಆರಂಭದಲ್ಲಿ ವಾಣಿಜ್ಯ ಸಿಲಿಂಡರ್ ದರ ಪರಷ್ಕರಣೆ ಮಾಡಲಾಗುತ್ತದೆ. ಹಾಗಾದ್ರೆ, ನಾಳೆ ಅಂದರೆ ಅಕ್ಟೋಬರ್ 1ರಂದು ವಾಣಿಜ್ಯ ಸಿಲಿಂಡರ್ ಜೊತೆಗೆ ಗೃಹಬಳಕೆ ಎಲ್‌ಪಿಜಿ ದರ ಕಡಿಮೆ ಆಗುವ ಭರವಸೆಯಲ್ಲಿ ಸಾಮಾನ್ಯ ಜನರಿದ್ದಾರೆ.












Click it and Unblock the Notifications