ಸುಪ್ರೀಂಕೋರ್ಟ್ ಆದೇಶಕ್ಕೆ ಕರ್ನಾಟಕ ಬಗ್ಗಲೇಬೇಕು ಏಕೆ?

Posted By:
Subscribe to Oneindia Kannada

ಬೆಂಗಳೂರು, ಸೆ. 28: 'ಒಕ್ಕೂಟ ವ್ಯವಸ್ಥೆಗೆ ಬೆಲೆ ಕೊಡಿ, ಆದೇಶವನ್ನು ಪಾಲಿಸಿ, ಇಲ್ಲದಿದ್ದರೆ ಮುಂದಿನ ಪರಿಣಾಮ ಎದುರಿಸಲು ಸಿದ್ಧರಾಗಿ' ಎಂದು ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠದಿಂದ ಕರ್ನಾಟಕಕ್ಕೆ ಎಚ್ಚರಿಕೆ ಸಂದೇಶ ಬಂದಿದೆ. ಪರಿಸ್ಥಿತಿ ಹೀಗಿರುವಾಗ, ಸುಪ್ರೀಂ ಆದೇಶಕ್ಕೆ ತಲೆಬಾಗದೇ ಕರ್ನಾಟಕ ಸರ್ಕಾರಕ್ಕೆ ಬೇರೆ ವಿಧಿಯಿಲ್ಲ ಎಂಬ ಸುದ್ದಿ ಬಂದಿದೆ.

ತಮಿಳುನಾಡಿಗೆ 3 ದಿನಗಳಲ್ಲಿ 18 ಕ್ಯೂಸೆಕ್ಸ್ ಕಾವೇರು ನೀರು ಹರಿಸದೆ ಕಾದು ನೋಡುವ ತಂತ್ರ ಅನುಸರಿಸಲು ಮತ್ತೊಮ್ಮೆ ಕರ್ನಾಟಕ ಮುಂದಾಗಿದೆ. ಅಂದರೆ ಎರಡನೇ ಬಾರಿಗೆ ಸುಪ್ರೀಂ ಆದೇಶವನ್ನು ಮೀರಿ ಕೋರ್ಟಿನಲ್ಲಿ ವಿಚಾರಣೆಗೆ ಕರ್ನಾಟಕ ಹಾಜರಾಗಬೇಕಿದೆ.[ನಿರ್ವಹಣಾ ಮಂಡಳಿ ರಚನೆ, ಸುಪ್ರೀಂ ಪೀಠಗಳಲ್ಲೇ ದ್ವಂದ್ವ!]

Cauvery row: Legislature can't overrule SC directive, Karnataka has to bend

ಕರ್ನಾಟಕ ಹಾಗೂ ತಮಿಳುನಾಡು ನಡುವೆ ಸಂಧಾನ ಸಭೆ ಕರೆಯುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ. ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ ಅವರು ಗುರುವಾರ ಬೆಳಗ್ಗೆ ಸಭೆ ನಡೆಸುತ್ತಿದ್ದಾರೆ. ಆದರೆ, ಇದು ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲು ಮಾತ್ರ ಎಂಬುದು ಗಮನಾರ್ಹ.

ನೀರು ಹರಿಸದೆ ಶುಕ್ರವಾರದಂದು ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ಎದುರಿಸಲು ಸಾಧ್ಯವೇ ಇಲ್ಲದ್ದಂಥ ಪರಿಸ್ಥಿತಿ ಕರ್ನಾಟಕಕ್ಕೆ ಒದಗಿದೆ.[ನೀರು ರಕ್ಷಿಸಿ, ಇಲ್ಲಾ ಕಠಿಣ ಬೇಸಿಗೆ ಎದುರಿಸಿ, ಖಡಕ್ ಎಚ್ಚರಿಕೆ!]

ಕೇರಳ ಸರ್ಕಾರದ ಕಥೆ: ಮುಲ್ಲಪೆರಿಯಾರ್ ಅಣೆಕಟ್ಟಿನ ಎತ್ತರ ಹೆಚ್ಚಿಸುವ ಬಗ್ಗೆ ತಮಿಳುನಾಡು ಹಾಗೂ ಕೇರಳ ರಾಜ್ಯಗಳ ನಡುವೆ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ತೀರ್ಪು ತಮಿಳುನಾಡು ಪರ ಬಂದಿತ್ತು. ಆದರೆ, ಕೇರಳ ಸರ್ಕಾರ ಸುಪ್ರೀಂ ನ್ಯಾಯಪೀಠದ ವಿರುದ್ಧ ನಿಲ್ಲಲು ನಿರ್ಧರಿಸಿತು.[ಕಾವೇರಿ ನೀರು ಬಿಡುವುದು ಬಿಡದಿರುವುದು ದೈವೇಚ್ಛೆ ಮೈಲಾರ್ಡ್!]

ಆದರೆ, ಯಾವುದೇ ಕಾರಣಕ್ಕೂ ಸುಪ್ರೀಂಕೋರ್ಟ್(ನ್ಯಾಯಾಂಗ) ನೀಡಿದ ಆದೇಶವನ್ನು ಧಿಕ್ಕರಿಸಿ ಅಥವಾ ಬದಿಗೊತ್ತಿ ನಿರ್ಣಯ ತೆಗೆದುಕೊಳ್ಳುವ ಶಾಸಕಾಂಗಕ್ಕೆ ಇಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿ ಮೇ 2014ರಂದು ಆದೇಶ ಹೊರಡಿಸಿತು. ಅಣೆಕಟ್ಟಿನ ಎತ್ತರ 136 ಅಡಿಗಳಿಂದ 142 ಅಡಿಗಳಿಗೆ ಎತ್ತರಿಸಲು ಸುಪ್ರೀಂ ಸೂಚಿಸಿತು. ಆದರೆ, ಕೇರಳ ಸರ್ಕಾರ ಇದನ್ನು ವಿರೋಧಿಸಿತ್ತು.[ಟೈಮ್ ಲೈನ್ : ಸಂವಿಧಾನ ಬಿಕ್ಕಟ್ಟಿನ ಹಾದಿ ಹಿಡಿದ ಕಾವೇರಿ ವಿವಾದ]

ಅಂತಾರಾಜ್ಯ ಜಲ ವಿವಾದ: ಅಂತಾರಾಜ್ಯ ಜಲ ವಿವಾದಗಳಲ್ಲಿ ಸುಪ್ರೀಂಕೋರ್ಟ್ ಪಾತ್ರವೇನು? ಎಂಬ ಪ್ರಶ್ನೆ ಏಳುತ್ತದೆ. ಸಂವಿಧಾನದ ಪ್ರಕಾರ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಿದರೆ, ಸ್ವಯಂಪ್ರೇರಿತವಾಗಿ ಸುಪ್ರೀಂಕೋರ್ಟ್ ಇಂಥ ವ್ಯಾಜ್ಯಗಳನ್ನು ಪರಿಹರಿಸಲು ಮುಂದಾಗಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Will the decision by the Karnataka Legislative Assembly on the Cauvery Waters issue sustain before the Supreme Court? Karnataka had resolved to release Cauvery water only for drinking water purposes.
Please Wait while comments are loading...