ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಧೇರಿ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಉದ್ಧವ್ ಠಾಕ್ರೆ ಬಣದ ಅಭ್ಯರ್ಥಿಗೆ ಅನುಮತಿ

|
Google Oneindia Kannada News

ಮುಂಬೈ, ಅ. 13: ಮುಂಬರುವ ಅಂಧೇರಿ ಪೂರ್ವ ವಿಧಾನಸಭಾ ಉಪಚುನಾವಣೆಗೆ 'ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ' ಪಕ್ಷದ ಅಭ್ಯರ್ಥಿ ರುತುಜಾ ಲಟ್ಕೆ ಅವರಿಗೆ ರಾಜೀನಾಮೆ ಅಂಗೀಕಾರ ಪತ್ರವನ್ನು ನೀಡುವಂತೆ ಮುಂಬೈ ಮಹಾನಗರ ಪಾಲಿಕೆಗೆ ಬಾಂಬೆ ಹೈಕೋರ್ಟ್ ಗುರುವಾರ ಸೂಚಿಸಿದೆ.

ಏಕನಾಥ್ ಶಿಂಧೆ ಸರ್ಕಾರವು ಅಭ್ಯರ್ಥಿಯನ್ನು ನಿಲ್ಲದಂತೆ ಮಾಡಲು ನಾಗರಿಕ ಸಂಸ್ಥೆಯ ಮೇಲೆ ಒಲವು ತೋರುತ್ತಿದೆ ಎಂದು ಆರೋಪಿಸಿರುವ ಉದ್ಧವ್ ಠಾಕ್ರೆ ಬಣಕ್ಕೆ ಈ ಆದೇಶವು ಭಾರೀ ಸಮಾಧಾನ ತಂದಿದೆ.

Breaking; 'ಎರಡು ಕತ್ತಿಗಳು ಮತ್ತು ಗುರಾಣಿ'ಯನ್ನು ಚಿಹ್ನೆಯಾಗಿ ಪಡೆದ ಏಕನಾಥ್ ಶಿಂಧೆ ಬಣBreaking; 'ಎರಡು ಕತ್ತಿಗಳು ಮತ್ತು ಗುರಾಣಿ'ಯನ್ನು ಚಿಹ್ನೆಯಾಗಿ ಪಡೆದ ಏಕನಾಥ್ ಶಿಂಧೆ ಬಣ

ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಈ ವಿಷಯದಲ್ಲಿ ತನ್ನ ವಿವೇಚನಾ ಅಧಿಕಾರವನ್ನು ಬಳಸಲು ವಿಫಲವಾದ ನಂತರ ಹೈಕೋರ್ಟ್ ನಿರ್ದೇಶನ ಬಂದಿದೆ.

ನ್ಯಾಯಮೂರ್ತಿಗಳಾದ ನಿತಿನ್ ಜಾಮ್ದಾರ್ ಮತ್ತು ಶರ್ಮಿಳಾ ದೇಶಮುಖ್ ಅವರ ವಿಭಾಗೀಯ ಪೀಠವು ಶುಕ್ರವಾರ ಬೆಳಗ್ಗೆ 11 ಗಂಟೆಯೊಳಗೆ ರಾಜೀನಾಮೆಯನ್ನು ಅಂಗೀಕರಿಸಿ ಸೂಕ್ತ ಪತ್ರವನ್ನು ನೀಡುವಂತೆ ಮಹಾನಗರ ಪಾಲಿಕೆಯ ಸಕ್ಷಮ ಪ್ರಾಧಿಕಾರಕ್ಕೆ ಸೂಚಿಸಿದೆ. "ಅಭ್ಯರ್ಥಿ ರುತುಜಾ ಲಟ್ಕೆ ನಿಮ್ಮ ಬಿಎಂಸಿ ಉದ್ಯೋಗಿ, ನೀವು ಆಕೆಗೆ ಸಹಾಯ ಮಾಡಬೇಕು" ಎಂದು ನ್ಯಾಯಾಲಯ ಹೇಳಿದೆ.

ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟ ಹೈಕೋರ್ಟ್

ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟ ಹೈಕೋರ್ಟ್

ಶಿವಸೇನೆಯ ಉದ್ಧವ್ ಠಾಕ್ರೆ ಬಣದ ರುತುಜಾ ಲಟ್ಕೆ ಸಲ್ಲಿಸಿದ ರಾಜೀನಾಮೆಯನ್ನು ನಿರ್ಧರಿಸಲು ಏನು ತೊಂದರೆ ಎಂದು ಮುಂಬೈ ಮಹಾನಗರ ಪಾಲಿಕೆ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಅನಿಲ್ ಸಾಖರೆ ಅವರನ್ನು ಈ ಹಿಂದೆ ಕೇಳಿದ್ದರು. ಶುಕ್ರವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು. ಈ ಆದೇಶ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಲಟ್ಕೆ ಅವರಿಗೆ ನಾಮಪತ್ರ ಸಲ್ಲಿಸಲು ದಾರಿ ಮಾಡಿಕೊಡಲಿದೆ.

