8th Pay Commission: 8ನೇ ವೇತನ ಆಯೋಗ ಜಾರಿಗೂ ಮೊದಲೇ ಸರ್ಕಾರಿ ನೌಕರರಿಗೆ ಜಾಕ್‌ಪಾಟ್: ತುಟ್ಟಿಭತ್ಯೆ ಭಾರೀ ಏರಿಕೆ
ನವದೆಹಲಿ, ಆಗಸ್ಟ್ 09: 8 ನೇ ವೇತನ ಆಯೋಗದ ಮುನ್ಸೂಚನೆಯು ಜಾರಿಯಾಗುವುದಕ್ಕೂ ಮೊದಲೇ, ಭಾರತದ ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನ ಭಾರೀ ಏರಿಕೆಯನ್ನುಮಾಡುವ ಮೂಲಕ ಭರ್ಜರಿ ಗುಡ್ ನ್ಯೂಸ್ ನೀಡಲಿದೆ. ಏಳನೇ ವೇತನ ಆಯೋದಡಿಯಲ್ಲಿ ಕೊನೆಯ ತುಟ್ಟಿಭತ್ಯೆ ಏರಿಕೆಯಾಗುವ ನಿರೀಕ್ಷೆ ಇದೆ.
ಕೇಂದ್ರ ಸರ್ಕಾರಿ ನೌಕರರಿಗೆ ಪ್ರತಿ ವರ್ಷ ಎರಡು ಬಾರಿ (ಜನವರಿ, ಜುಲೈ) ತುಟ್ಟಿಭತ್ಯೆ ಏರಿಕೆಯಾಗುತ್ತದೆ. 2025ರ ಮಾರ್ಚ್‌ನಲ್ಲಿ ತುಟ್ಟಿಭತ್ಯೆ 2% ಹೆಚ್ಚಳವಾಗಿತ್ತು. ಇದರಿಂದ ಸರ್ಕಾರಿ ನೌಕರರ ಡಿಎ 55% ಗೆ ಏರಿಕೆಯಾಗಿತ್ತು. 7 ಕೇಂದ್ರ ಸರ್ಕಾರಿ ನೌಕರರು 8 ನೇ ವೇತನ ಆಯೋಗದ ರಚನೆಗಾಗಿ ಕಾಯುತ್ತಿದ್ದರೂ, ಪ್ರಸ್ತುತ 7 ನೇ ವೇತನ ಆಯೋಗದ ಅಡಿಯಲ್ಲಿ ಅವರು ಕನಿಷ್ಠ ಒಂದು ತುಟ್ಟಿಭತ್ಯೆ ಭತ್ಯೆ (ಡಿಎ) ಹೆಚ್ಚಳವನ್ನು ಪಡೆಯುವ ಸಾಧ್ಯತೆಯಿದೆ. ಇತ್ತೀಚಿನ ಹಣದುಬ್ಬರ ಸಂಖ್ಯೆಗಳ ಪ್ರಕಾರ, ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳವು 4% ರಷ್ಟಿರುವ ಸಾಧ್ಯತೆಯಿದೆ.

7ನೇ ವೇತನ ಆಯೋಗದ ಅಡಿಯಲ್ಲಿ ಮಾರ್ಚ್‌ನಲ್ಲಿ 2 % ಡಿಎ ದರಾ ಏರಿಕೆ ಮಾಡಲಾಗಿತ್ತು. ಇದರಿಂದಾಗಿ ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರ ಡಿಎ ದರ ಶೇ. 55 ರಷ್ಟಿದೆ. ಇದೀಗ ಮತ್ತೆ ತುಟ್ಟಿಭತ್ಯೆ ಏರಿಕೆ ಬಗ್ಗೆ ಗುಡ್ ನ್ಯೂಸ್ ಸಿಕ್ಕಿದ್ದು, 8 ನೇ ವೇತನ ಆಯೋಗ ಜಾರಿಗೂ ಮೊದಲೇ ತುಟ್ಟಿಭತ್ಯೆ ಏರಿಕೆಯಾಗುವ ನಿರೀಕ್ಷೆ ಇದೆ.
