ಇನ್ನು ಕ್ಯಾನ್ಸರ್ ಭಯವಿಲ್ಲ: ಜೋಶ್‌ನಿಂದ ಯಶಸ್ವಿ ಜಾಗೃತಿ ಅಭಿಯಾನ

ಮ್ಯಾಶ್ ಪ್ರಾಜೆಕ್ಟ್ ಫೌಂಡೇಶನ್ ಗುರುಗ್ರಾಮದ ಮೆದಾಂತ ಮೆಡಿಸಿಟಿ ಹಾಸ್ಪಿಟಲ್, ಲಂಗ್ ಕೇರ್ ಫೌಂಡೇಶನ್ ಸಹಯೋಗದೊಂದಿಗೆ ಜೋಶ್ ವಿಶ್ವ ಕ್ಯಾನ್ಸರ್ ದಿನದಂದು ವಿವಿಧ ರೀತಿಯ ಕ್ಯಾನ್ಸರ್‌ಗಳು, ಅವುಗಳ ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ಅರಿವು ಮೂಡಿಸಿದೆ.
ಜೋಶ್, ಭಾರತದ ವೇಗವಾಗಿ ಬೆಳೆಯುತ್ತಿರುವ ಮತ್ತು ಹೆಚ್ಚು ಜನಪ್ರಿಯವಾದ ಕಿರು-ವೀಡಿಯೊ ಅಪ್ಲಿಕೇಶನ್ ಆಗಿದ್ದು, ಪ್ರಶಸ್ತಿ ವಿಜೇತ ಸಾಮಾಜಿಕ ಉದ್ಯಮವಾದ ಮ್ಯಾಶ್ ಪ್ರಾಜೆಕ್ಟ್ ಫೌಂಡೇಶನ್ ಜೊತೆಯಾಗಿ ಈ ಕ್ಯಾನ್ಸರ್ ಜಾಗೃತಿ ಅಭಿಯಾನ ಆರಂಭ ಮಾಡಿದೆ. 4ನೇ ಫೆಬ್ರವರಿ 2022 ರಿಂದ #Cancerseladai ಅಭಿಯಾನವನ್ನು ಆಯೋಜಿಸಲು Lung Care Foundation ಜೊತೆಗೆ ಕೈಜೋಡಿಸಿದೆ. ಕ್ಯಾನ್ಸರ್ ಮತ್ತು ಅದರ ಚಿಕಿತ್ಸೆಗಳ ಬಗ್ಗೆ ಯುವಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.
ಕಿರು-ವೀಡಿಯೋ ಆಪ್ ಆದ ಜೋಶ್ ಮೂಲಕ ಅಭಿಯಾನವು ಪ್ರೇಕ್ಷಕರಲ್ಲಿ, ವಿಶೇಷವಾಗಿ ಯುವಜನರಲ್ಲಿ ಅರಿವು ಮೂಡಿಸಲು ಮತ್ತು ಕ್ಯಾನ್ಸರ್ ಬಗ್ಗೆ ಶಿಕ್ಷಣದ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ವೈದ್ಯರು ಸಹ ಕ್ಯಾನ್ಸರ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದರೆ ಕ್ಯಾನ್ಸರ್‌ನಿಂದ ಹೊರಬರಲು ಸಾಧ್ಯ ಎಂಬುವುದರ ಬಗ್ಗೆ ವೈದ್ಯರುಗಳು ವಿವರಣೆ ನೀಡಿದ್ದಾರೆ. ವೀಡಿಯೋಗಳು 140,000+ ಜನರನ್ನು ತಲುಪಿದ್ದು, 44,000+ ಜೋಷ್ ಬಳಕೆದಾರರು ಲೈಕ್ ಮಾಡಿದ್ದಾರೆ.
ಅಭಿಯಾನದಲ್ಲಿ ಯುವಜನರಿಗೆ ಕ್ಯಾನ್ಸರ್ ಬಗ್ಗೆ, ಅದರ ಚಿಕಿತ್ಸೆಯ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದೆ. ಕ್ಯಾನ್ಸರ್ ಎಂಬುದು ಈಗ ಭಾರತದಲ್ಲಿ ವ್ಯಾಪಕವಾಗಿ ಹೆಚ್ಚಾಗಿರುವ ರೋಗವಾಗಿದ್ದು, ಅದರ ಚಿಕಿತ್ಸೆಯ ಬಗ್ಗೆ ಹಲವಾರು ಮಂದಿಗೆ ಮಾಹಿತಿ ಇಲ್ಲ. ಈ ನಿಟ್ಟಿನಲ್ಲಿ ಕ್ಯಾನ್ಸರ್ ಚಿಕಿತ್ಸೆಗಳು ಮತ್ತು ಕ್ಯಾನ್ಸರ್ ನಂತರದ ಆರೈಕೆ ಬಗ್ಗೆ ಈ ಅಭಿಯಾನದ ಮೂಲಕ ಚರ್ಚೆ ಮಾಡಲಾಗಿದೆ.
