Captain Smith Machar - Neerja Bhanot: 40 ವರ್ಷಗಳ ಅಂತರದಲ್ಲಿ ವಿಮಾನ ಹೈಜಾಕ್ ತಡೆದ 2 ಭಾರತೀಯರ ಸಾಹಸ!

Captain Smith Machar - Neerja Bhanot: ಇಸ್ರೇಲ್ ಸೇರಿದಂತೆ ವಿವಿಧ ದೇಶಗಳ ನಾಗರಿಕರು ಸೇರಿದಂತೆ ಒಟ್ಟು 174 ಜನರ ಪ್ರಾಣವನ್ನು ಉಳಿಸುವ ಮೂಲಕ ಭಾರತದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸ ಇದೀಗ ವಿಶ್ವದಾದ್ಯಂತ ಚರ್ಚೆ ಆಗುತ್ತಿದೆ. ತಮ್ಮ ಜೀವವನ್ನೇ ಪಣಕ್ಕಿಟ್ಟ ಸ್ಮಿತ್ ಮಚ್ಚರ್ ಅವರು 174 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚೂರು ಯಾಮಾರಿದ್ದರೂ ಈ ವಿಮಾನ ಹೈಜಾಕ್ ಆಗುವ ಸಾಧ್ಯತೆಯಿತ್ತು. ಸಹ ಪೈಲಟ್‌ನ ಭೀಕರ, ಮಾರಣಾಂತಿಕ ಹಲ್ಲೆಯ ನಡುವೆಯೂ ಕ್ಯಾಪ್ಟನ್ ಸ್ಮಿತ್ ಮಚ್ಚರ್ 174 ಜನರ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ.

ಈ ರೀತಿ ಜನರ ಜೀವವನ್ನು ಉಳಿಸಿದ ಭಾರತೀಯರು ಪ್ರಮುಖರು. ಹೈಜಾಕ್‌ನಂತಹ ತುರ್ತು ಸಂದರ್ಭಗಳಲ್ಲಿ ವಿಮಾನ ಪ್ರಯಾಣಿಕರ ಜೀವ ರಕ್ಷಿಸಿದವರಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಹಾಗೂ ಗಗನಸಖಿಯಾಗಿದ್ದ ನೀರಜಾ ಭಾನೋಟ್ ಅವರು ಪ್ರಮುಖರು. ನಲವತ್ತು ವರ್ಷಗಳ ಅಂತರದಲ್ಲಿ, ಈ ಇಬ್ಬರು ಭಾರತೀಯರು ಪ್ರತಿ ಕ್ಷಣವೂ ಮುಖ್ಯವಾದ ಸಂದರ್ಭಗಳನ್ನು ಎದುರಿಸಿದ್ದರು.

Captain Smith Machar Neerja Bhanot Two Indians Who Foiled Plane Hijack Attempts 40 Years Apart

Captain Smith Machar - Neerja Bhanot: ಕರಾಚಿ ವಿಮಾನ ಹೈಜಾಕ್

ನೀರಜಾ ಭಾನೋಟ್ ಅವರು ಸಹ ಇಂತಹದ್ದೇ ಒಂದು ಕಠಿಣ ಸಂದರ್ಭವನ್ನು ಎದುರಿಸಿದ್ದರು. 1986ರಲ್ಲಿ ನಾಲ್ವರು ಶಸ್ತ್ರಸಜ್ಜಿತ ಅಪಹರಣಕಾರರು ಕರಾಚಿಯಲ್ಲಿ ವಿಮಾನವನ್ನು ವಶಪಡಿಸಿಕೊಂಡಾಗ, ನೀರ್ಜಾ ಭಾನೋಟ್ ಪ್ಯಾನ್ ಆಮ್ ಫ್ಲೈಟ್ 73ರಲ್ಲಿ ಹಿರಿಯ ವಿಮಾನ ಗಗನಸಖಿಯಾಗಿದ್ದರು. ಸ್ಮಿತ್ ಮಚ್ಚರ್ ಅವರು ಎದುರಿಸಿದಂತಹ ಕಠಿಣ ಪರಿಸ್ಥಿತಿಯನ್ನು ನೀರಜಾ ಭಾನೋಟ್ ಅವರು ಸಹ ಎದುರಿಸಿದ್ದರು. 1986ರಲ್ಲಿ ನಾಲ್ವರು ಶಸ್ತ್ರಸಜ್ಜಿತ ಅಪಹರಣಕಾರರು ಕರಾಚಿಯಲ್ಲಿ ವಿಮಾನವನ್ನು ಹೈಜಾಕ್ ಮಾಡಿದಾಗ, ನೀರಜಾ ಭಾನೋಟ್ ಅವರು ಪ್ಯಾನ್ ಆಮ್ ಫ್ಲೈಟ್ 73ರಲ್ಲಿ ಹಿರಿಯ ಗಗನಸಖಿಯಾಗಿದ್ದರು.

ಅಪಹರಣಕಾರರ ಗುಂಡಿನ ದಾಳಿ ಆರಂಭವಾದಾಗ, ನೀರಜಾ ಭಾನೋಟ್ ಅವರು ಪ್ರಯಾಣಿಕರು ಸುರಕ್ಷಿತವಾಗಿ ಹೊರಬರಲು ಸಹಾಯ ಮಾಡಿದರು. ಕೊನೆಯಲ್ಲಿ ಮೂವರು ಮಕ್ಕಳನ್ನು ರಕ್ಷಿಸುವಾಗ ಅವರು ಗುಂಡಿನ ದಾಳಿಗೆ ಬಲಿಯಾಗಿ ತಮ್ಮ ಪ್ರಾಣ ಕಳೆದುಕೊಂಡರು. ವಿಮಾನದಲ್ಲಿದ್ದ 379 ಜನರಲ್ಲಿ 359 ಜನರು ನೀರಜಾ ಭಾನೋಟ್ ಅವರ ಸಾಹಸದಿಂದ ಬದುಕುಳಿದರು.

2026ರಲ್ಲಿ ಕ್ಯಾಪ್ಟನ್ ಸ್ಮಿಟ್ ಮಚ್ಚರ್ ದುಬೈನಿಂದ ಟೆಲ್ ಅವೀವ್‌ಗೆ ಹಾರುತ್ತಿದ್ದ ಫ್ಲೈದುಬೈ ವಿಮಾನದ ಪೈಲಟ್ ಆಗಿದ್ದರು. ಇವರ ಮೇಲೆ ಸಹ ಪೈಲಟ್ ದಾಳಿ ಮಾಡಿ ಇರಿದಿದ್ದಾರೆ. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರೂ, ಮಚ್ಚರ್ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು, ಪ್ರಯಾಣಿಕರು ಮತ್ತು ಸಿಬ್ಬಂದಿ ದಾಳಿಕೋರನನ್ನು ತಡೆಯಲಿ ಹಾಗೂ ಈ ಹೈಜಾಕ್ ಸಾಹಸವನ್ನು ತಡೆಯುವಲ್ಲಿ ಯಶಸ್ವಿಯಾದರು. ವಿಮಾನವನ್ನು ಸೌದಿ ಅರೇಬಿಯಾದಲ್ಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲು ಹಾಗೂ ವಿಮಾನದಲ್ಲಿದ್ದ 27 ಮಕ್ಕಳು ಸೇರಿದಂತೆ ಎಲ್ಲಾ 174 ಪ್ರಯಾಣಿಕರನ್ನು ಉಳಿಸಿಕೊಳ್ಳಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು. ಈ ಇಬ್ಬರು ಭಾರತೀಯರ ಸಾಹಸದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಚರ್ಚೆ ನಡೆಯುತ್ತಿದೆ.

ನೀರಜಾ ಭಾನೋಟ್ ಅವರಿಗೆ ಭಾರತ ಸರ್ಕಾರವು ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಮರಣೋತ್ತರವಾಗಿ ನೀಡಿ ಗೌರವಿಸಿದೆ. ಇವರು ಈ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ವಯಸ್ಸಿನ ಹಾಗೂ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+