ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ನೀತಿ: 15 ವರ್ಷ ಮೀರಿದ ಸರ್ಕಾರ ವಾಹನಗಳೆಲ್ಲ ಗುಜುರಿ ಪಾಲು!

|
Google Oneindia Kannada News

ನವದೆಹಲಿ, ನವೆಂಬರ್ 27: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಹಳೆಯ ವಾಹನಗಳನ್ನು ಗುಜರಿಗೆ ಹಾಕುವುದಕ್ಕೆ ಕೇಂದ್ರ ಸರ್ಕಾರವು ನಿರ್ಧರಿಸಿದೆ. ಮುಂಬರುವ 2023ರ ಏಪ್ರಿಲ್ ತಿಂಗಳ ಹೊತ್ತಿಗೆ 15 ವರ್ಷಕ್ಕಿಂತ ಹಳೆಯದಾದ ಸಾರಿಗೆ ನಿಗಮಗಳ ಒಡೆತನದ ಬಸ್‌ಗಳು ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಡೆತನದ ಎಲ್ಲಾ ವಾಹನಗಳನ್ನು ರದ್ದುಗೊಳಿಸಬೇಕು ಎಂದಿದೆ.

ಸ್ವಯಂಪ್ರೇರಿತ ವಾಹನ ರದ್ದತಿ ನೀತಿಗೆ ಖಾಸಗಿ ವಾಹನ ಮಾಲೀಕರಿಂದ ನೀರಸ ಪ್ರತಿಕ್ರಿಯೆಯ ನಡುವೆ ರಸ್ತೆ ಸಾರಿಗೆ ಸಚಿವಾಲಯ ಈ ಹೊಸ ಟೈಮ್‌ಲೈನ್ ಅನ್ನು ಪ್ರಸ್ತಾಪಿಸುವ ಕರಡು ಅಧಿಸೂಚನೆಯನ್ನು ಹೊರಡಿಸಿದೆ.

ಹಳೆಯ ವಾಹನಗಳ ಮಾಲೀಕರಿಗೆ ಹೈಕೋರ್ಟ್‌ನಿಂದ ಗುಡ್ ನ್ಯೂಸ್!ಹಳೆಯ ವಾಹನಗಳ ಮಾಲೀಕರಿಗೆ ಹೈಕೋರ್ಟ್‌ನಿಂದ ಗುಡ್ ನ್ಯೂಸ್!

ಸ್ಕ್ರ್ಯಾಪಿಂಗ್ ನೀತಿಯು ವೈಯಕ್ತಿಕ ಮತ್ತು ವಾಣಿಜ್ಯ ವಾಹನಗಳಿಗೆ ಅಲ್ಲದೇ ಸ್ವಯಂಪ್ರೇರಿತವಾಗಿದ್ದರೆ, ಪಿಎಸ್‌ಯುಗಳು ಮತ್ತು ಸ್ವಾಯತ್ತ ಸಂಸ್ಥೆಗಳು ಸೇರಿದಂತೆ ಸರ್ಕಾರಿ ಏಜೆನ್ಸಿಗಳಿಗೆ ಕಡ್ಡಾಯವಾಗಿರುತ್ತದೆ. ಈ ನಿಟ್ಟಿನಲ್ಲಿ ಹಳೆಯ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವ ಉದ್ದೇಶದಿಂದ ಅನುಮೋದನೆ ನೀಡಿದ್ದಾರೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ರಾಜ್ಯ ಸರ್ಕಾರಿ ಸಂಸ್ಥೆಗಳು ನಡೆಸುವ ಬಸ್ ಫ್ಲೀಟ್‌ಗಳ ಆಧುನೀಕರಣಕ್ಕಾಗಿ ಅವರು ಪ್ರತಿಪಾದಿಸುತ್ತಿದ್ದಾರೆ.

ಮೊದಲೇ ಸೂಚನೆ ಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ

ಮೊದಲೇ ಸೂಚನೆ ಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ

ಜನವರಿ 2021ರಲ್ಲಿ ಕೇಂದ್ರ ಸಾರಿಗೆ ಸಚಿವಾಲಯಕ್ಕೆ ಏಪ್ರಿಲ್ 2022 ರಿಂದ ಸರ್ಕಾರಿ ವಾಹನಗಳಿಗೆ ನೀತಿಯನ್ನು ಜಾರಿಗೆ ತರಲು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದರು. ಇದನ್ನು ತ್ವರಿತವಾಗಿ ಜಾರಿಗೊಳಿಸಬಹುದು, ಆದರೆ ಹಲವಾರು ರಾಜ್ಯಗಳಲ್ಲಿನ ಕೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ರಾಜ್ಯ ಸಾರಿಗೆ ನಿಗಮಗಳು ನಡೆಸುವ ಬಸ್‌ಗಳಿಗೆ ಈ ಯೋಜನೆಯನ್ನು ವಿಸ್ತರಿಸಲು ಮಂಡಳಿಯು ಒಪ್ಪುತ್ತಿಲ್ಲ.

