ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿಗೆ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ

ಕಾವೇರಿ ನೀರು ಹಂಚಿಕೆ ನ್ಯಾಯಾಧೀಕರಣದ ತೀರ್ಪಿನ ವಿರುದ್ಧ ಕರ್ನಾಟಕ, ತಮಿಳುನಾಡು ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಜನವರಿ 4ರ ತನಕ ಪ್ರತಿನಿತ್ಯ 2 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿದೆ

By Mahesh
|
Google Oneindia Kannada News

ನವದೆಹಲಿ, ಡಿಸೆಂಬರ್ 15: ಕಾವೇರಿ ನೀರು ಹಂಚಿಕೆ ನ್ಯಾಯಾಧೀಕರಣದ ತೀರ್ಪಿನ ವಿರುದ್ಧ ಕರ್ನಾಟಕ ಮತ್ತು ತಮಿಳುನಾಡು ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಯಥಾಸ್ಥಿತಿ ಕಾಯ್ದುಕೊಂಡು ಪ್ರತಿನಿತ್ಯ 2 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿದೆ. ಇದರಿಂದ ಕರ್ನಾಟಕಕ್ಕೆ ನಿರಾಳತೆ ಸಿಕ್ಕಿದ್ದು, ಹೆಚ್ಚಿನ ಪ್ರಮಾಣದ ನೀರು ಹರಿಸುವ ಸಂಕಟದಿಂದ ಸದ್ಯಕ್ಕೆ ಬಚಾವಾಗಿದೆ.

ಮುಂದಿನ ವಿಚಾರಣೆ ತನಕ(ಜನವರಿ 4, 2017) ಮಧ್ಯಂತರ ಆದೇಶ ಜಾರಿಯಲ್ಲಿರಲಿದ್ದು, ಪ್ರತಿನಿತ್ಯ ತಮಿಳುನಾಡಿಗೆ 2,000 ಸಾವಿರ ಕ್ಯೂಸೆಕ್ಸ್ ಕಾವೇರಿ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಲಾಗಿದೆ.[ ಕೊಡಗಿನಲ್ಲಿ ಕುಡಿಯಲೂ ಅಯೋಗ್ಯವಾಗಿದೆ ಕಾವೇರಿ ನೀರು!]

Cauvery: Karnataka should release 2,000 cusecs of water to TN till Jan 4

ಕಾವೇರಿ ನೀರಿನಲ್ಲಿ ಬಳಸಲು ಲಭ್ಯವಿರುವ 740 ಟಿಎಂಸಿ ನೀರಿನಲ್ಲಿ ಕರ್ನಾಟಕ 270 ಟಿಎಂಸಿ, ತಮಿಳುನಾಡು 419, ಕೇರಳ 30 ಮತ್ತು ಪಾಂಡಿಚೇರಿ 7 ಟಿಎಂಸಿ ನೀರಿಗೆ ಅರ್ಹ ಎಂದು ನ್ಯಾಯಾಧೀಕರಣ ತೀರ್ಪಲ್ಲಿ ಹೇಳಿತ್ತು.

2007ರ ಫೆಬ್ರವರಿ 5ರಂದು ಕಾವೇರಿ ನೀರು ನ್ಯಾಯಾಧೀಕರಣ ನೀಡಿದ್ದ ತೀರ್ಪನ್ನು ಕರ್ನಾಟಕ ಮತ್ತು ತಮಿಳುನಾಡುಗಳೆರಡೂ ಪ್ರಶ್ನಿಸಿದ್ದವು. ಆದರೆ, ಈ ತೀರ್ಪು ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ಸಮಾನ ಎಂದು ಕೇಂದ್ರ ಸರಕಾರ ತಗಾದೆ ಎತ್ತಿತ್ತು.

ನ್ಯಾಯಾಧೀಕರಣದ ತೀರ್ಪನ್ನು ಪ್ರಶ್ನಿಸಿರುವ ಕರ್ನಾಟಕ, ಇಷ್ಟು ನೀರು ತಮಿಳುನಾಡಿಗೆ ಬಿಟ್ಟರೆ ಕಾವೇರಿ ನೀರು ಸರಬರಾಜಾಗುವ ಕರ್ನಾಟಕದ 6 ನಗರಗಳಿಗೆ ಪೂರೈಸಲು ಸಾಧ್ಯವೇ ಇಲ್ಲ ಎಂದಿದೆ. ತಮಿಳುನಾಡು ಕೂಡ, ಕಾವೇರಿ ನೀರಿನ ಅಗತ್ಯವಿರುವ ಜಮೀನನ್ನು 29.7 ಲಕ್ಷ ಎಕರೆಯಿಂದ 24.70 ಲಕ್ಷ ಎಕರೆಗೆ ಇಳಿಸಲಾಗಿದೆ ಎಂದು ಕ್ಯಾತೆ ತೆಗೆದಿತ್ತು.

English summary
The Supreme Court today directed Karnataka to provide 2,000 cusecs of Cauvery water to Tamil Nadu till January 4 2017. The SC said that the interim order passed in this regard would continue till January 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X