ಫೆಬ್ರವರಿ-ಮಾರ್ಚ್ ಮತ್ತು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ವರ್ಷಕ್ಕೆ ಎರಡು ಬಾರಿ ಡಿಎ ಹೆಚ್ಚಳವನ್ನು ಘೋಷಿಸಲಾಗುತ್ತದೆ. ಪ್ರತಿ ವರ್ಷ ಜನವರಿ ಮತ್ತು ಜುಲೈನಿಂದ ಪೂರ್ವಾನ್ವಯವಾಗಿ ಜಾರಿಗೆ ಬರುತ್ತದೆ. ಇದು ನೌಕರರಿಗೆ ಹಣದುಬ್ಬರದ ಪರಿಣಾಮವನ್ನು ಸರಿದೂಗಿಸಲು ಸಹಾಯ ಮಾಡುತ್ತದೆ. ಈ ವರ್ಷದ ಮಾರ್ಚ್‌ನಲ್ಲಿ 2% ಹೆಚ್ಚಳವನ್ನು ಜಾರಿಗೆ ತಂದ ನಂತರ ಪ್ರಸ್ತುತ ಡಿಎ ದರವು ಶೇ. 55 ರಷ್ಟಿದೆ. ಕಾರ್ಮಿಕ ಸಚಿವಾಲಯದ ಪ್ರಕಾರ, ಏಪ್ರಿಲ್‌ನಲ್ಲಿ 3.5% ನಷ್ಟಿದ್ದ ಹಣದುಬ್ಬರವು ಮೇ 2025 ರಲ್ಲಿ 3% ನಷ್ಟು ಕಡಿಮೆಯಾಗಿದೆ. ಈ ಸೂಚ್ಯಂಕಗಳು ಡಿಎ ಮೇಲೆ ನೇರವಾಗಿ ಪರಿಣಾಮ ಬೀರದಿದ್ದರೂ ಸಿಪಿಐ-ಐಡಬ್ಲ್ಯೂ ಮೇಲೆ ಪರಿಣಾಮ ಬೀರುವ ಒಟ್ಟಾರೆ ಬೆಲೆ ಪ್ರವೃತ್ತಿಗಳ ಬಗ್ಗೆ ಸುಳಿವು ನೀಡುತ್ತವೆ.
ಮೂಲಗಳಿಂದ ಲಭ್ಯವಿರುವ ಮಾಹಿತಿಗಳ ಪ್ರಕಾರ, ಜುಲೈ 2025ರಿಂದ ಸರ್ಕಾರಿ ನೌಕರರ ಡಿಎಯನ್ನು ಶೇಕಡಾ 4ರಷ್ಟು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸುವ ನಿರೀಕ್ಷೆಯಿದೆ. ಇತ್ತೀಚಿನ ದುಬಾರಿ ಸೂಚ್ಯಂಕ ದತ್ತಾಂಶವನ್ನು ಆಧರಿಸಿದ ಸರ್ಕಾರವು ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು 3% ರಿಂದ 4% ರಷ್ಟು ಹೆಚ್ಚಿಸಲು ಅನುಮೋದಿಸಬಹುದು ಎಂದು ಅಂದಾಜಿಸಲಾಗಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಜುಲೈ 2025ರಿಂದ ತುಟ್ಟಿಭತ್ಯೆ (ಡಿಎ) ಶೇ.55ರಿಂದ ಶೇ.59ಕ್ಕೆ ಏರಿಕೆಯಾಗುವ ಸಂಭವವಿದೆ ಎನ್ನಲಾಗುತ್ತಿದೆ. ಆದರೂ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆಗಳು ಹೊರಬಿದ್ದಿಲ್ಲ.












Click it and Unblock the Notifications