ಅಭ್ಯರ್ಥಿ ರುತುಜಾ ಲಟ್ಕೆ ಅವರ ಮನವಿಯ ನಂತರ, ಹೈಕೋರ್ಟ್ ಗುರುವಾರ ಪೌರ ಸಂಸ್ಥೆಗೆ ತನ್ನ ಅಂಗೀಕಾರ ಪತ್ರವನ್ನು ನಾಳೆ ಬೆಳಗ್ಗೆ 11 ಗಂಟೆಗೆ ನೀಡುವಂತೆ ಆದೇಶಿಸಿದೆ. ಪೌರಾಯುಕ್ತ ಇಕ್ಬಾಲ್ ಚಹಲ್‌ಗೆ ಛೀಮಾರಿ ಹಾಕಿದ ನ್ಯಾಯಾಲಯ, ಪೌರಾಯುಕ್ತರು ತಮ್ಮ ವಿವೇಚನೆಯನ್ನು ಏಕೆ ಬಳಸುತ್ತಿಲ್ಲ ಮತ್ತು ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇದು ನ್ಯಾಯಾಲಯದ ಮೆಟ್ಟಿಲೇರಬೇಕಾದ ವಿಷಯವೂ ಅಲ್ಲ!

ಇದು ನ್ಯಾಯಾಲಯದ ಮೆಟ್ಟಿಲೇರಬೇಕಾದ ವಿಷಯವೂ ಅಲ್ಲ!

''ಒಬ್ಬ ನೌಕರ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಬೇಕೆಂದರೆ ಏನು ತೊಂದರೆ? ಅರ್ಜಿದಾರ ಗುಮಾಸ್ತರು. ಇದು ಕೇವಲ ಉದ್ಯೋಗದಾತ-ನೌಕರರ ವಿವಾದ. ಇದು ನ್ಯಾಯಾಲಯದ ಮೆಟ್ಟಿಲೇರಬೇಕಾದ ವಿಷಯವೂ ಅಲ್ಲ. ಆಯುಕ್ತರು ಇಷ್ಟೊತ್ತಿಗೆ ಅದನ್ನು ಮಾಡಬೇಕಿತ್ತು'' ಎಂದು ನ್ಯಾಯಮೂರ್ತಿಗಳಾದ ನಿತಿನ್ ಜಾಮ್ದಾರ್ ಮತ್ತು ಶರ್ಮಿಳಾ ದೇಶಮುಖ್ ಅವರ ಪೀಠ ಹೇಳಿದೆ.

ರುತುಜಾ ಲಟ್ಕೆ ಅವರು ಈ ವರ್ಷ ನಿಧನರಾದ ಶಿವಸೇನೆಯ ಹಾಲಿ ಶಾಸಕ ರಮೇಶ್ ಲಟ್ಕೆ ಅವರ ಪತ್ನಿಯಾಗಿದ್ದು, ಉಪಚುನಾವಣೆ ಅನಿವಾರ್ಯವಾಗಿದೆ. ಅಭ್ಯರ್ಥಿಯು ಸೆಪ್ಟೆಂಬರ್ 2 ರಂದು ರಾಜೀನಾಮೆ ನೀಡಿದ್ದರು. ಕಾಗದದಲ್ಲಿ ದೋಷವಿತ್ತು ಹೀಗಾಗಿ ಅವರು ಹೊಸ ರಾಜೀನಾಮೆ ನೀಡಬೇಕಾಗಿತ್ತು. ಆದರೆ BMC ಅದನ್ನು ಸ್ವೀಕರಿಸದೆ ನುಣುಚಿಕೊಳ್ಳುತ್ತಿದೆ ಎಂದು ಠಾಕ್ರೆ ಬಣವು ಆರೋಪಿಸಿತ್ತು.

