ಮಣಿಪುರ ವಿದ್ಯಾರ್ಥಿಗಳ ಕೊಲೆ ಪ್ರಕರಣ: ಆರು ಜನ ಆರೋಪಿಗಳ ಬಂಧನ

ಜುಲೈನಲ್ಲಿ ಮಣಿಪುರದಲ್ಲಿ ನಡೆದ ಇಬ್ಬರು ವಿದ್ಯಾರ್ಥಿಗಳ ಭೀಕರ ಹತ್ಯೆ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು, ಇಬ್ಬರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದೆ ಎಂದು ವರದಿಯಾಗಿದೆ.

ನಾಲ್ವರಲ್ಲಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ, ರಾಜಧಾನಿ ಇಂಫಾಲದಲ್ಲಿ ಬಂಧಿಸಿರುವ ಇಬ್ಬರು ಹುಡುಗಿಯರನ್ನು ಹೊರತು ಪಡಿಸಿ ನಾಲ್ವರನ್ನು ಅಸ್ಸಾಂನ ಗುವಾಹಟಿಗೆ ರವಾನೆ ಮಾಡಲಾಗಿದೆ.

Manipur Students

ಇಂಫಾಲ್‌ನಿಂದ 51 ಕಿಮೀ ದೂರದಲ್ಲಿರುವ ಚುರಾಚಂದ್‌ಪುರ ಜಿಲ್ಲೆಯಲ್ಲಿ ಪೊಲೀಸರು ಮತ್ತು ಸೇನೆಯ ಜಂಟಿ ಕಾರ್ಯಾಚರಣೆಯಲ್ಲಿ ಶಂಕಿತರನ್ನು ಸೆರೆಹಿಡಿಯಲಾಗಿದೆ. ಮೇ 3 ರಂದು ಜನಾಂಗೀಯ ಹಿಂಸಾಚಾರ ಪ್ರಾರಂಭವಾದಾಗಿಂದ ಅಪಾರ ಸಾವು ನೋವು ಸಂಭವಿಸುತ್ತಿವೆ.

ಶಂಕಿತರನ್ನು ಸೆರೆ ಹಿಡಿದ ನಂತರ, ಭದ್ರತಾ ಪಡೆಗಳು ವಿಮಾನ ನಿಲ್ದಾಣಕ್ಕೆ ವೇಗವಾಗಿ ಸಾಗಿದವು, ಅಲ್ಲಿ ಸಿಬಿಐ ತಂಡವು ಅವರಿಗಾಗಿ ಕಾಯುತ್ತಿತ್ತು. ಸಿಬಿಐ ತಂಡ ಮತ್ತು ಶಂಕಿತರು ಸಂಜೆ 5:45 ರ ಸುಮಾರಿಗೆ ಇಂಫಾಲ್‌ನಿಂದ ಕೊನೆಯ ವಿಮಾನದಲ್ಲಿ ಗುವಾಹಟಿಗೆ ಪ್ರಯಾಣ ಮಾಡಿದರು. ಬಂಧನದ ಸುದ್ದಿ ಕೇಳಿ ಕೆಲವರು ವಿಮಾನ ನಿಲ್ದಾಣದತ್ತ ತೆರಳಲು ಯತ್ನಿಸಿದರು ಎಂದು ಮೂಲಗಳು ತಿಳಿಸಿವೆ.

ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದ ಪ್ರಕರಣ

ನಿವೃತ್ತ ಕರ್ನಲ್ ನೆಕ್ಟರ್ ಸಂಜೆನ್‌ಬಾಮ್ ಅವರು ಇತ್ತೀಚೆಗೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಚುರಚಂದ್‌ಪುರದಲ್ಲಿ ಶಂಕಿತರನ್ನು ಹಿಡಿಯಲು ಕಾರ್ಯಾಚರಣೆಯನ್ನು ನಡೆಸಿದ್ದರು.

"ವಿದ್ಯಾರ್ಥಿಗಳಾದ ಫಿಜಾಮ್ ಹೇಮಂಜಿತ್ ಮತ್ತು ಹಿಜಾಮ್ ಲಿಂತೋಯಿಂಗಂಬಿ ಅವರ ಅಪಹರಣ ಮತ್ತು ಹತ್ಯೆಗೆ ಕಾರಣವಾದ ಕೆಲವು ಪ್ರಮುಖ ಆರೋಪಿಗಳನ್ನು ಇಂದು ಚುರಾಚಂದ್‌ಪುರದಿಂದ ಬಂಧಿಸಲಾಗಿದೆ" ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಎಕ್ಸ್‌ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಪರಾಧ ಎಸಗಿದ ನಂತರ ಅವರು ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಅವರು ಮಾಡಿದ ಘೋರ ಅಪರಾಧಕ್ಕೆ ಮರಣದಂಡನೆ ಸೇರಿದಂತೆ ಗರಿಷ್ಠ ಶಿಕ್ಷೆ ಸಿಗುವಂತೆ ಮಾಡಲು ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.

ಜುಲೈನಲ್ಲಿ ನಾಪತ್ತೆಯಾದ ಇಬ್ಬರು ವಿದ್ಯಾರ್ಥಿಗಳ ಶವಗಳನ್ನು ತೋರಿಸುವ ಫೋಟೋಗಳು ಸೆಪ್ಟೆಂಬರ್ 26 ರಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು, ಮಣಿಪುರ ಸರ್ಕಾರವು ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿತ್ತು.

ವಿದ್ಯಾರ್ಥಿಗಳ ಹತ್ಯೆ ಪ್ರಕರಣವನ್ನು ಸಿಬಿಐ ಈಗಾಗಲೇ ಪರಿಶೀಲಿಸುತ್ತಿದೆ, ಆದರೆ ಇಬ್ಬರು ವಿದ್ಯಾರ್ಥಿಗಳ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ. ತನಿಖಾಧಿಕಾರಿಗಳು ಅಪ್ರಾಪ್ತರನ್ನು ಹತ್ಯೆ ಮಾಡುವ ಮೊದಲು ಅತ್ಯಾಚಾರ ಮಾಡಲಾಗಿದೆ ಎನ್ನುವ ಆರೋಪಗಳ ಬಗ್ಗೆ ಕೂಡ ಪರಿಶೀಲನೆ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+