Get Updates
Get notified of breaking news, exclusive insights, and must-see stories!

ಪಿಎನ್ ಬಿ ಹಗರಣ: ಇನ್ನೋರ್ವ ಮ್ಯಾನೇಜರ್ ಸಿಬಿಐ ಬಲೆಗೆ

ಮುಂಬೈ, ಫೆಬ್ರವರಿ 21: ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈಯ ಬ್ರಾಡಿ ಹೌಸ್ ಬ್ರಾಂಚ್ ಮ್ಯಾನೇಜರ್ ರಾಜೇಶ್ ಜಿಂದಾಲ್ ಎಂಬುವವರನ್ನು ಸಿಬಿಐ(ಕೇಂದ್ರ ತನಿಖಾ ದಳ) ಅಧಿಕಾರಿಗಳು ಬಂಧಿಸಿದ್ದಾರೆ.

ಪಿಎನ್ ಬಿಯ ಬ್ರಾಡಿ ಹೌಸ್ ಬ್ರಾಂಚ್ ನಲ್ಲಿ ಆಗಸ್ಟ್ 2009 ರಿಂದ 2011 ರವರೆಗೆ ಇವರು ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ಈ ಶಾಖೆಯಲ್ಲಿ 2011 ರಿಂದ ಕಾರ್ಯನಿರ್ವಹಿಸಿದ ಹಲವು ಅಧಿಕಾರಿಗಳನ್ನು ಈಗಾಗಲೇ ಪಿಎನ್ ಬಿಯ ಆಡಳಿತ ಮಂಡಳಿ ಅಮಾನತುಗೊಳಿಸಿದೆ.

ನೀರವ್ ಮೋದಿಯ ಹಣಕಾಸು ವ್ಯವಹಾರಗಳ ಉಸ್ತುವಾರಿ ವಹಿಸಿದ್ದ ವಿಪುಲ್ ಅಂಬಾನಿ ಎಂಬುವವರನ್ನು ನಿನ್ನೆ(ಮಂಗಳವಾರ)ಯೇ ಸಿಬಿಐ ಪೊಲೀಸರು ಬಂಧಿಸಿದ್ದಾರೆ.

CBI arrests general manager of PNB who headed Brady House branch

ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂಬೈ ಶಾಖೆಯೊಂದರಲ್ಲಿ ನಡೆದ 11,500 ಕೋಟಿ ರೂ.ಗಳ ವಂಚನೆ ಮತ್ತು ಅವ್ಯವಹಾರ ಪ್ರಕರಣ ಇತ್ತೀಚೆಗೆ ಬಯಲಿಗೆಬಂದಿತ್ತು. ಈ ಹಗರಣದ ಮುಖ್ಯ ಆರೋಪಿ ವಜ್ರ ವ್ಯಾಪಾರಿ ನೀರವ್ ಮೋದಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ವಿದೇಶಕ್ಕೆ ಪರಾರಿಯಾಗಿದ್ದರು.

ಈ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೀರವ್ ಅವರಿಗೆ ಸಂಬಂಧಿಸಿದ ಸುಮಾರು 5600 ಕೋಟಿ ರೂ. ಮೌಲ್ಯದ ವಜ್ರ, ಚಿನ್ನ ಮತ್ತು ಇತರೆ ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ತೆರಿಗೆ ಇಲಾಖೆ ಅಧಿಕಾರಿಗಳು ನೀರವ್ ಅವರ ದೆಹಲಿ, ಮುಂಬೈ, ಸೂರತ್ ಮತ್ತು ಜೈಪುರದಲ್ಲಿರುವ ಆಸ್ತಿಗಳ ಮೇಲೂ ದಾಳಿ ನಡೆಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+