ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭ್ಯರ್ಥಿಗಳ ಚುನಾವಣಾ ವೆಚ್ಚ ಏರಿಕೆ ಮಾಡಿದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಅಕ್ಟೋಬರ್ 21: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಏರಿಕೆ ಮಾಡಲಾಗಿದೆ. ಪ್ರಸ್ತುತ ನಡೆಯುತ್ತಿರುವ ಬಿಹಾರ ವಿಧಾನಸಭೆ ಚುನಾವಣೆ, ವಿವಿಧ ಕ್ಷೇತ್ರಗಳ ಉಪ ಚುನಾವಣೆಗೂ ಇದು ಅನ್ವಯವಾಗಲಿದೆ.

ಚುನಾವಣಾ ಆಯೋಗದ ಶಿಫಾರಸಿನ ಅನ್ವಯ ಕೇಂದ್ರ ಸರ್ಕಾರ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಶೇ 10ರಷ್ಟು ಹೆಚ್ಚಳ ಮಾಡಿದೆ. ಕರ್ನಾಟಕದ ರಾಜರಾಜೇಶ್ವರಿ ನಗರ, ಶಿರಾ ಕ್ಷೇತ್ರದ ಉಪ ಚುನಾವಣೆಗೂ ಸಹ ಈ ಏರಿಕೆ ಅನ್ವಯವಾಗಲಿದೆ.

ಬಿಹಾರ ಚುನಾವಣಾ ಸಮೀಕ್ಷೆ; ನಿತೀಶ್‌ಗೆ ಮತ್ತೊಂದು ಅವಕಾಶ ಬೇಕೆ?ಬಿಹಾರ ಚುನಾವಣಾ ಸಮೀಕ್ಷೆ; ನಿತೀಶ್‌ಗೆ ಮತ್ತೊಂದು ಅವಕಾಶ ಬೇಕೆ?

ಚುನಾವಣಾ ವೆಚ್ಚದ ಮಿತಿಯನ್ನು ಶೇ 10ರಷ್ಟು ಏರಿಕೆ ಮಾಡಬೇಕು ಎಂದು ಚುನಾವಣಾ ಆಯೋಗ ಶಿಫಾರಸು ಮಾಡಿತ್ತು. ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಲೋಕಸಭೆ ಚುನಾವಣೆಗೆ ಹಿಂದೆ ಅಭ್ಯರ್ಥಿ 70 ಲಕ್ಷ ರೂ. ಖರ್ಚು ಮಾಡಬಹುದಿತ್ತು, ಅದನ್ನು ಈಗ 77 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.

ಆರ್. ಆರ್. ನಗರ ಉಪ ಚುನಾವಣೆ; ಮುನಿರತ್ನ ಅನರ್ಹಗೊಳಿಸಲು ದೂರು ಆರ್. ಆರ್. ನಗರ ಉಪ ಚುನಾವಣೆ; ಮುನಿರತ್ನ ಅನರ್ಹಗೊಳಿಸಲು ದೂರು

ವಿಧಾನಸಭೆ ಚುನಾವಣೆಗೆ ಅಭ್ಯರ್ಥಿ ಇದುವರೆಗೂ 28 ಲಕ್ಷ ರೂ. ಖರ್ಚು ಮಾಡಬಹುದಾಗಿತ್ತು. ಹೊಸ ಆದೇಶದ ಅನ್ವಯ 30.8 ಲಕ್ಷ ರೂ. ಖರ್ಚು ಮಾಡಬಹುದಾಗಿದೆ. ಚುನಾವಣಾ ಆಯೋಗದ ವೀಕ್ಷಕರು ಅಭ್ಯರ್ಥಿ ಖರ್ಚು ವೆಚ್ಚದ ಮೇಲೆ ನಿಗಾ ಇಡುತ್ತಾರೆ.

ಶಿರಾ ಉಪ ಚುನಾವಣೆ ಚಿತ್ರಣ ಬದಲಿಸಿದ ಬಿ. ವೈ. ವಿಜಯೇಂದ್ರ! ಶಿರಾ ಉಪ ಚುನಾವಣೆ ಚಿತ್ರಣ ಬದಲಿಸಿದ ಬಿ. ವೈ. ವಿಜಯೇಂದ್ರ!

ಚುನಾವಣಾ ವೆಚ್ಚ ಏರಿಕೆಯಾಗಿದೆ

ಚುನಾವಣಾ ವೆಚ್ಚ ಏರಿಕೆಯಾಗಿದೆ

ಪ್ರಸ್ತುತ ಕೋವಿಡ್ ಪರಿಸ್ಥಿತಿಯಲ್ಲಿ ಬಿಹಾರದ 248 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಇದರ ಜೊತೆಗೆ 1 ಲೋಕಸಭಾ ಕ್ಷೇತ್ರ, ವಿವಿಧ ರಾಜ್ಯಗಳ 59 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಬೇಕಾದ ಕಾರಣ ಚುನಾವಣಾ ವೆಚ್ಚವೂ ಅಧಿಕವಾಗುತ್ತಿದೆ.

ಹಲವು ನಿರ್ಬಂಧಗಳು

ಹಲವು ನಿರ್ಬಂಧಗಳು

ವಿಧಾನಸಭೆ ಚುನಾವಣೆಗೆ ಅಭ್ಯರ್ಥಿ 28 ಲಕ್ಷ ರೂ. ಖರ್ಚು ಮಾಡಬಹುದಾಗಿತ್ತು. ಆದರೆ, ಕೋವಿಡ್ ಮಾರ್ಗಸೂಚಿಯ ಪಾಲನೆ, ಪ್ರಚಾರದ ಮುಂತಾದವುಗಳಿಗೆ ಖರ್ಚು ಹೆಚ್ಚಾದ ಕಾರಣ ಅಭ್ಯರ್ಥಿಯ ಒಟ್ಟು ಖರ್ಚು ಸಹ ಹೆಚ್ಚಾಗುತ್ತಿತ್ತು. ಆದ್ದರಿಂದ, ಖರ್ಚಿನ ಮಿತಿಯನ್ನು ಶೇ 10ರಷ್ಟು ಏರಿಕೆ ಮಾಡಲಾಗಿದೆ.

ಆಯೋಗದ ಶಿಫಾರಸು

ಆಯೋಗದ ಶಿಫಾರಸು

ಚುನಾವಣಾ ಆಯೋಗ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಖರ್ಚಿನ ಮಿತಿಯನ್ನು ಶೇ 10ರಷ್ಟು ಏರಿಕೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಚುನಾವಣಾ ಆಯೋಗದ ಶಿಫಾರಸಿನ ಅನ್ವಯ ಖರ್ಚಿನ ಮಿತಿಯನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ.

ಪ್ರಕರಣ ದಾಖಲಾಗುತ್ತದೆ

ಪ್ರಕರಣ ದಾಖಲಾಗುತ್ತದೆ

ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಅವರ ಖರ್ಚಿನ ಬಗ್ಗೆ ಆಯೋಗದ ವೀಕ್ಷಕರು ಗಮನ ಇಟ್ಟಿರುತ್ತಾರೆ. ಚುನಾವಣೆ ಮುಗಿದ ಬಳಿಕ ಅಭ್ಯರ್ಥಿಗಳು ವೆಚ್ಚದ ವಿವರ ನೀಡಬೇಕು, ಇಲ್ಲವಾದರೆ ಪ್ರಕರಣ ದಾಖಲು ಮಾಡಲಾಗುತ್ತದೆ.

English summary
The union ministry of law and justice has raised the limit of poll expenses of candidates 10 per cent. It will apply for elections in Bihar and other by polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X