ಇನ್‌ಸ್ಟಾಗ್ರಾಮ್‌ನಲ್ಲಿ ನೈತಿಕ ಪೊಲೀಸ್‌ಗಿರಿ: ಹೈದರಾಬಾದ್ ಪೊಲೀಸರಿಂದ ಪ್ರಕರಣ
ಹೈದರಾಬಾದ್, ಅ. 13: ಇನ್‌ಸ್ಟಾಗ್ರಾಮ್‌ನಲ್ಲಿ ನೈತಿಕ ಪೊಲಿಸ್‌ಗಿರಿ ನಡೆಸುವ ಪುಟವೊಂದರ ವಿರುದ್ಧ ಮಹಿಳೆಯರ ಒಪ್ಪಿಗೆಯಿಲ್ಲದೆ ಅವರ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಕ್ಕಾಗಿ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುಮಾರು 15,000 ಅನುಯಾಯಿಗಳನ್ನು ಹೊಂದಿರುವ ಝಮುಂಡಾ, ನಿರ್ದಿಷ್ಟ ಗುಂಪಿನ ಜನರನ್ನು, ನಿರ್ದಿಷ್ಟವಾಗಿ ಯುವತಿಯರನ್ನು ಗುರಿಯಾಗಿಸುವ ವಿಡಿಯೋಗಳನ್ನು ಹಂಚಿಕೊಳ್ಳುತ್ತದೆ. ಅವಹೇಳನಕಾರಿ ಟ್ಯಾಗ್‌ಗಳು ಮತ್ತು ಶೀರ್ಷಿಕೆಗಳೊಂದಿಗೆ ಅವರ ವಿಡಿಯೋಗಳನ್ನು ಪೋಸ್ಟ್ ಮಾಡುತ್ತದೆ.
ಫೋಟೋ, ವಿಡಿಯೋಗಳನ್ನು ಫೋಸ್ಟ್ ಮಾಡುವ ಜೊತೆಗೆ ಅಂತಹ ವಿಡಿಯೋ ಚಿತ್ರೀಕರಿಸಲು ಈ ಖಾತೆಯು ಜನರನ್ನು ಪ್ರೋತ್ಸಾಹಿಸುತ್ತದೆ ಎಂದು ಆರೋಪಿಸಲಾಗಿದೆ. ಮೂಲಗಳ ಪ್ರಕಾರ, 900 ಕ್ಕೂ ಹೆಚ್ಚು ಜನರು ಅಂತಹ ವಿಡಿಯೊಗಳನ್ನು ಚಿತ್ರೀಕರಿಸಿದ್ದಾರೆ ಮತ್ತು ಅವುಗಳನ್ನು ಈ ಖಾತೆಗೆ ಅಪ್‌ಲೋಡ್ ಮಾಡಿದ್ದಾರೆ.

ಹೈದರಾಬಾದ್ ನಗರ ಪೊಲೀಸರು ಇನ್‌ಸ್ಟಾಗ್ರಾಮ್ ಪುಟದ ನಿರ್ವಾಹಕರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ), ಮತ್ತು ಐಟಿ ಕಾಯ್ದೆಯ ಸೆಕ್ಷನ್ 509,506, 354 (ಡಿ) ಅಡಿಯಲ್ಲಿ ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ.
ಇನ್‌ಸ್ಟಾಗ್ರಾಮ್ ಪುಟವನ್ನು ಹೊಂದಿರುವ ಇನ್‌ಸ್ಟಾಗ್ರಾಮ್ ಕಂಪನಿ 'ಮೆಟಾ ಪ್ಲಾಟ್‌ಫಾರ್ಮ್ಸ್'ಗೆ ಪದೇ ಪದೇ ದೂರು ನೀಡಿದ ನಂತರ ಎರಡು ಖಾತೆಗಳನ್ನು ತೆಗೆದುಹಾಕಲಾಗಿದೆ.
ಹೈದರಾಬಾದ್ ಪೊಲೀಸರು ಇನ್‌ಸ್ಟಾಗ್ರಾಮ್ ಪುಟದ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಿದಾಗ ಅದು ಹೈದರಾಬಾದ್‌ನ ಹೊರಗಿನಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಕಂಡುಬಂದಿದೆ. ಇದನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ದುಬೈನಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

'The jamunda_official page (12.3k followers), Jhamunda_2 (14.5k), Jhamunda (1284), and Jhamunda ಮತ್ತು (677) ಈ ಖಾತೆಗಳಿಂದ ಹೈದ್ರಾಬಾದ್‌ನ ಯುವ ಜೋಡಿಗಳ ವಿಡಿಯೋಗಳನ್ನು ಚಿತ್ರಿಸಿ, ಪೋಸ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ.
"ನಿರ್ವಾಹಕರ ಎಲ್ಲಾ ಐಪಿ ವಿಳಾಸಗಳನ್ನು ಯುಎಇಯಲ್ಲಿ ಗುರುತಿಸಲಾಗಿದೆ. ಯುಎಇ ಅಧಿಕಾರಿಗಳನ್ನು ತಲುಪಲು ಮತ್ತು ಪುಟದ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳಲು ಫೈಲ್ ಅನ್ನು ಉನ್ನತ ಅಧಿಕಾರಿಗಳಿಗೆ ವರ್ಗಾಯಿಸಲಾಗುವುದು ಎಂದು ಹೈದರಾಬಾದ್ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೊತೆಗೆ ಪುಟ ನಿರ್ವಾಹಕರ ಸಂಪೂರ್ಣ ಡೇಟಾವನ್ನು ಒದಗಿಸಲು ಪೊಲೀಸರು ಇನ್‌ಸ್ಟಾಗ್ರಾಮ್ ಗೆ ಪತ್ರ ಬರೆದಿದ್ದಾರೆ.












Click it and Unblock the Notifications