ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಯ ಪಡೆದಿದ್ದ 6,000 ಕೋಟಿ ರು. ಸಾಲ ಹೋಗಿದ್ದೆಲ್ಲಿ? ಇಲ್ಲಿದೆ ಉತ್ತರ!

|
Google Oneindia Kannada News

Recommended Video

vijay Mallya diverted 6000 crore loan to shell companies | Oneindia Kannada

ನವದೆಹಲಿ, ಸೆಪ್ಟೆಂಬರ್ 25: ಮದ್ಯದ ದೊರೆ ವಿಜಯ್ ಮಲ್ಯ ಅವರು, ಭಾರತದ ವಿವಿಧ ಬ್ಯಾಂಕುಗಳಿಂದ ಮಾಡಿದ್ದ ಸುಮಾರು 6 ಸಾವಿರ ಕೋಟಿ ರು. ಸಾಲವನ್ನು ಏನು ಮಾಡಿದರು ಎಂಬುದಕ್ಕೆ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಉತ್ತರ ಕಂಡುಕೊಂಡಿವೆ.

ಮಲ್ಯ ಅವರು ತಾವು ಪಡೆದಿದ್ದ ಆರು ಕೋಟಿ ರು. ಸಾಲವನ್ನು ವಿದೇಶಗಳಲ್ಲಿರುವ ಏಳು ನಕಲಿ ಕಂಪನಿಗಳಿಗೆ ವರ್ಗಾವಣೆ ಮಾಡಿರುವುದು ಸಿಬಿಐ ತನಿಖೆಯಲ್ಲಿ ಬಹಿರಂಗವಾಗಿದೆ.

ಮಲ್ಯಗೆ ಸೇರಿದ 100 ಕೋಟಿ ಮೌಲ್ಯ ಷೇರುಗಳು ಸರ್ಕಾರದ ವಶಕ್ಕೆಮಲ್ಯಗೆ ಸೇರಿದ 100 ಕೋಟಿ ಮೌಲ್ಯ ಷೇರುಗಳು ಸರ್ಕಾರದ ವಶಕ್ಕೆ

ಹಾಗಾಗಿ, ಈಗ ಮಲ್ಯ ವಿರುದ್ಧ ಹೊಸ ಆರೋಪ ಪಟ್ಟಿಯನ್ನು ದಾಖಲಿಸಲು ಸಿಬಿಐ ಹಾಗೂ ಇಡಿ ಮುಂದಾಗಿದ್ದು, ಇನ್ನೊಂದು ತಿಂಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದೆ.

ವಿಚಾರಣೆಯಲ್ಲಿರುವ ಪ್ರಕರಣ

ವಿಚಾರಣೆಯಲ್ಲಿರುವ ಪ್ರಕರಣ

ಲಂಡನ್ ನಲ್ಲಿ ಕಳೆದ ವರ್ಷ ಮಾರ್ಚ್ ನಿಂದ ತಲೆಮರೆಸಿಕೊಂಡಿರುವ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಬ್ರಿಟನ್ ಸರ್ಕಾರವನ್ನು ಭಾರತ ಕೋರುತ್ತಲೇ ಇದೆ. ಈ ಪ್ರಕರಣವು ಲಂಡನ್ ನ ನ್ಯಾಯಾಲಯದಲ್ಲಿ ವಿಚಾರಣೆಗೊಳಪಟ್ಟಿದೆ.

ತನಿಖಾ ಸಂಸ್ಥೆಗಳ ಆಲೋಚನೆ

ತನಿಖಾ ಸಂಸ್ಥೆಗಳ ಆಲೋಚನೆ

ಡಿಸೆಂಬರ್ ನಲ್ಲಿ ಈ ಪ್ರಕರಣದ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆಗಳಿದ್ದು, ಅಷ್ಟರಲ್ಲಿ ಮಲ್ಯ ಅವರು, ನಕಲಿ ಕಂಪನಿಗಳಿಗೆ ಹಣ ವರ್ಗಾವಣೆ ಮಾಡಿರುವುದನ್ನು ಸಾಕ್ಷ್ಯಾಧಾರಗಳ ಸಮೇತ ಸಾಬೀತುಪಡಿಲು ಸಿಬಿಐ, ಜಾರಿ ನಿರ್ದೇಶನಾಲಯಗಳು ಯೋಚಿಸಿವೆ.

ಹೊಸ ಕಾರ್ಯತಂತ್ರ

ಹೊಸ ಕಾರ್ಯತಂತ್ರ

ಈ ಸಾಕ್ಷ್ಯಾಧಾರಗಳಿಂದ ಮಲ್ಯ ಅವರ ಹಸ್ತಾಂತರ ಸುಲಭವಾಗಬಹುದು ಎಂಬುದು ತನಿಖಾ ಸಂಸ್ಥೆಗಳ ಆಲೋಚನೆಯಾಗಿದೆ. ಹಾಗಾಗಿ, ಈ ನಿಟ್ಟಿನಲ್ಲಿ ಎರಡೂ ಸಂಸ್ಥೆಗಳು ಕಾರ್ಯೋನ್ಮುಖವಾಗಿವೆ ಎಂದು ಮೂಲಗಳು ತಿಳಿಸಿವೆ.

ಬಡ್ಡಿ ಸೇರಿ ಅಪಾರ ಮೊತ್ತ

ಬಡ್ಡಿ ಸೇರಿ ಅಪಾರ ಮೊತ್ತ

ಮಲ್ಯ ಒಡೆತನದಲ್ಲಿದ್ದ ಕಿಂಗ್ ಫಿಶರ್ ಏರ್ ಲೈನ್ಸ್ ನ ಹೆಸರಿನಲ್ಲಿ 2005ರಿಂದ 2010ರ ಅವಧಿಯಲ್ಲಿ ಈ ಸಾಲ ಪಡೆಯಲಾಗಿದೆ. ಈವರೆಗಿನ ಈ ಸಾಲ ಮೇಲಿನ ಬಡ್ಡಿ ಸೇರಿ ಇದರ ಮೊತ್ತ 9000 ಕೋಟಿ ರು. ಆಗಿದೆ ಎಂದು ಮೂಲಗಳು ತಿಳಿಸಿವೆ.

English summary
Vijay Mallya diverted most of the Rs 6,000 crore he borrowed from a State Bank of India-led consortium of lenders, according to investigations by the Central Bureau of Investigation and the Enforcement Directorate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X