One Nation One Election: ಗೈರಾದ ಬಿಜೆಪಿ 20 ಸಂಸದರಿಗೆ ನೋಟಿಸ್ ಜಾರಿ?
ನವದೆಹಲಿ, ಡಿಸೆಂಬರ್ 17: ಪ್ರತಿಪಕ್ಷಗಳ ವಿರೋಧದ ನಡುವೆಯು ಕೇಂದ್ರ ಸರ್ಕಾರಯು ಮಹತ್ವದ ಸಂವಿಧಾನಾತ್ಮಕ ತಿದ್ದುಪಡಿ ಮಸೂದೆಯನ್ನು ಮಂಗಳವಾರ ಮಂಡಿಸಿದೆ. ಬಳಿಕ 'ಒಂದು ದೇಶ ಒಂದು ಚುನಾವಣೆ'ಗೆ ಬಹುಮತಕ್ಕಾಗಿ ಮತ ಯಂತ್ರದ ಮೂಲಕ ಮತಕ್ಕೆ ಹಾಕಲಾಯಿತು. ಈ ವೇಳೆ ಸೂಚನೆ ನೀಡಿದ್ದರು ಲೋಕಸಭೆಗೆ ಗೈರಾಗಿದ್ದ ಸಂಸದರವರಿಗೆ ಬಿಜೆಪಿ ನೋಟಿಸ್ ಜಾರಿ ಮಾಡಲಿದೆ.
ಕೇಂದ್ರ ಕಾನೂನು ಸಚಿವ ಮೇಘಪಾಲ್ ಅವರು ಲೋಕಸಭೆಯಲ್ಲಿ 'ಒಂದು ದೇಶ ಒಂದು ಚುನಾವಣೆ' ತಿದ್ದುಪಡಿ ಮಸೂದೆ ಮಂಡಿಸಿದರು. ಈ ವೇಳೆ ಬಹುಮತಕ್ಕೆ ಹಾಕಲಾಯಿತು. ಈ ವೇಳೆ 269 ಮಸೂದೆ ಪರವಾಗಿ, 198 ಮತಗಳು ವಿರುದ್ಧವಾಗಿ ಮತಗಳು ಬಂದಿವೆ.

ಮಂಗಳವಾರ ಲೋಕಸಭಾ ಸದನಕ್ಕೆ ಗೈರಾಗದಂತೆ ಸೂಚಿಸಿದ್ದ ತನ್ನೆಲ್ಲ ಸಂದರಿಗೆ ಮೂರು ಸಾಲುಗಳ ಸಚೇತಕಾಜ್ಞೆಯನ್ನು ಹೊರಡಿಸಲಾಗಿತ್ತು. ಹೀಗಿದ್ದರೂ ಸಹಿತ ಸದನಕ್ಕೆ ಬಾರದೇ ಸುಮಾರು 20 ಸಂಸದರು ಗೈರಾಗಿದ್ದಾರೆ. ಸಂಸದರ ಈ ನಡೆಗೆ ಸೂಕ್ತ ಕ್ರಮ ಕೈಗೊಳ್ಳಲು ಬಿಜೆಪಿ ಮುಂದಾಗಿದೆ ಎಂದು ವರದಿ ಆಗಿದೆ.
ಮಸೂದೆಯ ಮಂಡಿಸಿದ ಬಳಿಕ ಸರಳ ಬಹುಮತಕ್ಕಿಂತ ಹಾಕಲಾಯಿತು. ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅದರ ವಿವರಗಳಿಗೆ ಹೋದ ನಂತರ ಮಸೂದೆಯನ್ನು ಮರು ಮಂಡಿಸುವಾಗ ಅಂಗೀಕಾರವನ್ನು ಖಚಿತಪಡಿಸಿಕೊಳ್ಳಲು ಮೂರನೇ ಎರಡರಷ್ಟು ಸದಸ್ಯರ ಬಹುಮತದ ಅಗತ್ಯವಿರುತ್ತದೆ. ಈ ವೇಳೆ ಲೋಕಸಭಾ ಸದಸ್ಯ ಬಲ ಅಗತ್ಯವಿರುತ್ತದೆ. ಇನ್ನೂ ವಿಪಕ್ಷಗಳ ಕಠಿಣ ವಿರೋಧವಿರುದ್ಧರು ಸಹಿತ ಮಹತ್ವದ ಮಸೂದೆ ಮಂಡಿಸಿದ್ದ ಬಿಜೆಪಿ ಪರ ಮತ ಬಾರದಿದ್ದರೆ ಭಾರೀ ಹಿನ್ನಡೆ ಆಗುವುದಿತ್ತು. ಆದರೆ ಅಧಿಕ ಮತಗಳು ಮಸೂದೆ ಪರವಾಗಿತ್ತು.
ಲೋಕಸಭೆಯಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ ರಾಮ ಮೇಘ್‌ಪಾಲ್ ಅವರು ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಒಂದೇ ಸಮಯದಲ್ಲಿ ಚುನಾವಣೆ ನಡೆಸು ಸುಗಮಗೊಳಿಸುವ ಸಂವಿಧಾನ (129ನೇ ತಿದ್ದುಪಡಿ) ಮಸೂದೆಗೆ ಸದನದಲ್ಲಿ ಬಹುಮತ ಪಡೆಯಿತು.












Click it and Unblock the Notifications