ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೂ.800 ಕೋಟಿ ಸಾಲ ಪಡೆದಿದ್ದ ರೊಟೊಮ್ಯಾಕ್ ಮಾಲೀಕನ ಬಂಧನ

By Manjunatha
|
Google Oneindia Kannada News

ಕಾನ್ಪುರ, ಫೆಬ್ರವರಿ 19: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಗೆ ವಜ್ರದ ವ್ಯಾಪಾರಿ ನೀರವ್ ಮೋದಿ 11 ಸಾವಿರ ಕೋಟಿ ವಂಚಿಸಿ ದೇಶದಿಂದ ಪೇರಿ ಕಿತ್ತ ಬೆನ್ನಲ್ಲೆ ಚುರುಕಾಗಿರುವ ಸಿಬಿಐ ಮತ್ತು ಇಡಿ (ಜಾರಿ ನಿರ್ದೇಶನಾಲಯ) ಮತ್ತೊಬ್ಬ ಭಾರಿ ವಂಚಕ ಸಾಲಗಾರನನ್ನು ಬಂಧಿಸಿದೆ.

ವಿವಿಧ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಂದ ನಿಯಮ ಮೀರಿ ಸಾಲ ಪಡೆದಿರುವ ರೋಟೊಮ್ಯಾಕ್ ಸಂಸ್ಥೆ ಮುಖ್ಯಸ್ಥ ವಿಕ್ರಮ್‌ ಕೊಠಾರಿ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಸಿಬಿಐ ಅವರನ್ನು ವಶಕ್ಕೆ ಪಡೆದಿದೆ.
ರೊಟೊಮ್ಯಾಕ್ ಸಂಸ್ಥೆ ಮುಖ್ಯಸ್ಥ ವಿಕ್ರಮ್ ಕೊಠಾರಿ ಅವರ ವಿರುದ್ಧ ಐದು ಬ್ಯಾಂಕುಗಳ ಅಧಿಕಾರಿಗಳು ದೂರು ನೀಡಿದ್ದರು. ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ ವಂಚನೆ ನಂತರ ಕುಸಿತಕ್ಕೆ ಹೋಗಿರುವುದನ್ನು ಕಂಡಿರುವ ಇತರೆ ಬ್ಯಾಂಕುಗಳು ಎಚ್ಚೆತ್ತುಗೊಂಡಿರುವ ಕಾರಣ ತಮ್ಮ ದೊಡ್ಡ ಸಾಲಗಾರರ ವಿರುದ್ಧ ದೂರುಗಳನ್ನು ದಾಖಲಿಸುತ್ತಿವೆ.

CBI arrests Rotomac owner Vikram Kothari for fraud

ಸಿಬಿಐ ಅಧಿಕಾರಿಗಳು ಸೋಮವಾರ ಬೆಳಿಗ್ಗೆ ಕೊಠಾರಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡು ಅವರನ್ನು ಬಂಧಿಸಿವೆ.

ವಿಕ್ರಮ್‌ ಅವರು ವಿವಿಧ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಂದ 800 ಕೋಟಿ ರೂಪಾಯಿ ಸಾಲ ಪಡೆದಿದ್ದು, ವಂಚಿಸಿರುವ ಆರೋಪ ಕೇಳಿ ಬಂದಿದೆ. ಅಲಹಾಬಾದ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಇಂಡಿಯಾ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕ್‌ಗಳಿಂದ ಕೊಠಾರಿ ಅವರಿ 800 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ.
ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಕೊಠಾರಿ ಅವರು 485 ಕೋಟಿ ರೂಪಾಯಿ ಸಾಲಪಡೆದಿದ್ದು, ಅಲಹಾಬಾದ್‌ ಬ್ಯಾಂಕ್‌ನಿಂದ ₹352 ಕೋಟಿ ಮತ್ತು ಇತರೆ 3 ಬ್ಯಾಂಕ್‌ಗಳಿಂದಲೂ ಸಾಲ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಕಾನ್ಪುರದಲ್ಲಿ ಕೊಠಾರಿ ಅವರ ಕಚೇರಿ ಇದ್ದು, ಕಳೆದ ಒಂದು ವಾರದಿಂದ ಕಚೇರಿಗೆ ಬೀಗ ಹಾಕಲಾಗಿದೆ. ಆದರೆ ಇತ್ತೀಚೆಗೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ಕೊಠಾರಿ ಅವರು 'ಸಾಲ ಪಡೆದಿರುವುದು ನಿಜ ಅದನ್ನು ತೀರಿಸದೆ ಓಡಿ ಹೋಗುವುದಿಲ್ಲ, ನಾನು ಕಾನ್ಪುರದಲ್ಲಿ ವಾಸವಿದ್ದೇನೆ, ಇಲ್ಲಿಯೇ ಇರುತ್ತೇನೆ, ಭಾರತಕ್ಕಿಂತಲೂ ವಾಸಿಯಾದ ಇನ್ನೊಂದು ದೇಶ ಇಲ್ಲ' ಎಂದಿದ್ದರು.

English summary
CBI lodge FIR against Rotomac owner Vikram Kothari for doing fraud. Vikram took 800 crore loan from 5 nationalized banks. Banks officers lodge complaint against Vikram Kothari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X