ವಂಚನೆ ಪ್ರಕರಣದಲ್ಲಿ ಸಿಬಿಐ ನಿರ್ದೇಶಕ ರಾಕೇಶ್ ಆಸ್ಥಾನ ಆರೋಪಿ
ನವದೆಹಲಿ, ಅಕ್ಟೋಬರ್ 21: ಲಂಚ ಪ್ರಕರಣವೊಂದರಲ್ಲಿ ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನ ಅವರನ್ನು ಅರೋಪಿ ಎಂದು ಸಿಬಿಐ ಹೆಸರಿಸಿದೆ.
ಮೊಯಿನ್ ಖುರೇಷಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಯೊಬ್ಬರಿಂದ ಲಂಚ ಕೇಳಿದ ಆರೋಪವನ್ನು ಸಿಬಿಐನ ನಂ.2 ಅಧಿಕಾರಿ ರಾಕೇಶ್ ಮೇಲೆ ಹೊರೆಸಲಾಗಿದೆ.
ದುಬೈ ಮೂಲದ ಮಧ್ಯವರ್ತಿ ಮನೋಜ್ ಪ್ರಸಾದ್ ಎಂಬಾತನನ್ನು ಬಂಧಿಸಿದ ಬಳಿಕ ಆಸ್ಥಾನ ವಿರುದ್ಧ ಪ್ರಕರಣ ಬಲವಾಗಿದೆ. 2014ರಲ್ಲಿ ಅಂದಿನ ಸಿಬಿಐ ನಿರ್ದೇಶಕ ಎ.ಪಿ ಸಿಂಗ್ ಅವರಿಗೆ ಮೊಯಿನ್ ಖುರೇಷಿ ಕಳಿಸಿದ್ದ ಸಂದೇಶಗಳನ್ನು ಆಧಾರಿಸಿ ಖುರೇಷಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು.

ಡಿಸೆಂಬರ್ 2017ರ ನಂತರ ಸರಿ ಸುಮಾರು 3 ಕೋಟಿ ರು ಗೂ ಅಧಿಕ ಮೊತ್ತವನ್ನು ನೀಡಲಾಗಿದ್ದು, ಇನ್ನಷ್ಟು ಮೊತ್ತ ನೀಡುವಂತೆ ಸಿಬಿಐ ಅಧಿಕಾರಿಗಳು ಕೇಳಿದ್ದರು ಎಂದು ಸನಾ ಸತೀಶ್ ಎಂಬ ದೂರುದಾರ ಮ್ಯಾಜಿಸ್ಟ್ರೇಟ್ ಮುಂದೆ ಇತ್ತೀಚೆಗೆ ಹೇಳಿಕೆ ನೀಡಿದ್ದ.












Click it and Unblock the Notifications