ಈ ಬಗ್ಗೆ ಲಂಗ್ ಕೇರ್ ಫೌಂಡೇಶನ್‌ನ ಸಂಸ್ಥಾಪಕ, ರಾಜೀವ್ ಖುರಾನಾ ಮಾತನಾಡಿ, "ಕ್ಯಾನ್ಸರ್ ಕಾಯಿಲೆಗಳಿಂದ ಉಂಟಾಗುವ ತೀವ್ರತೆ ಮತ್ತು ಪರಿಣಾಮವು ಭಾರತದಲ್ಲಿ ವಿವಿಧ ವಯೋಮಾನದವರಲ್ಲಿ ಸ್ಥಿರವಾಗಿ ಹೆಚ್ಚುತ್ತಿದೆ. ರೋಗಕ್ಕೆ ಚಿಕಿತ್ಸೆ ನೀಡುವ ವಿಧಾನದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಜೋಶ್ ವೇದಿಕೆಯಲ್ಲಿ ಲಂಗ್ ಕೇರ್ ಫೌಂಡೇಶನ್ ಮತ್ತು ಮ್ಯಾಶ್ ಜಂಟಿ ಅಭಿಯಾನವು ಮುಖ ವೈದ್ಯರು ಮತ್ತು ಮೆದಾಂತ ಆಸ್ಪತ್ರೆಯ ಇನ್‌ಸ್ಟಿಟ್ಯೂಟ್ ಆಫ್ ಚೆಸ್ಟ್ ಸರ್ಜರಿ ತಂಡದ ಸರಳ ಮಾಹಿತಿ ಮೂಲಕ ಕ್ಯಾನ್ಸರ್ ಬಗ್ಗೆ ಜನರಲ್ಲಿ ಜಾಗೃತಿ ಸೃಷ್ಟಿಸುವ ಪ್ರಯತ್ನವಾಗಿದೆ," ಎಂದು ತಿಳಿಸಿದ್ದಾರೆ.
ಇನ್‌ಸ್ಟಿಟ್ಯೂಟ್ ಆಫ್ ಚೆಸ್ಟ್ ಸರ್ಜರಿ- ಚೆಸ್ಟ್ ಆಂಕೊ-ಸರ್ಜರಿ ಆಂಡ್ ಲಂಗ್ ಟ್ರಾನ್ಸ್‌ಪ್ಲಾಂಟೇಶನ್‌ನ ಹಿರಿಯ ಸಲಹೆಗಾರ ಡಾ. ಹರ್ಷವರ್ಧನ್ ಪುರಿ ಮಾತನಾಡಿ, "ಮೇದಾಂತದಲ್ಲಿನ ವೈದ್ಯರು ಜೋಶ್ ಅಪ್ಲಿಕೇಶನ್‌ನೊಂದಿಗೆ ಮ್ಯಾಶ್ ಪ್ರಾಜೆಕ್ಟ್‌ನ ಸಹಯೋಗದ ಬಗ್ಗೆ ತಿಳಿದಾಗ ನಾವು ಈ ಸಹಯೋಗದ ಬಗ್ಗೆ ತುಂಬಾ ಉತ್ಸುಕರಾದೆವು. ಕ್ಯಾನ್ಸರ್‌ಗೆ ಸಂಬಂಧಿಸಿದ ವೈಜ್ಞಾನಿಕ ಮಾಹಿತಿಯನ್ನು ಸರಳ ಭಾಷೆಯಲ್ಲಿ ತಲುಪಿಸುವ ಪ್ರಯತ್ನ ಮಾಡಲಾಗಿದೆ. ಯುವಕರು ವೀಡಿಯೊವನ್ನು ಡೌನ್‌ಲೋಡ್ ಮಾಡಿದ್ದಾರೆ. ಆದ್ದರಿಂದಾಗಿ ಮಾಹಿತಿಯು ಹೆಚ್ಚು ಹರಡಿದೆ," ಎಂದು ಹೇಳಿದ್ದಾರೆ.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications