ಅಮರೀಂದರ್ ಪ್ರಮಾಣ ವಚನ, ಸಿದ್ದು ಉಪಮುಖ್ಯಮಂತ್ರಿ?

Posted By:
Subscribe to Oneindia Kannada

ಚಂಡಿಘರ್ ಮಾರ್ಚ್ 16: 10 ವರ್ಷದ ನಂತರ ಮೊಟ್ಟ ಮೊದಲ ಬಾರಿಗೆ ಪಂಜಾಬಿನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರುತ್ತಿದೆ. ಇಂದು ಕ್ಯಾ.ಅಮರೀಂದರ್ ಸಿಂಗ್ ಪಂಜಾಬಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಿಜಯೇಂದ್ರ್ ಪಾಲ್ ಸಿಂಗ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಅಮರೀಂದರ್ ಸೀಂಗ್ ಅವರೊಂದಿಗೆ ಕಾಂಗ್ರೆಸ್ಸಿನ ಇತರ 10 ಶಾಸಕರು ಸಹ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಳೆದ ವರ್ಷ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ನವಜೋತ್ ಸಿಂಗ್ ಸಿದ್ದು ಸಹ ಇಂದು ಪ್ರಮಾಣವಚನ ಸ್ವೀಕರಿಸಿದ್ದು ವಿಶೇಷ.[ಗೋವಾ ಮುಖ್ಯಮಂತ್ರಿಯಾಗಿ ಪರಿಕ್ಕರ್ ಮಂಗಳವಾರ ಪ್ರಮಾಣ]

Captain Amareender sing took oath as Chief minister of Punjab today

ಅಮರೀಂದರ್ ಸಿಂಗ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಸಿದ್ದು ಪಂಜಾಬ್ ಸರ್ಕಾರದ ಆಯಕಟ್ಟಿನ ಹುದ್ದೆಯನ್ನೇ ಅಲಂಕರಿಸುತ್ತಾರೆ ಎಂಬ ಸುದ್ದಿ ಎಲ್ಲೆಡೆಯಿಂದ ಕೇಳಿಬರುತ್ತಿದೆ. ಸಿದ್ದು ಉಪಮುಖ್ಯಮಂತ್ರಿ ಹುದ್ದೆಯನ್ನೇ ಅಲಂಕರಿಸುತ್ತಾರೆ ಎಂಬ ಸುದ್ದಿಯೂ ದಟ್ಟವಾಗಿದೆ.[ಉತ್ತರ ಪ್ರದೇಶದ ಮುಂದಿನ ಮುಖ್ಯಮಂತ್ರಿ ರಾಜನಾಥ್ ಸಿಂಗ್?]

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ನಂತರ ಅಧಿಕಾರ ಪಡೆಯುತ್ತಿರುವ ಏಕೈಕ ಕಾಂಗ್ರೆಸ್ ಸರ್ಕಾರದ ಪದಗ್ರಹಣಕ್ಕೆ ಸಾಕ್ಷಿಯಾದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Captain Amareender sing took oath as Chief minister of Punjab today. 10 MLAs also took oath with him. Navjoth Sing Siddhu is one among them.
Please Wait while comments are loading...