ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹಗರಣ ಜಾಲ, ಸಿಬಿಐ ಅಧಿಕಾರಿ ಬಂಧನ

ಬೆಂಗಳೂರು, ಡಿಸೆಂಬರ್ 28 : ತತ್ಕಾಲ್ ರೈಲ್ವೆ ಟಿಕೆಟ್ ಬುಕ್ ಮಾಡಲು ಅಕ್ರಮ ಸಾಫ್ಟ್‌ವೇರ್ ಮಾಡಿಕೊಟ್ಟಿದ್ದ ಅಸಿಸ್ಟೆಂಟ್ ಪ್ರೋಗ್ರಾಮರ್‌ನನ್ನು ಸಿಬಿಐ ಬಂಧಿಸಿದೆ. 2012ರಿಂದ ಈತ ಸಿಬಿಐ ಜೊತೆ ಕೆಲಸ ಮಾಡುತ್ತಿದ್ದ.

35 ವರ್ಷದ ಅಜಯ್ ಗಾರ್ಗ್‌ನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಅಜಯ್ ಅನಿಲ್ ಕುಮಾರ್ ಗುಪ್ತಾ ಎಂಬುವವರ ಜೊತೆ ಸೇರಿ ಅಕ್ರಮ ಸಾಫ್ಟ್‌ವೇರ್ ಮಾಡಿ, ಅದನ್ನು ಟಿಕೆಟ್ ಬುಕ್ಕಿಂಗ್ ಏಜೆಂಟ್‌ಗಳಿಗೆ ಮಾರಾಟ ಮಾಡುತ್ತಿದ್ದ ಎಂಬ ಮಾಹಿತಿಯನ್ನು ಸಿಬಿಐ ಸಂಗ್ರಹಿಸಿತ್ತು.

CBI official held for selling illicit software to book railway ticket

ಉತ್ತರ ಪ್ರದೇಶದಲ್ಲಿರುವ ನಿವಾಸದಲ್ಲಿ ಅಜಯ್‌ನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಸಾಕೇತ್‌ನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅಜಯ್‌ನನ್ನು ಹಾಜರುಪಡಿಸಿ, ಐದು ದಿನಗಳ ಕಾಲ ಸಿಬಿಐ ವಶಕ್ಕೆ ಪಡೆಯಲಾಗಿದೆ.

ದೆಹಲಿ, ಮುಂಬೈ, ಉತ್ತರ ಪ್ರದೇಶ ಸೇರಿದಂತೆ ದೇಶದ 14 ಕಡೆ ದಾಳಿ ನಡೆಸಿ ಸಿಬಿಐ ಈ ಅಕ್ರಮ ಸಾಫ್ಟ್‌ವೇರ್ ಬಳಸಿ ಟಿಕೆಟ್ ಬುಕ್ ಮಾಡುವುದನ್ನು ಪತ್ತೆ ಹಚ್ಚಿದೆ. ಸುಮಾರು 89 ಲಕ್ಷ ಹಣ, 15 ಲ್ಯಾಪ್‌ಟಾಪ್, 52 ಮೊಬೈಲ್, 24 ಸಿಮ್ ಕಾರ್ಡ್‌ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದೆ.

ಅಜಯ್ ಗಾರ್ಗ್‌ ಅನಿಲ್ ಗುಪ್ತಾ ಜೊತೆ ಸೇರಿ ಐಆರ್‌ಸಿಟಿಸಿ ಮಾದರಿಯಲ್ಲಿ ಸಾಫ್ಟ್‌ವೇರ್ ರಚನೆ ಮಾಡಿದ್ದ. ಇದನ್ನು ಖಾಸಗಿ ಏಜೆಂಟರ್‌ಗಳಿಗೆ ಮಾರಾಟ ಮಾಡುತ್ತಿದ್ದ. ಇದನ್ನು ಬಳಸಿಕೊಂಡು ಅವರು ಟಿಕೆಟ್ ಬುಕ್ ಮಾಡಿ ಕಮೀಷನ್ ಪಡೆಯುತ್ತಿದ್ದರು.

ಐಆರ್‌ಸಿಟಿಸಿ ಮತ್ತು ರೈಲ್ವೆ ನಿಯಮಗಳ ಅನ್ವಯ ಇಂತಹ ಸಾಫ್ಟ್‌ವೇರ್ ಬಳಸುವುದು ನಿಷೇಧ. ಇದರಿಂದ ಐಆರ್‌ಸಿಟಿಸಿಗೆ ನಷ್ಟ ಉಂಟಾಗಿಲ್ಲ. ಬದಲು ಜನರು ತಮ್ಮ ಅಕೌಂಟ್ ಮೂಲಕ ಟಿಕೆಟ್ ಬುಕ್ ಮಾಡಿದಂತೆ ತಡೆಯಲಾಗುತ್ತಿತ್ತು. ಇದರಿಂದ ಜನರು ಏಜೆಂಟರ ಬಳಿ ಹೋಗುವುದು ಅನಿವಾರ್ಯವಾಗುತ್ತಿತ್ತು.

ಮುಂಬೈನಗರದ 10 ಮತ್ತು ಉತ್ತರ ಪ್ರದೇಶದ 7 ಏಜೆಂಟ್‌ಗಳು ಈ ರೀತಿಯ ಸಾಫ್ಟ್‌ವೇರ್ ಬಳಸುವುದು ಸಿಬಿಐ ಗುರುತಿಸಿದೆ. ಅಜಯ್ 2012ರಿಂದ ಸಿಬಿಐ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ.

ಸಿಬಿಐ ಸೇರುವ ಮೊದಲು 2007ರಿಂದ 2011ರ ತನಕ ಐಆರ್‌ಸಿಟಿಸಿಯಲ್ಲಿ ಕೆಲಸ ಮಾಡುತ್ತಿದ್ದ. ಆಗ ಅಲ್ಲಿಯ ವ್ಯವಸ್ಥೆಗಳನ್ನು ಚೆನ್ನಾಗಿ ತಿಳಿಸಿದ್ದ ಆತ ಸಾಫ್ಟ್‌ವೇರ್ ತಯಾರಿಸಿ, ಮಾರಾಟ ಮಾಡುತ್ತಿದ್ದ.

ಅನಿಲ್ ಕುಮಾರ್ ಗುಪ್ತಾ ಏಜೆಂಟರನ್ನು ಸಂಪರ್ಕಿಸಿ ಅವರಿಗೆ ಸಾಫ್ಟ್‌ವೇರ್ ಮಾರಾಟ ಮಾಡುತ್ತಿದ್ದ. ನಂತರ ಬಂದ ಹಣವನ್ನು ಇಬ್ಬರೂ ಹಂಚಿಕೊಳ್ಳುತ್ತಿದ್ದರು. ಬಿಟ್ ಕಾಯಿನ್ ಮೂಲಕ ವ್ಯವಹಾರ ನಡೆಸುತ್ತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+