• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅನ್‌ಲಾಕ್‌ನತ್ತ ಹಲವು ರಾಜ್ಯಗಳು; ಕೇಂದ್ರದಿಂದ ಪತ್ರ

|
Google Oneindia Kannada News

ನವದೆಹಲಿ, ಜೂನ್ 19: ದೇಶದಲ್ಲಿ ಕೊರೊನಾ ಎರಡನೇ ಅಲೆ ತಗ್ಗುತ್ತಿದ್ದು, ಲಾಕ್‌ಡೌನ್ ಹೇರಿದ್ದ ಹಲವು ರಾಜ್ಯಗಳಲ್ಲಿ ಈಗಾಗಲೇ ಅನ್‌ಲಾಕ್ ಪ್ರಕ್ರಿಯೆ ಶುರುವಾಗಿದೆ. ರಾಜ್ಯಗಳಲ್ಲಿ ಕೊರೊನಾ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ. ಈ ನಡುವೆ ಕೊರೊನಾ ಮೂರನೇ ಅಲೆ ಎಚ್ಚರಿಕೆಯನ್ನೂ ತಜ್ಞರು ಕೊಟ್ಟಿದ್ದಾರೆ. ಹೀಗಾಗಿ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದೆ.

ಅನ್‌ಲಾಕ್‌ ನಂತರ ನಿರ್ಲಕ್ಷ್ಯ ವಹಿಸಿ ಮತ್ತೆ ಸೋಂಕಿನ ಹೆಚ್ಚಳಕ್ಕೆ ಕಾರಣವಾಗುವುದನ್ನು ತಡೆಯಬೇಕಿದೆ. ಕೊರೊನಾ ನಿಯಮಾವಳಿಗಳ ಕಟ್ಟುನಿಟ್ಟಿನ ಪಾಲನೆಯೆಡೆಗೆ ನಿಗಾ ವಹಿಸಬೇಕೆಂದು ಸೂಚಿಸಿದೆ. ಟೆಸ್ಟ್‌-ಟ್ರ್ಯಾಕ್-ಟ್ರೀಟ್ ಲಸಿಕಾ ಕಾರ್ಯಸೂಚಿಯನ್ನು ಅನುಸರಿಸುವಂತೆ ತಿಳಿಸಿದೆ.

29 ರಾಷ್ಟ್ರಗಳನ್ನು ಕಾಡುತ್ತಿರುವ ಕೊರೊನಾವೈರಸ್ ಹೊಸ ರೂಪಾಂತರ ತಳಿ ಲ್ಯಾಂಬ್ಡಾ! 29 ರಾಷ್ಟ್ರಗಳನ್ನು ಕಾಡುತ್ತಿರುವ ಕೊರೊನಾವೈರಸ್ ಹೊಸ ರೂಪಾಂತರ ತಳಿ ಲ್ಯಾಂಬ್ಡಾ!

ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಕೊರೊನಾ ದಿನನಿತ್ಯದ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ. ಶನಿವಾರ, ಕಳೆದ 24 ಗಂಟೆಗಳಲ್ಲಿ 60,753 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ದಿನ 97,743 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಇಲ್ಲಿಯವರೆಗೆ 3,85,137 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಒಟ್ಟು 2,98,23,546 ಪ್ರಕರಣಗಳಿದ್ದು, ಇದುವರೆಗೆ 2,86,78,390 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯಕ್ಕೆ 7,60,019 ಸಕ್ರಿಯ ಪ್ರಕರಣಗಳಿದ್ದು, 27,23,88,783 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ.

English summary
As India begins unlock process, the central government has written to states, asking them to ensure adhering to Covid appropriate behaviour,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X