Delhi Weather: ರಾಷ್ಟ್ರ ರಾಜಧಾನಿಗೆ ಚಳಿ ಕಂಟಕ, 6 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು
ನವದೆಹಲಿ: ರಾಷ್ಟ್ರ ರಾಜಧಾನಿಗೆ ಒಂದಲ್ಲ ಒಂದು ಸಂಕಷ್ಟ ಎದುರಾಗುತ್ತಾ ಇದ್ದು, ಸಾಲು ಸಾಲು ಕಂಟಕ ದೆಹಲಿ ಜನರನ್ನು ಕಾಡುತ್ತಲೇ ಇದೆ. ಒಂದು ಕಡೆ ಮಾಲಿನ್ಯದ ಪರಿಣಾಮ, ಈಗಾಗಲೇ ಸಾವಿರಾರು ಜನರು ಆಸ್ಪತ್ರೆ ಸೇರಿದ್ಧಾರೆ. ಹೀಗಿದ್ದಾಗ ದೆಹಲಿ 6 ವರ್ಷಗಳಲ್ಲೇ ಅತ್ಯಂತ ಶೀತಮಯ ಡಿಸೆಂಬರ್ ದಿನವನ್ನು ದಾಖಲಿಸಿದೆ. 2025 ಚಳಿಗಾಲವು ದೆಹಲಿಯ ಜನರ ಪಾಲಿಗೆ ತೀವ್ರ ಆಘಾತ ತಂದೊಡ್ಡಿದ್ದು, ಗರಿಷ್ಠ ತಾಪಮಾನ 14.2 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಈ ಬಗ್ಗೆ ಬಿಡುಗಡೆ ಮಾಡಿರುವ ಮಾಹಿತಿ ಗಮನ ಸೆಳೆದಿದೆ.
ಐಎಂಡಿ ಮಾಹಿತಿಯಂತೆ ದೆಹಲಿ ನಗರವು ಕೊನೇ ಬಾರಿಗೆ ಕಡಿಮೆ ಗರಿಷ್ಠ ತಾಪಮಾನ ದಾಖಲಿಸಿದ್ದು 2019ರ ಡಿಸೆಂಬರ್ 31 ರಂದು, ಆಗ ಗರಿಷ್ಠ ತಾಪಮಾನವು 9.4 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿತ್ತು. ಈಗ ಮತ್ತೆ 14.2 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ ಕಂಡಿದೆ. ವರ್ಷದ ಕೊನೆಯ ದಿನವಾದ ಬುಧವಾರ ಗರಿಷ್ಠ ತಾಪಮಾನ 14.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ತಾಪಮಾನ ಸಾಮಾನ್ಯಕ್ಕಿಂತ ಸುಮಾರು 6.2 ಡಿಗ್ರಿ ಸೆಲ್ಸಿಯಸ್ ಕಡಿಮೆ ಆಗಿದೆ ಎಂದು ಮಾಹಿತಿ ನೀಡಲಾಗಿದೆ. ಹಾಗೇ ಪ್ರಸಕ್ತ ಚಳಿಗಾಲದ ಅವಧಿಯಲ್ಲಿ ಮಾಲಿನ್ಯ ಕೂಡ ದೆಹಲಿ ಜನರನ್ನು ಇನ್ನಿಲ್ಲದಂತೆ ಕಾಡಿದೆ.

ಮಾಲಿನ್ಯದ ಕಾರಣಕ್ಕೆ ನಲುಗಿದ ದೆಹಲಿ
ಚಳಿಯ ಜೊತೆ ದೆಹಲಿ ಜನರಿಗೆ ವಿಪರೀತ ಮಾಲಿನ್ಯ ಕೂಡ ಸಾಕಷ್ಟು ಸಮಸ್ಯೆ ಮಾಡುತ್ತಾ ಇದೆ. ಭಾರತದಲ್ಲಿ ವಾಯು ಮಾಲಿನ್ಯ ಎಂಬುದು ದೊಡ್ಡ ಪಿಡುಗಾಗಿ ಪರಿಣಮಿಸಿದೆ, ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿ ಪರಿಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಗಿದೆ. ವಾಯು ಮಾಲಿನ್ಯ ಪರಿಣಾಮ ಈಗ ದೆಹಲಿ ಜನ ಊರು ಬಿಡುವಂತೆ ಆಗಿದ್ದು, ಸಾವಿರಾರು ಜನ ಉಸಿರಾಡಲು ಪರದಾಡುತ್ತಾ ಆಸ್ಪತ್ರೆ ಸೇರಿದ್ದಾರೆ. ಚಳಿಗಾಲ ಮುಗಿಯಲು ಇನ್ನೂ ಸಮಯ ಬಾಕಿ ಇದ್ದು, ಮುಂದಿನ ದಿನಗಳಲ್ಲಿ ಈ ಮಾಲಿನ್ಯ ಪ್ರಮಾಣ ಇಳಿಕೆ ಆಗಲಿ ಎಂದು ಬೇಡುತ್ತಿದ್ದಾರೆ ಜನ.
ಕೇಂದ್ರ & ರಾಜ್ಯ ಸರ್ಕಾರಗಳಿಂದ ಕ್ರಮ
ಭಾರತದ ಹೃದಯ ಎಂದು ಕರೆಸಿಕೊಳ್ಳುವ ದೆಹಲಿ ವಾತಾವರಣ ಹಾಳಾಗುತ್ತಾ ಹೋಗುತ್ತಿರುವುದು ಭಾರತೀಯರ ನಿದ್ದೆಗೆಡಿಸಿದೆ. ದೆಹಲಿ ಮಾಲಿನ್ಯ ಸುಧಾರಿಸುವುದು ಹಾಗೂ ಅಲ್ಲಿನ ವಾತಾವರಣವು ಸುಧಾರಿಸುವುದು ಯಾವಾಗ? ಎಂಬ ಚರ್ಚೆ ಪದೇ ಪದೇ ನಡೆಯುತ್ತಲೇ ಇರುತ್ತದೆ. ಅದರಲ್ಲೂ ಚಳಿಗಾಲದ ಸಮಯದಲ್ಲಿ ದೆಹಲಿ ನಿವಾಸಿಗಳು ಊರು ಬಿಟ್ಟು ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋಗುವ ಪ್ರಕ್ರಿಯೆ ಕೂಡ ಸಾಗಿ ಬಂದಿದೆ.
ಹೀಗಾಗಿ ಕೇಂದ್ರ & ರಾಜ್ಯ ಸರ್ಕಾರಗಳು ಸೂಕ್ತವಾದ ಕ್ರಮ ಕೈಗೊಂಡು, ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸುತ್ತಿವೆ. ಆದರೂ ಮಾಲಿನ್ಯ ಮಾತ್ರ ಇನ್ನೂ ಹಿಡಿತಕ್ಕೆ ಸಿಗುತ್ತಿಲ್ಲ, ಮಹಿಳೆಯರು ಮತ್ತು ಮಕ್ಕಳು ಸೇರಿ ವೃದ್ಧರಿಗೂ ದೆಹಲಿ ಮಾಲಿನ್ಯ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಏನಾದರೂ ಮಾಡಿ ಮಾಲಿನ್ಯ ನಿಯಂತ್ರಣ ಮಾಡಬೇಕು ಎಂಬ ಪ್ರಯತ್ನ ಈಗ ಸಾಗಿದೆ.












Click it and Unblock the Notifications