ಒತ್ತಡ ಆರೋಪಿ ನಿರಾಕರಿಸಿದ ಬಿಎಂಸಿ ಆಯುಕ್ತ

ಒತ್ತಡ ಆರೋಪಿ ನಿರಾಕರಿಸಿದ ಬಿಎಂಸಿ ಆಯುಕ್ತ

ಉಪಚುನಾವಣೆಗೆ ತನ್ನ ಉಮೇದುವಾರಿಕೆಯನ್ನು ಹಾಳುಮಾಡಲು ಉದ್ಯೋಗಿಯಾಗಿರುವ ರುತುಜಾ ಲಟ್ಕೆ ರಾಜೀನಾಮೆ ನೀಡುವುದನ್ನು ವಿಳಂಬಗೊಳಿಸಲು ಮುಂಬೈ ಮಹಾನಗರ ಪಾಲಿಕೆ ಮೇಲೆ ರಾಜಕೀಯ ಒತ್ತಡ ಹಾಕಲಾಗುತ್ತಿದೆ ಎಂದು ಉದ್ಧವ್ ಬಣ ಆರೋಪ ಮಾಡಿದೆ. ಆದರೆ, ಬಿಎಂಸಿ ಆಯುಕ್ತ ಐ ಎಸ್ ಚಹಾಲ್ ಯಾವುದೇ ರಾಜಕೀಯ ಒತ್ತಡವನ್ನು ನಿರಾಕರಿಸಿದ್ದರು.

ಶಿವಸೇನೆಯ ಶಿಂಧೆ ಗುಂಪು ಮತ್ತು ಅದರ ಮಿತ್ರ ಪಕ್ಷ ಬಿಜೆಪಿ ಎರಡೂ ನಾಗರಿಕ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿರಾಕರಿಸಿವೆ. ಆದರೆ ಅಂಧೇರಿ ಪೂರ್ವದ ಉಪಚುನಾವಣೆಗೂ ಮುನ್ನ ಶಿವಸೇನೆಯ ಎರಡು ಬಣಗಳು ಹೆಸರು ಮತ್ತು ಚುನಾವಣಾ ಚಿಹ್ನೆಯ ಬಗ್ಗೆ ತಲೆ ಕೆಡಿಸಿಕೊಂಡಿವೆ.

ಕೆಲಸ ಮಾಡಲು ಕಚೇರಿಗೆ ಹಾಜರಾಗುತ್ತಿರಲಿಲ್ಲ ಎಂದ ಸಂಸ್ಥೆ

ಕೆಲಸ ಮಾಡಲು ಕಚೇರಿಗೆ ಹಾಜರಾಗುತ್ತಿರಲಿಲ್ಲ ಎಂದ ಸಂಸ್ಥೆ

ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಅಭ್ಯರ್ಥಿ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಕುರಿತು ಇಲಾಖಾ ತನಿಖೆಯನ್ನು ಉಲ್ಲೇಖಿಸಿ, 30 ದಿನಗಳ ಮೊದಲು ನಿರ್ಧಾರ ತೆಗೆದುಕೊಳ್ಳುವುದಾಗಿ ಗುರುವಾರ ನ್ಯಾಯಾಲಯದಲ್ಲಿ ಮಹಾನಗರ ಪಾಲಿಕೆ ಪರವಾಗಿ ಒತ್ತಾಯಿಸಿತ್ತು.

ಈ ವೇಳೆ "ಕೆಲಸ ಮಾಡುವಾಗ ಆಕೆ ಎಂದಿಗೂ ಕಚೇರಿಗೆ ಹಾಜರಾಗುತ್ತಿರಲಿಲ್ಲ. ಆಕೆ ಕೇವಲ ಸಂಪರ್ಕಕ್ಕಾಗಿ ಮಾತ್ರ ಕೆಲಸ ಮಾಡುತ್ತಿದ್ದಳು" ಎಂದು ನಾಗರಿಕ ಮಂಡಳಿ ವಾದಿಸಿತ್ತು. ನಾಗರಿಕ ಸಂಸ್ಥೆಯ ವಾದವನ್ನು ಒಂದು ಕುತಂತ್ರ ಎಂದು ಕರೆದ ರುತುಜಾ ಲಟ್ಜೆ ,ಇದು ಅಸಮಾಧಾನದ ದೂರು ಮತ್ತು ಬೇರೊಬ್ಬರ ಮಾರ್ಗದರ್ಶನದ ಆಧಾರದ ಮೇಲೆ ಮಾಡಲಾಗಿದೆ ಎಂದು ವಾದಿಸಿದ್ದರು.

ಗುರುವಾರ, ಠಾಕ್ರೆ ಬಣವು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಶಿಂಧೆ ಪಾಳಯದ ಪರವಾಗಿ ಪಕ್ಷಪಾತ ಮಾಡಿದೆ ಎಂದು ಆರೋಪಿಸಿದೆ.

English summary
Candidate of Uddhav Thackeray faction was cleared to contest the Mumbai by-elections. Bombay high court on Thursday directed the Mumbai civic body to issue a letter of acceptance of the resignation to Rutuja Latke. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X