2024 Holidays List: ಕೇಂದ್ರ ಸರ್ಕಾರದ ರಜೆಗಳ ಕರಡು ಪಟ್ಟಿ
ದೆಹಲಿ, ನವೆಂಬರ್ 23: ಕೇಂದ್ರ ಸರ್ಕಾರದ 2024ನೇ ಸಾಲಿನ ಸರ್ಕಾರಿ ರಜೆ ದಿನಗಳ ಕರಡು ಪಟ್ಟಿ ಸಿದ್ಧವಾಗಿದೆ. ರಾಷ್ಟ್ರೀಯ ಹಬ್ಬಗಳು ಅಂತರಾಷ್ಟ್ರೀಯ ಆಚರಣೆಗಳು, ಧಾರ್ಮಿಕ ಹಬ್ಬಗಳು, ಐತಿಹಾಸಿಕ ಘಟನೆಗಳು ಮತ್ತು ಇತರ ಪ್ರಾದೇಶಿಕ ಆಚರಣೆಗಳ ಮೇಲೆ ಈ ಪಟ್ಟಿ ತಯಾರಿಸಲಾಗಿದೆ.
ಕೇಂದ್ರ ಸರ್ಕಾರದ ಆಡಳಿತ ಸುಧಾರಣಾ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ 2024ನೇ ಸಾಲಿನ ಸರ್ಕಾರಿ ರಜೆಗಳ ಪಟ್ಟಿಯನ್ನು ಸಿದ್ಧಗೊಳಿಸಿದ್ದಾರೆ. ಸಚಿವ ಸಂಪುಟದಿಂದ ಅನುಮೋದನೆ ಸಿಕ್ಕ ಬಳಿಕ 2024ನೇ ಸಾಲಿನ ಸರ್ಕಾರಿ ರಜೆಗಳ ಪಟ್ಟಿ ಅಂತಿಮ ಆದೇಶ ಪ್ರಕಟವಾಗಲಿದೆ.

ಕರಡು ಪಟ್ಟಿಯ ಪ್ರಕಾರ ಎರಡನೇ ಮತ್ತು ನಾಲ್ಕನೇ ಶನಿವಾರ, ಭಾನುವಾರಗಳನ್ನು ಹೊರತುಪಡಿಸಿ ಕೇಂದ್ರದಿಂದ ಮುಂದಿನ ವರ್ಷದಲ್ಲಿ 17 ರಜಾ ದಿನಗಳು ಸಿಗಲಿವೆ. ಇದನ್ನು ಹೊರತುಪಡಿಸಿ, ಕೆಲವು ನಿರ್ಬಂಧಿತ ರಜಾದಿನಗಳು ಸಹ ಇರಲಿದೆ. ಈ ಕರಡು ರಜೆ ಪಟ್ಟಿಯ ಆಧಾರದ ಮೇಲೆ ನೀವು ಈಗಲೇ ಮುಂದಿನ ವರ್ಷದ ನಿಮ್ಮ ವೀಕೆಂಡ್ ಟ್ರಪ್ ಹಾಗೂ ಹಬ್ಬದ ರಜಾ ದಿನಗಳ ಟ್ರಿಲ್ ಪ್ಲಾನ್ ಮಾಡಬಹುದಾಗಿದೆ.
2024ನೇ ಸಾಲಿನ ಸರ್ಕಾರಿ ರಜೆಗಳ ವಿವರ ಈ ಕೆಳಗಿನಂತಿದೆ.
| 1 | ಜನವರಿ 26 | ಶುಕ್ರವಾರ | ಗಣರಾಜ್ಯೋತ್ಸವ |
| 2 | ಮಾರ್ಚ್ 25 | ಸೋಮವಾರ | ಹೋಳಿ |
| 3 | ಮಾರ್ಚ್ 29 | ಶುಕ್ರವಾರ | ಗುಡ್ ಫ್ರೈಡೇ |
| 4 | ಏಪ್ರಿಲ್ 11 | ಗುರುವಾರ | ಈದ್ ಉಲ್ ಫಿತರ್ |
| 5 | ಏಪ್ರಿಲ್ 17 | ಬುಧವಾರ | ರಾಮನವಮಿ |
| 6 | ಏಪ್ರಿಲ್ 21 | ಆದಿತ್ಯವಾರ | ಮಹಾವೀರ ಜಯಂತಿ |
| 6 | ಏಪ್ರಿಲ್ 21 | ಆದಿತ್ಯವಾರ | ಮಹಾವೀರ ಜಯಂತಿ |
| 7 | ಮೇ 23 | ಗುರುವಾರ | ಬುದ್ಧ ಪೂರ್ಣಿಮಾ |
| 8 | ಜೂನ್ 17 | ಸೋಮವಾರ | ಬಕ್ರಿದ್ |
| 9 | ಜುಲೈ 17 | ಬುಧವಾರ | ಮೊಹರಂ |
| 10 | ಆಗಸ್ಟ್ 15 | ಗುರುವಾರ | ಸ್ವಾತಂತ್ರ್ಯ ದಿನಾಚರಣೆ |
| 11 | ಆಗಸ್ಟ್ 26 | ಸೋಮವಾರ | ಶ್ರೀಕೃಷ್ಣ ಜನ್ಮಾಷ್ಟಮಿ |
| 12 | ಸಪ್ಟೆಂಬರ್ 16 | ಸೋಮವಾರ | ಈದ್-ಮಿಲಾದ್ |
| 13 | ಅಕ್ಟೋಬರ್ 02 | ಬುಧವಾರ | ಗಾಂಧಿ ಜಯಂತಿ |
| 14 | ಅಕ್ಟೋಬರ್ 12 | ಶನಿವಾರ | ದಸರಾ |
| 15 | ಅಕ್ಟೋಬರ್ 31 | ಗುರುವಾರ | ದೀಪಾವಳಿ |
| 16 | ನವೆಂಬರ್ 15 | ಶುಕ್ರವಾರ | ಗುರುನಾನಕ್ ಜಯಂತಿ |
| 17 | ಡಿಸೆಂಬರ್ 25 | ಬುಧವಾರ | ಕ್ರಿಸ್‌ಮಸ್ |
2024ನೇ ಸಾಲಿನ ಪರಿಮಿತ ರಜೆಗಳ ವಿವರ ಈ ಕೆಳಗಿನಂತಿದೆ.
ಹೊಸ ವರ್ಷದ ಆರಂಭ
ಸ್ವಾತಂತ್ರ್ಯ ದಿನಾಚರಣೆ
ಗಾಂಧಿ ಜಯಂತಿ
ಬುದ್ಧ ಪೂರ್ಣಿಮಾ
ಕ್ರಿಸ್‌ಮಸ್
ದಸರಾ
ದೀಪಾವಳಿ
ಗುಡ್ ಫ್ರೈಡೇ
ಗುರುನಾನಕ್ ಜಯಂತಿ
ಈದ್ ಉಲ್ ಫಿತರ್
ಬಕ್ರಿದ್
ಮಹಾವೀರ ಜಯಂತಿ
ಮೊಹರಂ
ಈದ್ ಮಿಲಾದ್












Click it and Unblock the Notifications