ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರು ಬಿಡಿ ಎಂದಿದ್ದಕ್ಕೆ 'ಯಸ್ ಮೈಲಾರ್ಡ್' ಎಂದ ಕರ್ನಾಟಕ!

ಪ್ರತಿದಿನ ತಮಿಳುನಾಡಿಗೆ 2,000 ಕ್ಯೂಸೆಕ್ಸ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ. ನೀರು ಹರಿಸಲು ಯಾವುದೇ ಸಮಸ್ಯೆಯಿಲ್ಲ ಎಂದು ನೀರಾವರಿ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

By Mahesh
|
Google Oneindia Kannada News

ನವದೆಹಲಿ, ಅಕ್ಟೋಬರ್ 18: ಕಾವೇರಿ ಐ ತೀರ್ಪು ಸಲ್ಲಿಸಿದ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ. ಕಾವೇರಿ ನಿರ್ವಹಣಾ ಮಂಡಳಿ ರಚನೆ ಬಗ್ಗೆ ಸ್ಪಷ್ಟನೆ ಇನ್ನೂ ಸಿಕ್ಕಿಲ್ಲ. ಈ ನಡುವೆ ಮುಂದಿನ ಆದೇಶ ಹೊರ ಬರುವ ತನಕ ಪ್ರತಿದಿನ ತಮಿಳುನಾಡಿಗೆ 2,000 ಕ್ಯೂಸೆಕ್ಸ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.

ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದ ಆದೇಶಕ್ಕೆ ತಲೆಬಾಗಿರುವ ಕರ್ನಾಟಕ ಸರ್ಕಾರ ನೀರು ಬಿಡುವುದಾಗಿ ಹೇಳಿದೆ. ದ್ವಿಸದಸ್ಯ ಪೀಠ ನೀಡಿದ ಆದೇಶದಂತೆ ಅಕ್ಟೋಬರ್ 18ರ ತನಕ ಪ್ರತಿನಿತ್ಯ 2,000 ಕ್ಯೂಸೆಕ್ಸ್ ನೀರು ಹರಿಸಲು ಯಾವುದೇ ಸಮಸ್ಯೆಯಿಲ್ಲ ಎಂದು ನೀರಾವರಿ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.[LIVE: ಮುಂದಿನ ವಿಚಾರಣೆ ತನಕ ನೀರು ಬಿಡಬೇಕು :ಸುಪ್ರೀಂ]

SC directs Karnataka to release 2,000 cusecs of water daily to Tamil Nadu

ಐತೀರ್ಪು ವಿಚಾರಣೆ ಮುಂದಕ್ಕೆ: ಇದಕ್ಕೂ ಮುನ್ನ ಕಾವೇರಿ ನ್ಯಾಯಾಧಿಕರಣ 2007ರಲ್ಲಿ ನೀಡಿದ ಐತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ ದೀಪಕ್ ಮಿಶ್ರಾ, ಅಮಿತಾವ್ ರಾಯ್ ಹಾಗೂ ಖನ್ವಿಲ್ಕರ್ ಅವರಿದ್ದ ತ್ರಿಸದಸ್ಯ ನ್ಯಾಯಪೀಠ, ವಿಚಾರಣೆಯನ್ನು ಅಕ್ಟೋಬರ್ 19ಕ್ಕೆ ಮುಂದೂಡಿದೆ.[ಉಮಾ ಸಲಹೆ ತಿರಸ್ಕರಿಸಿದ ತಮಿಳುನಾಡು, ಸಂಧಾನ ವಿಫಲ]

English summary
The Supreme Court today(October 18) directed Karnataka to release 2,000 cusecs of water daily to Tamil Nadu. The court said Karnataka would continue to release water till the maintainability of the appeals filed by Karnataka and Tamil Nadu is decided.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X