ಅಗಸ್ಟಾ ವೆಸ್ಟ್‌ಲ್ಯಾಂಡ್: ಸುಬ್ರಮಣಿಯನ್ ಸ್ವಾಮಿ ಹೇಳಿದ್ದೇನು?

Subscribe to Oneindia Kannada

ನವದೆಹಲಿ, ಮೇ 05: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ವಾಕ್ಸಮರ ಮುಂದುವರಿಸಿದ್ದಾರೆ.

‘ಅಗಸ್ಟಾ ವೆಸ್ಟ್‌ಲ್ಯಾಂಡ್' ಹೆಲಿಕಾಪ್ಟರ್‌ ಖರೀದಿ ಹಗರಣದ ಮುಂದುವರಿದ ಭಾಗಕ್ಕೆ ಉಭಯ ಕಲಾಪಗಳು ಬಲಿಯಾಗುತ್ತಿವೆ. ರಾಜ್ಯಸಭೆಯಲ್ಲಿ ಸುಬ್ರಮಣಿಯನ್ ಸ್ವಾಮಿ ಕಾಂಗ್ರೆಸ್ ವಿರುದ್ಧ ಆರೋಪಗಳ ಸರಮಾಲೆಯನ್ನೇ ಹರಿಸಿದ್ದಾರೆ.[ಅಗಸ್ಟಾ ಹಗರಣ: ಸೋನಿಯಾ VS ಸುಬ್ರಮಣಿಯನ್ ಸ್ವಾಮಿ]

bjp

ಸುಬ್ರಮಣಿಯನ್ ಸ್ವಾಮಿ ಭಾಷಣದ ಹೈಲೈಟ್ಸ್
* ಹಗರಣಕ್ಕೆ ಅಂದಿನ ಯುಪಿಎ ಸರ್ಕಾರದ ರಕ್ಷಣಾ ಸಚಿವರೇ ಹೊಣೆಗಾರರು.
* ಕಾಂಗ್ರೆಸ್ ನ ಯಾವ ಮುಖಂಡರು ಇಂಥ ನಿರ್ಧಾರ ತೆಗೆದುಕೊಂಡರು ಎಂಬುದನ್ನು ದೇಶಕ್ಕೆ ತಿಳಿಸಬೇಕು
* ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಇಂಥ ಅಕ್ರಮಗಳನ್ನು ತಡೆಯಲು ನಿರ್ಧಾರ ತೆಗೆದುಕೊಳ್ಳಬಹುದಿತ್ತು
* 2006ರಲ್ಲಿ ಕಾಪ್ಟರ್ ಡೀಲ್‌ಗೆ 4877.5 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದ ಸಮಿತಿ ನಿಗದಿ ಮಾಡಿತ್ತು. ಇದು ಅಂದಿನ ಮಾರುಕಟ್ಟೆ ದರಕ್ಕಿಂತ ಸುಮಾರು 6 ಪಟ್ಟು ಹೆಚ್ಚಿನ ಮೊತ್ತವಾಗಿರಲು ಕಾರಣವೇನು?[ಕಾಂಗ್ರೆಸ್ ಬುಡ ಅಲ್ಲಾಡಿಸುತ್ತಿರುವ ನ್ಯಾಷನಲ್ ಹೆರಾಲ್ಡ್]
* ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ 2014ರ ಜುಲೈವರೆಗೆ ಎಫ್ ಐಆರ್ ದಾಖಲಿಸಿರಲಿಲ್ಲ. ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ತನಿಖೆ ಚುರುಕು ಪಡೆಯುತ್ತಿದೆ. ಇದರ ಹಿಂದಿನ ಕಾಣದ ಕೈಗಳು ಯಾವವು ಎಂಬುದು ದೇಶಕ್ಕೆ ಹೊಸದಾಗಿ ಹೇಳಬೇಕಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Targeting Congress president Sonia Gandhi, BJP MP Subramanian Swamy on Wednesday said the CBI can, as per the law, question the person mentioned as the "driving force" behind the AgustaWestland deal. "The CBI has the right under Section 156 of CrPC to question the person who is mentioned in the Italian court judgment as the 'driving force' behind the AgustaWestland chopper deal," Swamy said in the Rajya Sabha.
Please Wait while comments are loading...