New Railway Lines: ₹24,634 ಕೋಟಿ ವೆಚ್ಚದ 4 ಯೋಜನೆಗಳಿಗೆ ಸಂಪುಟ ಒಪ್ಪಿಗೆ, ಎಲ್ಲೆಲ್ಲಿ?

ನವದೆಹಲಿ, ಅಕ್ಟೋಬರ್ 8: ಭಾರತದಲ್ಲಿ ರೈಲ್ವೆ ಜಾಲವು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ವಿಸ್ತರಣೆ ಸಹ ಆಗುತ್ತಿದೆ. ಮೂಲಸೌಕರ್ಯಗಳು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಇದೀಗ ಕೇಂದ್ರ ಸರ್ಕಾರ ದೇಶದ ನಾಲ್ಕು ರಾಜ್ಯಗಳಿಗೆ ಗುಡ್ ನ್ಯೂಸ್ ನೀಡಿದೆ. ಬರೋಬ್ಬರಿ 24,634 ಕೋಟಿ ರೂಪಾಯಿ ರೈಲ್ವೆ ಯೋಜನೆಗೆ ಸಂಪುಟದಲ್ಲಿ ಅನುಮೋದನೆ ನೀಡಿದೆ. ಇದು ಯಾವ ಯೋಜನೆ, ಎಷ್ಟು ಕಿಲೋ ಮಿಟರ್, ಯಾವೆಲ್ಲ ರಾಜ್ಯದ ಜನರಿಗೆ ಅನುಕೂಲ ಎಂಬ ಮಾಹಿತಿ ಇಲ್ಲಿದೆ.

ಕೇಂದ್ರ ಸಚಿವ ಸಂಪುಟ ದಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ ಮತ್ತು ಛತ್ತೀಸ್‌ಗಢ ರಾಜ್ಯಗಳ 18 ಜಿಲ್ಲೆಗಳನ್ನು ಒಳಗೊಂಡು ಬಹುಕೋಟಿ ವೆಚ್ಚದಲ್ಲಿ 04 ರಸ್ತು ಯೋಜನೆಗಳನ್ನು ಅನುಮೋದಿಸಿದೆ. ಸದರಿ ಈ ಯೋಜನೆಯಿಂದ ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲವನ್ನು ಸುಮಾರು 894 ಕಿ.ಮೀ ನಷ್ಟು ಹೆಚ್ಚಿಸಲಿವೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.

Central Cabinet Approves Rs 24 634 Crore Rail Expansion Across 4 States Arround 894 km

ಯಾವ 4 ರಾಜ್ಯ? ಮಾರ್ಗ ಯೋಜನೆಗಳ ವಿವರ

* ವಾರ್ಧಾ - ಭೂಸಾವಲ್ - 3ನೇ ಮತ್ತು 4ನೇ ಮಾರ್ಗ ರೈಲು ಯೋಜನೆ: ಇದು ಮಹಾರಾಷ್ಟ್ರ ರಾಜ್ಯ ವ್ಯಾಪ್ತಿಯಲ್ಲಿ314 ಕಿಲೋ ಮಿಟರ್ ಇದೆ.

* ಗೊಂಡಿಯಾ - ಡೊಂಗರ್‌ಗಢ - 4ನೇ ಮಾರ್ಗ ಯೋಜನೆ: ಇದು ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ವ್ಯಾಪ್ತಿಯಲ್ಲಿ 84 ಕಿಲೋ ಮೀಟರ್ ಇದೆ.

* ವಡೋದರಾ - ರತ್ನಾಮ್ - 3ನೇ ಮತ್ತು 4ನೇ ಮಾರ್ಗ ಯೋಜನೆಯು ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯದಲ್ಲಿ - 259 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳಲಿದೆ.

* ಇಟಾರ್ಸಿ - ಭೋಪಾಲ್ - ಬೀನಾ 4ನೇ ಮಾರ್ಗವು ಮಧ್ಯ ಪ್ರದೇಶದ ವ್ಯಾಪ್ತಿಯ 237 ಕಿಲೋ ಮೀಟರ್ ಉದ್ದದ ಯೋಜನೆ ಆಗಿದೆ ಎಂದು ಕೇಂದ್ರ ರೈಲ್ವೆ ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ. ಈ ಕುರಿತು ರೈಲ್ವೆ ಎಕ್ಸ್ ಹ್ಯಾಂಡಲ್‌ಗಳು ಮಾಹಿತಿ ಹಂಚಿಕೊಂಡಿವೆ.

ಈ ನಾಲ್ಕು ಯೋಜನೆಗಳ ಒಟ್ಟು ಅಂದಾಜು ವೆಚ್ಚ ಸುಮಾರು 24,634 ಕೋಟಿ ರೂಪಾಯಿ ಆಗಿದೆ. ಇವು 2030-31ರ ವೇಳೆಗೆ ಪೂರ್ಣಗೊಳ್ಳಲಿವೆ ಎಂದು ಗಡುವು ನೀಡಲಾಗಿದೆ. ಇದು ಭಾರತೀಯ ರೈಲ್ವೆಯ ಪ್ರಸ್ತುತ ಜಾಲವನ್ನು ಸುಮಾರು 894 ಕಿ.ಮೀ ರಷ್ಟು ಹೆಚ್ಚಿಸುತ್ತದೆ. ಈ ಯೋಜನೆಗಳು ಅಂದಾಜು 3,633 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಕೋಟ್ಯಾಂತರ ಪ್ರಯಾಣಿಕರಿಗೆ ಈ ರೈಲ್ವೆ ಯೋಜನೆಗಳಿಂದ ಸಾರಿಗೆ ಅನುಕೂಲ ಸಿಗಲಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ಇದು ರೈಲುಗಳ ಸಂಚಾರವನ್ನು ಗಣನೀಯವಾಗಿ ಹೆಚ್ಚಿಸಿ, ಕಾರ್ಯಾಚರಣೆಯ ದಕ್ಷತೆ ಮತ್ತು ಭಾರತೀಯ ರೈಲ್ವೆಯ ಸೇವಾ ವಿಶ್ವಾಸಾರ್ಹತೆಯನ್ನು ಸುಧಾರಿಸಲು ಕಾರಣವಾಗುತ್ತದೆ. ಈ ಯೋಜನೆಗಳು ಕಾರ್ಯಾಚರಣೆಗಳನ್ನು ಸುಗಮಗೊಳಿಸಿ, ದಟ್ಟಣೆಯನ್ನು ಕಡಿಮೆ ಮಾಡಲಿವೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+