ರಾಜ್ಯಗಳಿಂದ ಮಾಹಿತಿ ಪಡೆದ ಕೇಂದ್ರ ಸರ್ಕಾರ

ರಾಜ್ಯಗಳಿಂದ ಮಾಹಿತಿ ಪಡೆದ ಕೇಂದ್ರ ಸರ್ಕಾರ

ಈ ನೀತಿಯ ತ್ವರಿತ ಅನುಷ್ಠಾನಕ್ಕಾಗಿ ಕೇಂದ್ರವು ಇತ್ತೀಚೆಗೆ ರಾಜ್ಯಗಳೊಂದಿಗೆ ಚರ್ಚೆ ನಡೆಸಿದೆ. ನೋಂದಣಿಯಿಂದ 15 ವರ್ಷಗಳನ್ನು ಪೂರೈಸಿದ ತಮ್ಮ ವಾಹನಗಳ ವಿವರಗಳನ್ನು ನೀಡುವಂತೆ ಎಲ್ಲಾ ರಾಜ್ಯಗಳನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ. ಅಂತಹ ವಾಹನಗಳ ಸಂಖ್ಯೆಯು ಹೆಚ್ಚಾಗಿದ್ದರೂ, ಸರ್ಕಾರಿ ಸಂಸ್ಥೆಗಳು ದೊಡ್ಡ ಆರಂಭವನ್ನು ಮಾಡಬಹುದು ಎಂದು ಸಚಿವರು ಹೇಳಿದ್ದಾರೆ. ರಸ್ತೆ ಸಾರಿಗೆ ಸಚಿವಾಲಯವು ಹಳೆಯ ಮತ್ತು ಮಾಲಿನ್ಯಕಾರಕ ವಾಹನಗಳನ್ನು ಹಂತಹಂತವಾಗಿ ನಿಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸಲಹೆಯನ್ನು ನೀಡಿದೆ.

ಹಳೆ ವಾಹನಗಳು ಗುಜರಿಗೆ ಹಾಕಲು ನಿರ್ಧರಿಸಿದ್ದೇಕೆ?

ಹಳೆ ವಾಹನಗಳು ಗುಜರಿಗೆ ಹಾಕಲು ನಿರ್ಧರಿಸಿದ್ದೇಕೆ?

"ನೀವು ಎಲೆಕ್ಟ್ರಿಕ್ ಕಾರುಗಳ ಪರಿಚಯವನ್ನು ನೋಡಿದರೆ, ಸರ್ಕಾರವು ಅವುಗಳನ್ನು ಪಡೆಯಲು ಮತ್ತು ಉದ್ಯಮಕ್ಕೆ ಬೇಡಿಕೆಯನ್ನು ಸೃಷ್ಟಿಸಲು ಮುಂದಾಳತ್ವ ವಹಿಸಿದೆ. ಅದೇ ರೀತಿಯಲ್ಲಿ ಹಳೆಯ ಮತ್ತು ಮಾಲಿನ್ಯಕಾರಕ ವಾಹನಗಳನ್ನು ಗುಜರಿಗೆ ಹಾಕುವ ವಿಷಯದಲ್ಲೂ ನಾವು ಮುಂದಾಳತ್ವ ವಹಿಸಬೇಕು,' ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾರಿಗೆ ನೀತಿ ಬಗ್ಗೆ ಸಚಿವಾಲಯಗಳ ಸಭೆ

ಸಾರಿಗೆ ನೀತಿ ಬಗ್ಗೆ ಸಚಿವಾಲಯಗಳ ಸಭೆ

ಇತ್ತೀಚಿನ ವಾರಗಳಲ್ಲಿ ವಾಹನ ಸ್ಕ್ರ್ಯಾಪಿಂಗ್ ನೀತಿಯ ಅನುಷ್ಠಾನಗೊಳಿಸಿಲು ಪ್ರಧಾನಮಂತ್ರಿ ಸಚಿವಾಲಯ, ನೀತಿ ಆಯೋಗ ಮತ್ತು ಹಣಕಾಸು ಸಚಿವಾಲಯವನ್ನು ಒಳಗೊಂಡ ಹಲವಾರು ಉನ್ನತ ಮಟ್ಟದ ಸಭೆಗಳು ನಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮ್ಮ ಬಸ್ ಫ್ಲೀಟ್ ಅನ್ನು ಆಧುನೀಕರಿಸಲು ಮತ್ತು ಹಳೆಯದನ್ನು ಗುಜರಿಗೆ ಹಾಕುವಂತೆ ಮಾಡಲು ರಾಜ್ಯಗಳನ್ನು ಹೇಗೆ ಪ್ರೋತ್ಸಾಹಿಸಬಹುದು ಎಂಬ ಆಯ್ಕೆಗಳನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.

English summary
Central and State Govt vehicles past 15 years to be scrapped from April, says Transport minister Nitin Gadkari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X