Breaking: ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಪ್ರಕಟ; ಪರಿಶೀಲಿಸುವುದು ಹೇಗೆ?
ನವದೆಹಲಿ, ಜುಲೈ 22: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಇ) 10ನೇ ತರಗತಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಸಿಬಿಎಸ್ಇ ಅಧಿಕೃತ ವೆಬ್‌ಸೈಟ್ cbseresults.nic.inನಲ್ಲಿ 10ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸಲಾಗಿದೆ.
ಸಿಬಿಎಸ್ಇ 10 ನೇ ವಿದ್ಯಾರ್ಥಿಗಳು ಈ ವೆಬ್‌ಸೈಟ್‌ಗಳಲ್ಲಿ cbseresults.nic.in, parikshasangam.cbse.gov.in ಮತ್ತು results.cbse.nic.in ನಲ್ಲಿ ತಮ್ಮ ಬೋರ್ಡ್ ಫಲಿತಾಂಶ 2022 ಅನ್ನು ವಿದ್ಯಾರ್ಥಿಗಳು ಪರಿಶೀಲಿಸಬಹುದು.
ಇದರ ಜೊತೆಗೆ ವಿದ್ಯಾರ್ಥಿಗಳು ಸಿಬಿಎಸ್ಇ 10ನೇ ತರಗತಿ ಫಲಿತಾಂಶವನ್ನು SMS ಸೇವೆಯ ಮೂಲಕ ಪಡೆಯಬಹುದು. ಅದಕ್ಕಾಗಿ ನೀವು ಮಾಡಬೇಕಾಗಿರುವುದು CBSE10 ಜೊತೆಗೆ ಕ್ರಮ ಸಂಖ್ಯೆ( roll. no) ಶಾಲೆಯ ಸಂಖ್ಯೆ (school no) ಮತ್ತು ಕೇಂದ್ರದ ಸಂಖ್ಯೆ (center no)ಯನ್ನು ಟೈಪ್ ಮಾಡಿ ಅದನ್ನು 7738299899 ಸಂಖ್ಯೆಗೆ ಕಳುಹಿಸಬೇಕು. ನಂತರದಲ್ಲಿ ನಿಮ್ಮ ಅಂಕಪಟ್ಟಿಗಳನ್ನು ಅದೇ ಫೋನ್ ಸಂಖ್ಯೆಗೆ ಪಠ್ಯ ಸಂದೇಶದ ಮೂಲಕ ಕಳುಹಿಸಲಾಗುತ್ತದೆ.

ನಿಮ್ಮ ಫಲಿತಾಂಶಗಳನ್ನು ಪರಿಶೀಲಿಸಲು ಏನು ಬೇಕು?:
ಕ್ರಮ ಸಂಖ್ಯೆ
ಶಾಲಾ ಕೋಡ್
ಹುಟ್ತಿದ ದಿನ
ಸಿಬಿಎಸ್ಇ ಫಲಿತಾಂಶ ಪರಿಶೀಲಿಸುವ ವಿಧಾನ:
* ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ- cbse.gov.in, cbseresults.nic.in
* ಸಿಬಿಎಸ್ಇ ಫಲಿತಾಂಶ 2022 ಮೇಲೆ ಕ್ಲಿಕ್ ಮಾಡಿ
* ರೋಲ್ ಸಂಖ್ಯೆಯಂತಹ ಅಗತ್ಯವಿರುವ ರುಜುವಾತುಗಳನ್ನು ನಮೂದಿಸಿ
* ಸಿಬಿಎಸ್ಇ 2022 ಫಲಿತಾಂಶವನ್ನು ಸಲ್ಲಿಸಿ ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದು












Click it and Unblock the Notifications